ಫಿನ್ಲೆಂಡ್‌ನಲ್ಲಿ ವಿಶ್ವದ ಮೊದಲ ಪರಮಾಣು ಕಸದ ಬುಟ್ಟಿ ಸಿದ್ಧ

KannadaprabhaNewsNetwork |  
Published : Jun 05, 2026, 01:45 AM IST
Finland

ಸಾರಾಂಶ

ಪರಮಾಣು ತ್ಯಾಜ್ಯಗಳ ಸೂಕ್ತ ವಿಲೇವಾರಿ ಇಡೀ ವಿಶ್ವಕ್ಕೆ ಸವಾಲಾಗಿರುವ ದಿನಗಳಲ್ಲಿ, ಫಿನ್ಲೆಂಡ್‌ ವಿಶ್ವದಲ್ಲಿ ಮೊದಲ ಬಾರಿಗೆ ಅಪಾಯಕಾರಿ ಪರಮಾಣು ತ್ಯಾಜ್ಯವನ್ನು 1 ಲಕ್ಷ ವರ್ಷಗಳವರೆಗೂ ಸುರಕ್ಷಿತವಾಗಿ ಸಂಗ್ರಹಿಸಿಡಬಹುದಾದ ಬೃಹತ್‌ ಭೂಗರ್ಭ ಕಸದ ಬುಟ್ಟಿಯನ್ನು ನಿರ್ಮಿಸಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಗೋಪುರಕ್ಕಿಂತಲೂ ಆಳದಲ್ಲಿ ನಿರ್ಮಿಸಲಾಗುತ್ತಿರುವ ಈ ಸಂಗ್ರಹಾಗಾರವು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.

 ಹೆಲ್ಸಿಂಕಿ (ಫಿನ್ಲೆಂಡ್‌): ಪರಮಾಣು ತ್ಯಾಜ್ಯಗಳ ಸೂಕ್ತ ವಿಲೇವಾರಿ ಇಡೀ ವಿಶ್ವಕ್ಕೆ ಸವಾಲಾಗಿರುವ ದಿನಗಳಲ್ಲಿ, ಫಿನ್ಲೆಂಡ್‌ ವಿಶ್ವದಲ್ಲಿ ಮೊದಲ ಬಾರಿಗೆ ಅಪಾಯಕಾರಿ ಪರಮಾಣು ತ್ಯಾಜ್ಯವನ್ನು 1 ಲಕ್ಷ ವರ್ಷಗಳವರೆಗೂ ಸುರಕ್ಷಿತವಾಗಿ ಸಂಗ್ರಹಿಸಿಡಬಹುದಾದ ಬೃಹತ್‌ ಭೂಗರ್ಭ ಕಸದ ಬುಟ್ಟಿಯನ್ನು ನಿರ್ಮಿಸಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಗೋಪುರಕ್ಕಿಂತಲೂ ಆಳದಲ್ಲಿ ನಿರ್ಮಿಸಲಾಗುತ್ತಿರುವ ಈ ಸಂಗ್ರಹಾಗಾರವು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ.

ಫಿನ್ಲೆಂಡ್‌, ‘ಒಂಕಲೋ’ ಎಂದು ಕರೆಯಲ್ಪಡುವ ಈ ಕಸದ ಬುಟ್ಟಿಯನ್ನು 2004ರಿಂದಲೇ ನಿರ್ಮಿಸಲು ಪ್ರಾರಂಭಿಸಿದೆ. ಈಗಾಗಲೇ ಮುಖ್ಯ ನಿರ್ಮಾಣ ಕಾರ್ಯ ಮುಗಿದಿದ್ದು, ಕಾರ್ಯಾಚರಣೆಗೆ ಅನುಮತಿ ಶೀಘ್ರದಲ್ಲೇ ಸಿಗುವ ಸಾಧ್ಯತೆ ಇದೆ. ಇದು ದೇಶದ ಪಶ್ಚಿಮ ಕರಾವಳಿಯ ಒಲ್ಕಿಲುಟೋ ದ್ವೀಪದ ಅರಣ್ಯ ಪ್ರದೇಶದಲ್ಲಿದೆ. ನೆಲದಿಂದ ಸುಮಾರು 430-433 ಮೀ. ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ.

3 ಪದರಗಳ ವ್ಯವಸ್ಥೆ:

ಪರಮಾಣು ತ್ಯಾಜ್ಯವನ್ನು ಮೊದಲು ಬೃಹತ್‌ ತಾಮ್ರದ ಡಬ್ಬದಲ್ಲಿ ಇಡುತ್ತಾರೆ. ತಾಮ್ರವು ತುಕ್ಕು ಹಿಡಿಯುವುದಿಲ್ಲ. ಈ ಡಬ್ಬವನ್ನು ನೆಲದಾಳದಲ್ಲಿರುವ ಸುರಂಗಕ್ಕೆ ಇಳಿಸಲಾಗುತ್ತದೆ. ಡಬ್ಬ ಮತ್ತು ಸುರಂಗದ ನಡುವಿನ ಪ್ರದೇಶದಲ್ಲಿ ಬೆಂಟೋನೈಟ್ ಕ್ಲೇ ಎಂಬ ಮಣ್ಣನ್ನು ತುಂಬಲಾಗುತ್ತದೆ. ನೀರು ಸೇರಿದಾಗ ಈ ಮಣ್ಣು ಸಿಮೆಂಟ್‌ ರೀತಿ ಗಟ್ಟಿಯಾಗುತ್ತದೆ. ಈ ವ್ಯವಸ್ಥೆಯಲ್ಲಿ ತುಂಬಿದ ಪರಮಾಣು ತ್ಯಾಜ್ಯ 1 ಲಕ್ಷ ವರ್ಷದವರೆಗೂ ಹಾಗೆಯೇ ಇರುತ್ತದೆ. ಇದು ವಿಶ್ವದ ಅತ್ಯುತ್ತಮ ವ್ಯವಸ್ಥೆ ಎನ್ನಲಾಗುತ್ತದೆ.

ಪರಮಾಣು ತ್ಯಾಜ್ಯ ಎಂದರೇನು?:

ಅಣು ವಿದ್ಯುತ್‌ ಸ್ಥಾವರಗಳಲ್ಲಿ, ವಿದ್ಯುತ್‌ ಉತ್ಪಾದಿಸುವಾಗ ರೇಡಿಯೋ ಆ್ಯಕ್ಟಿವ್‌ ಕಿರಣಗಳು ಹೊರಸೂಸುತ್ತವೆ. ಇವುಗಳನ್ನು ಪರಮಾಣು ತ್ಯಾಜ್ಯ ಎಂದು ಕರೆಯುತ್ತಾರೆ. ಇವು ನಮ್ಮ ಕಣ್ಣಿಗೆ ಕಾಣುವುದಿಲ್ಲ, ವಾಸನೆಯೂ ಇರುವುದಿಲ್ಲ, ಆದರೆ ಬಹಳ ಹಾನಿಕಾರಕ. ಮನುಷ್ಯ ಇವುಗಳ ಸಂಪರ್ಕಕ್ಕೆ ಬಂದರೆ ಕಬ್ಬಿಣದ ರಾಡ್‌ ರೀತಿ ಕರಗಿಸಬಲ್ಲದು. ಕ್ಯಾನ್ಸರ್‌ನಂತಹ ಭೀಕರ ರೋಗಗಳನ್ನೂ ಉಂಟುಮಾಡಬಲ್ಲದು. ಈ ತ್ಯಾಜ್ಯಗಳು 1 ಲಕ್ಷ ವರ್ಷಗಳವರೆಗೂ ಅಪಾಯಕಾರಿಯಾಗಿರುತ್ತವೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಮಸ್ಕ್‌ ಭೂಮಿಯ ಮೇಲಿನ ಮೊದಲ ಟ್ರಿಲಿಯನೇರ್‌!
ಇಂಧನ ಮಾರುಕಟ್ಟೆ ಅನ್ನೇ ಸ್ಫೋಟಿಸಿ ಬಿಡ್ತೇವೆ : ಇರಾನ್‌