ಸಾರಾಂಶ
ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯದ ಏರ್‌ಸ್ಟ್ರಿಪ್ ಅನ್ನು ಆರಂಭಿಸಿದೆ.
ನವದೆಹಲಿ: ಭಾರತೀಯ ವಾಯುಪಡೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-16ರಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯದ ಏರ್‌ಸ್ಟ್ರಿಪ್ ಅನ್ನು ಆರಂಭಿಸಿದೆ.
ಯುದ್ಧ ಅಥವಾ ಪ್ರಾಕೃತಿಕ ವಿಕೋಪಗಳಂಥ ತುರ್ತು ಕಾಲದಲ್ಲಿ ಇಲ್ಲಿ ಹೆದ್ದಾರಿಯಲ್ಲೇ ಯುದ್ಧವಿಮಾನಗಳನ್ನು ಇಳಿಸಿ, ಅಗತ್ಯ ಕ್ರಮ ಕ್ರಮ ಜರುಗಿಸಲು ಇದು ನೆರವಾಗಲಿದೆ.
ಮಾ.18ರಂದು ಇಲ್ಲಿ ಸುಖೋಯ್-30 ಹಾಗೂ ಹಾಕ್ ಯುದ್ಧವಿಮಾನ ಇಳಿಸಿ ಏರ್‌ಸ್ಟ್ರಿಪ್‌ಗೆ ಚಾಲನೆ ನೀಡಲಾಯಿತು ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
33 ಮೀ. ಅಗಕ ಇರುವ ಹಾಗೂ 4.1 ಕಿ.ಮೀ. ಉದ್ದದ ಕಾಂಕ್ರೀಟ್ ಏರ್‌ಸ್ಟ್ರಿಪ್ ಇದಾಗಿದೆ. ಭಾರತೀಯ ವಾಯುಪಡೆ ನೀಡಿದ ಸಲಹೆಗಳನ್ನು ಆಧರಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ರಾಷ್ಟ್ರೀಯ ಹೆದ್ದಾರಿ-16ರಲ್ಲಿ ನಿರ್ಮಿಸಿದೆ.
ಇಂಥ ಹಲವು ಏರ್‌ಸ್ಟ್ರಿಪ್‌ಗಳು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವೆ. ಆಂಧ್ರಪ್ರದೇಶದಲ್ಲಿ ಇದು ಇದೇ ಮೊದಲ ಏರ್‌ಸ್ಟ್ರಿಪ್ ಆಗಿದೆ.