ಈಶಾನ್ಯ ರಾಜ್ಯ ಬಾಂಗ್ಲಾಕ್ಕೆ ಸೇರಿಸಿದ ಭೂಪಟ ಪಾಕ್‌ಗೆ ನೀಡಿದ ಯೂನಸ್‌!

Published : Oct 28, 2025, 06:19 AM IST
 muhammad yunus  Bangladesh

ಸಾರಾಂಶ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಅವರು ಪಾಕಿಸ್ತಾನ ಸೇನೆಯ ಜಂಟಿ ಸೇನಾ ಸಿಬ್ಬಂದಿ ಸಮಿತಿಯ ಮುಖ್ಯಸ್ಥ ಜನರಲ್‌ ಸಾಹಿರ್‌ ಶಂಶದ್‌ ಮಿರ್ಜಾ ಅವರಿಗೆ ಉಡುಗೊರೆಯಾಗಿ ನೀಡಿದ ‘ವಿಜಯದ ಕಲೆ’ (ಆರ್ಟ್‌ ಆಫ್‌ ಟ್ರಯಂಪ್‌) ಕಲಾಕೃತಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

 ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಅವರು ಪಾಕಿಸ್ತಾನ ಸೇನೆಯ ಜಂಟಿ ಸೇನಾ ಸಿಬ್ಬಂದಿ ಸಮಿತಿಯ ಮುಖ್ಯಸ್ಥ ಜನರಲ್‌ ಸಾಹಿರ್‌ ಶಂಶದ್‌ ಮಿರ್ಜಾ ಅವರಿಗೆ ಉಡುಗೊರೆಯಾಗಿ ನೀಡಿದ ‘ವಿಜಯದ ಕಲೆ’ (ಆರ್ಟ್‌ ಆಫ್‌ ಟ್ರಯಂಪ್‌) ಕಲಾಕೃತಿ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವಾಗಿ ಬಿಂಬಿಸಲಾಗಿದೆ

ಈ ಮ್ಯಾಪ್‌ನಲ್ಲಿ ಅಸ್ಸಾಂ ಮತ್ತು ಭಾರತದ ಇತರೆ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವಾಗಿ ಬಿಂಬಿಸಲಾಗಿದೆ. ಈ ಉಡುಗೊರೆ ಕೇವಲ ರಾಜತಾಂತ್ರಿಕ ಸೂಚಕ ಆಗಿರಲಿಕ್ಕಿಲ್ಲ, ಉದ್ದೇಶಪೂರ್ವಕವಾಗಿ ನೀಡಿರುವಂತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಕಲಾಕೃತಿಯನ್ನು ಉಡುಗೊರೆ 

ಜನರಲ್‌ ಸಾಹಿರ್‌ ಶಂಶಾದ್‌ ಮಿರ್ಜಾ ಅವರು ಕಳೆದ ವಾರಾಂತ್ಯದಲ್ಲಿ ಢಾಕಾಗೆ ಭೇಟಿ ನೀಡಿದ್ದಾಗ ಯೂನುಸ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಈ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಾಗಿದೆ.

ಯೂನುಸ್‌ ಈಶಾನ್ಯ ಭಾರತದ ರಾಜ್ಯಗಳ ವಿಚಾರ ಎತ್ತುತ್ತಿರುವುದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದೆ ಈಶಾನ್ಯ ಭಾರತದ ರಾಜ್ಯಗಳ ಕುರಿತು ವಿದೇಶಿ ನೆಲದಲ್ಲೂ ಅವರು ಪ್ರಸ್ತಾಪ ಮಾಡಿದ್ದರು. ಏಪ್ರಿಲ್‌ನಲ್ಲಿ ಚೀನಾಗೆ ನೀಡಿದ್ದ ಮೊದಲ ಭೇಟಿಯಲ್ಲಿ ಯೂನುಸ್‌ ಅವರು ಬಾಂಗ್ಲಾ ಮಾತ್ರ ಈ ಭಾಗದಲ್ಲಿ ಸಾಗರದ ಏಕೈಕ ರಕ್ಷಕ ಎಂದು ಹೇಳಿದ್ದರು. ಈಶಾನ್ಯ ಭಾರತದ ರಾಜ್ಯಗಳು ಬಾಂಗ್ಲಾದಿಂದ ಸುತ್ತುವರಿದಿರುವ ಹಿನ್ನೆಲೆಯಲ್ಲಿ ಚೀನಾಗೆ ಈ ಪ್ರದೇಶದಲ್ಲಿ ಮಹತ್ವದ ಪಾತ್ರ ವಹಿಸುವಂತೆ ಪರೋಕ್ಷವಾಗಿ ಆಹ್ವಾನ ನೀಡಿದ್ದರು.

PREV
Read more Articles on

Recommended Stories

ಅರುಣಾಚಲ ಗಡಿಯಲ್ಲೇ ಚೀನಾದ ಅತ್ಯಾಧುನಿಕ ವೈಮಾನಿಕ ನಿಲ್ದಾಣ
ಅಲ್ಬೇನಿಯಾದ ಮೊದಲ ಎಐ ಸಚಿವೆ ಡಿಯೆಲ್ಲಾ ಈಗ ಗರ್ಭಿಣಿ