ವಿದ್ಯಾರ್ಥಿಗಳ ಭವಿಷ್ಯದ ಒಳಿತು ಬಯಸುವವನೇ ನಿಜವಾದ ಶಿಕ್ಷಕ: ಪ್ರೊ. ಕೆ.ವಿ. ನಾಯಕ

| Published : Sep 30 2025, 12:01 AM IST

ವಿದ್ಯಾರ್ಥಿಗಳ ಭವಿಷ್ಯದ ಒಳಿತು ಬಯಸುವವನೇ ನಿಜವಾದ ಶಿಕ್ಷಕ: ಪ್ರೊ. ಕೆ.ವಿ. ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಒಳಿತು, ಅದರಲ್ಲೂ ಅವರ ಭವಿಷ್ಯದ ಒಳಿತನ್ನು ಬಯಸುವ ಶಿಕ್ಷಕನೇ ನಿಜವಾದ ಶಿಕ್ಷಕ.

ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನಕನ್ನಡಪ್ರಭ ವಾರ್ತೆ ಅಂಕೋಲಾವಿದ್ಯಾರ್ಥಿಗಳ ಒಳಿತು, ಅದರಲ್ಲೂ ಅವರ ಭವಿಷ್ಯದ ಒಳಿತನ್ನು ಬಯಸುವ ಶಿಕ್ಷಕನೇ ನಿಜವಾದ ಶಿಕ್ಷಕ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಕೆ.ವಿ. ನಾಯಕ ಹೇಳಿದರು.

ಕೆಎಲ್ಇ ಶಿಕ್ಷಣ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದ ೨೧ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಕವಿವಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ.ಎಲ್. ಭಟ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಕ್ಷಕರ ಜತೆಗೆ ಪೋಷಕರ ಪಾತ್ರ ಬಹುಮುಖ್ಯವಾಗಿದೆ. ಹೆಣ್ಣುಮಕ್ಕಳು ಎಂಬ ತಾರತಮ್ಯ ಮಾಡದೆ ಅವರಿಗೂ ಉತ್ತಮ ಶಿಕ್ಷಣ ನೀಡಲು ಪ್ರತಿಯೊಬ್ಬ ಪಾಲಕರೂ ಪ್ರಯತ್ನಿಸಬೇಕು ಎಂದರು.

ಸಂಸ್ಥೆಯ ಸಂಯೋಜಕ ಆರ್. ನಟರಾಜ್ ಮಾತನಾಡಿದರು. ಶೇಷಗಿರಿ ಪಿಕಳೆ ಬಿಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಹೆಗಡೆ ಸ್ವಾಗತಿಸಿದರು. ಕೆಎಲ್ಇ ಸಂಸ್ಥೆಯ ಸದಸ್ಯರಾದ ಮಿನಲ್ ನಾರ್ವೇಕರ, ವಿದ್ಯಾರ್ಥಿ ಸಂಘದ ಉಪಾಧ್ಯಾಕ್ಷ ರಾಘವೇಂದ್ರ ಅಂಕೋಲೆಕರ, ಪ್ರಧಾನ ಕಾರ್ಯದರ್ಶಿ ಮಧುರಾ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಇಡಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಸುಲಕ್ಷಾ ನಾಯ್ಕ, ದ್ವಿತೀಯ ಸ್ಥಾನ ಪಡೆದ ದೀಪಾಲಿ ನಾಯ್ಕ, ಮೂರನೇ ಸ್ಥಾನ ಪಡೆದ ಮಹಿಮಾ ಗೌಡ ಮತ್ತು ೮ನೇ ಸ್ಥಾನ ಪಡೆದ ಶೈಜೀನಬಾನು, ಡಿ.ಸಿ. ಪಾವಟೆ ಪ್ರಶಸ್ತಿ ಪುರಸ್ಕೃತರಾದ ರಾಘವೇಂದ್ರ ಅಂಕೋಲೆಕರ ಅವರನ್ನು ಗೌರವಿಸಲಾಯಿತು.

ರಾಘವೇಂದ್ರ ಅಂಕೋಲೆಕರ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಡಾ. ಪುಷ್ಪಾ ನಾಯ್ಕ ಪರಿಚಯಿಸಿದರು. ಉಪನ್ಯಾಸಕಿ ಪ್ರವೀಣಾ ನಾಯ್ಕ, ಉಪನ್ಯಾಸಕಿ ಸ್ವಾತಿ ಅಂಕೋಲೆಕರ ಹಾಗೂ ಪೂರ್ವಿ ಸನ್ಮಾನ ಪತ್ರ ಓದಿದರು.

ಉಪನ್ಯಾಸಕ ಮಂಜುನಾಥ ಇಟಗಿ ಕ್ರೀಡಾ ಸ್ಪರ್ಧೆಯ ಬಹುಮಾನ ವಿಜೇತರ ಯಾದಿ ಪ್ರಕಟಿಸಿದರು. ಅಮ್ರಿನಾಜ್ ಶೇಖ ಸಾಂಸ್ಕೃತಿಕ ಸ್ಪರ್ಧೆಯ ಯಾದಿ ಓದಿದರು. ರಂಜನಾ ಸಂಗಡಿಗರು ಪ್ರಾರ್ಥಿಸಿದರು. ಕಾತ್ಯಾಯಿನಿ ನಾಯ್ಕ ಮತ್ತು ಸ್ನೇಹಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮಧುರಾ ಗೌಡ ವಂದಿಸಿದರು.