ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಗೋಣಿಕೊಪ್ಪ ಪ್ರಾಥಮಿಕ ಶಾಲೆಯ ದಸರಾ ಮೈದಾನದಲ್ಲಿ ಕಾವೇರಿ ದಸರಾ ಸಮಿತಿಯ 46ನೇ ವರ್ಷದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ಭಾರತೀಯ ಪರಂಪರೆ ಸಂಸ್ಕೃತಿಗಳನ್ನು ಬಿಂಬಿಸುವ ನಾಟ್ಯಗಳು ಮೂಡಿಬಂದವು.ಖಾಸಗಿ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಮೇವಡ ಕಾವೇರಿ, ಮತ್ತಂಡ ಶರಣ್ ಅಯ್ಯಪ್ಪ, ರಾಜೀವ್ಅಗಳಿ ಅವರ ಕಂಠದಿಂದ ಮೂಡಿಬಂದ ಗಾನಸುಧೆ ಸಂಗೀತ ಪ್ರಿಯರ ರಂಜಿಸಿತು. ಗಾಯಕಿ ಕಾವೇರಿ ಅವರ ಕಂಠಸಿರಿಗೆ ಜನ ಮಾರುಹೋದರು.
ಯಾಹಾವಿ ಡಾನ್ಸ್ ಅಕಾಡೆಮಿಯ ನೃತ್ಯ ಶಿಕ್ಷಕಿ ಶ್ವೇತಾ ಸುಬ್ರಮಣಿ ಅವರ ತರಬೇತಿಯಲ್ಲಿ ಪಳಗಿದ ವಿದ್ಯಾರ್ಥಿಗಳು ನೃತ್ಯಗಳನ್ನು ಪ್ರದರ್ಶಿಸಿ ಜನಮನ ಗೆದ್ದರು.ಹಿಂದೆ ಇದ್ದ ಸರ್ಕಾರ ಜಿಲ್ಲೆಯನ್ನು ಹೇಗೆ ಅಭಿವೃದ್ಧಿಪಡಿಸಿತ್ತು ಗೊತ್ತಿಲ್ಲ. ಆದರೆ ಇಂದು ಕಾಂಗ್ರೆಸ್ ಸರ್ಕಾರ ಇಬ್ಬರು ಶಾಸಕ ವ್ಯವಸ್ಥೆಯೊಂದಿಗೆ ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿದೆ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಸದಸ್ಯೆ ಕೆ. ಪಿ. ಚಂದ್ರಕಲಾ ಹೇಳಿದರು.
ಕಾವೇರಿ ದಸರಾ ಸಮಿತಿಯ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾವೇರಿ ಕಲಾ ವೇದಿಕೆಯಲ್ಲಿ ಚಾಲನೆ ನೀಡಿ ಮಾತನಾಡಿದರು.ಮಡಿಕೇರಿಯಲ್ಲಿ ಜನರ ಅನುಕೂಲಕ್ಕಾಗಿ ಎಂ.ಆರ್. ಐ ಸ್ಕ್ಯಾನ್ ಅಳವಡಿಕೆ, ಗೋಣಿಕೊಪ್ಪದಲ್ಲಿ ಹಲವು ವರ್ಷಗಳಿಂದ ಸಾಧ್ಯವಾಗದ ಬಸ್ ನಿಲ್ದಾಣ ಕಾಮಗಾರಿಗೆ ನಡೆಯುತ್ತಿರುವುದು ಜೊತೆಗೆ ಹಲವು ವರ್ಷಗಳಿಂದ ವಿದ್ಯುತ್ ನೀರು ಬೆಳಕು ರಸ್ತೆಗಳು ಕಾಣದ ಗ್ರಾಮಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ ಬೆಳವಣಿಗೆಯ ಪರ್ವ ಎಂದು ಹೇಳಿದರು.
ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ನಾರಿ ಶಕ್ತಿ ಈ ದೇಶದ ಶಕ್ತಿಯಾಗಿದೆ. ಮಹಿಳೆ ಇದ್ದಲ್ಲಿ ಮಾತ್ರ ಆ ಕುಟುಂಬ ಮತ್ತು ಆ ಸಮಾಜ ಬೆಳವಣಿಗೆಯಾಗಲು ಸಾಧ್ಯ ಎಂದು ಹೇಳಿದರು.ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಮಹಿಳಾ ದಸರಾ ಅಧ್ಯಕ್ಷೆ ಎಂ. ಮಂಜುಳಾ, ಶಾಸಕ ಪತ್ನಿ ಅಜ್ಜಿಕುಟ್ಟೀರ ಕಾಂಚನ್, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಜಿ.ಜಾನಕಿ, ದೇವರಪುರ ಗ್ರಾಮ ಪಂಚಾಯಿತಿ, ಉಪಾಧ್ಯಕ್ಷೆ ದಮಯಂತಿ, ಮಹಿಳಾ ದಸರಾ ಸ್ಥಾಪಕ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚೈತ್ರಾ ಬಿ. ಚೇತನ್, ಸೌಮ್ಯ ಬಾಲು,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪಂಕಜ,ಕಾಫಿ ಮಂಡಳಿ ಮಾಜಿ ಸದಸ್ಯೆ ತಾರ ಅಯ್ಯಮ್ಮ, ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಯೋಗ ಗುರುಗಳು, ಪೊಡಮಾಡ ಭವಾನಿ, ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯದರ್ಶಿ ವರಲಕ್ಷ್ಮೀ, ಉಪಾಧ್ಯಕ್ಷ ಶಿವಾಜಿ, ಕೋಶಾಧಿಕಾರಿ ಚೆಪ್ಪುಡಿರ ದ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ ಮಂಜುಳಾ, ಸಂಸ್ಕ್ರತಿ ಸಮಿತಿ ಸಂಚಾಲಕರಾದ ಪಾರುವಂಗಡ ದಿಲನ್ ಚಂಗಪ್ಪ, ಸೈಕ್ಲೋನ್ ರಮೇಶ್, ಅವಿನಾಶ್ ಸಂಯೋಜಕರಾದ ಮನೆಯಪಂಡ ಶಿಲಾ ಬೋಪ್ಪಣ್ಣ, ಚಂದನ್ ಕಾಮತ್, ಸಮಿತಿ ಸದಸ್ಯರಾದ ಕೊಕ್ಕಂಡ ರೋಶನ್, ಜಪ್ಪೆಕೊಡಿ ರಾಜ ಉತ್ತಪ್ಪ, ಶೋಭಿತ್ ಪಿ.ವಿ, ಗುರುರಾಜ್, ಓಮನ, ಚಂದನ ಮಂಜುನಾಥ್ , ಅಂಕಿತ್ ಪೊನ್ನಪ್ಪ ಇದ್ದರು.
ಇಂದಿನ ಕಾರ್ಯಕ್ರಮ: 8ರಂದು ಬೆಳಗ್ಗೆ ಮಕ್ಕಳ ದಸರಾ ಪ್ರಯುಕ್ತ ಛದ್ಮವೇಷ, ಜಾನಪದ ಗೀತೆ, ಕ್ರೀಡೆಗಳು, ಬೆಳಗ್ಗಿನಿಂದ ಸಂಜೆಯತನಕ ನಡೆಯಲಿದ್ದು, ಶನಿವಾರಸಂತೆ ಡ್ರೀಮ್ ಸ್ಟಾರ್ ಡ್ಯಾನ್ಸ್, ಗೋಣಿಕೊಪ್ಪಲು ಸುಹೃತ ನೃತ್ಯ ಶಾಲೆಯಿಂದ ನೃತ್ಯ, 9 ಗಂಟೆಗೆ ಕೇರಳದ ವೈಬ್ರಂಟ್ ಮ್ಯೂಸಿಕಲ್ ಕಲಾತಂಡದಿಂದ ನಾಡನ್ ಪಾಟ್ ಮತ್ತು ಹಾಸ್ಯ ಸಂಜೆ ನಡೆಯಲಿದೆ.