ಬಿಲ್‌ ಸಹಿಗೆ ರಾಷ್ಟ್ರಪತಿಗೆ ಗಡುವು : ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ?

| N/A | Published : Apr 14 2025, 01:29 AM IST / Updated: Apr 14 2025, 04:38 AM IST

ಸಾರಾಂಶ

‘ರಾಜ್ಯಪಾಲರು ಕಳಿಸಿಕೊಡುವ ವಿಧೇಯಕಗಳ ಕುರಿತು ರಾಷ್ಟ್ರಪತಿಗಳು 3 ತಿಂಗಳೊಳಗೆ ನಿರ್ಧಾರ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯಗಳು ಕೋರ್ಟ್‌ ಮೊರೆ ಹೋಗಬಹುದು’ ಎಂಬ ಸುಪ್ರೀಂ ಕೋರ್ಟ್‌ ಆದೇಶದ ಸಂಬಂಧ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ನವದೆಹಲಿ: ‘ರಾಜ್ಯಪಾಲರು ಕಳಿಸಿಕೊಡುವ ವಿಧೇಯಕಗಳ ಕುರಿತು ರಾಷ್ಟ್ರಪತಿಗಳು 3 ತಿಂಗಳೊಳಗೆ ನಿರ್ಧಾರ ಕೈಗೊಳ್ಳಬೇಕು. ತಪ್ಪಿದಲ್ಲಿ ರಾಜ್ಯಗಳು ಕೋರ್ಟ್‌ ಮೊರೆ ಹೋಗಬಹುದು’ ಎಂಬ ಸುಪ್ರೀಂ ಕೋರ್ಟ್‌ ಆದೇಶದ ಸಂಬಂಧ ಕೇಂದ್ರ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಗಡುವು ಮರುಪರಿಶೀಲನೆ ಮನವಿಯೊಂದಿಗೆ, ಪರಿಶೀಲನೆಗೆಂದು ಕಳಿಸಲಾದ ಮಸೂದೆಗೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸದಿದ್ದರೆ ರಾಜ್ಯ ಸರ್ಕಾರಗಳು ನೇರವಾಗಿ ತನ್ನ ಬಳಿ ಬರಬಹುದು ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನೂ ಮರುಪರಿಶೀಲಿಸುವಂತೆ ಕೋರಲಾಗುವುದು. ಈ ಬಗ್ಗೆ ಸರ್ಕಾರ ಉನ್ನತ ಮಟ್ಟದಲ್ಲಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಒಂದೊಮ್ಮೆ ಹೀಗಾದರೆ, ರಾಷ್ಟ್ರಪತಿಗೆ ಗಡುವು ಆದೇಶ ಹೊರಡಿಸಿದ್ದ ನ್ಯಾ। ಜೆ.ಬಿ. ಪರ್ದಿವಾಲ್‌ ಮತ್ತು ಆರ್‌. ಮಹಾದೇವನ್‌ ಅವರ ಪೀಠದೆದುರೇ ಮರುಪರಿಶೀಲನಾ ಅರ್ಜಿಯನ್ನೂ ಸಲ್ಲಿಸಬೇಕಾಗುವುದು.