ಶರಾವತಿ ಪಂಪ್ಡ್ ಯೋಜನೆಗೆ ಸರ್ವಪಕ್ಷಗಳ ವಿರೋಧ

| Published : Sep 15 2025, 01:01 AM IST

ಶರಾವತಿ ಪಂಪ್ಡ್ ಯೋಜನೆಗೆ ಸರ್ವಪಕ್ಷಗಳ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಯೋಜನೆಯನ್ನು ಪರಿಸರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಿರೋಧಿಸಬೇಕೆಂದು ಈಗಾಗಲೇ ಗ್ರಾಮಸಭೆ ಸರ್ವಾನುಮತದ ನಿರ್ಣಯ ಸ್ವೀಕರಿಸಿದೆ.

ಹೊನ್ನಾವರ: ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್‌ ಯೋಜನೆಯನ್ನು ವಿರೋಧಿಸಲು ಗೇರುಸೊಪ್ಪದಲ್ಲಿ ಸರ್ವ ಪಕ್ಷಗಳ ಪ್ರಮುಖರು ನಿರ್ಧಾರ ತೆಗೆದುಕೊಂಡಿದ್ದಾರೆ.

ಇಲ್ಲಿನ ಕಾಂಗ್ರೆಸ್, ಬಿಜೆಪಿಯ ಇಬ್ಬರು ತಾಲೂಕು ಅಧ್ಯಕ್ಷರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಮತ್ತು ಗ್ರಾಪಂ ಸದಸ್ಯರು ಶುಕ್ರವಾರ ಸಭೆ ಸೇರಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಸಾಧಕ- ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಸಿ ಅಂತಿಮವಾಗಿ ಯೋಜನೆಯನ್ನು ವಿರೋಧಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಬಿಜೆಪಿಯ ತಾಲೂಕು ಅಧ್ಯಕ್ಷ ಮಂಜುನಾಥ ಎಂ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ದೇಶಿತ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಯೋಜನೆಯನ್ನು ಪರಿಸರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಿರೋಧಿಸಬೇಕೆಂದು ಈಗಾಗಲೇ ಗ್ರಾಮಸಭೆ ಸರ್ವಾನುಮತದ ನಿರ್ಣಯ ಸ್ವೀಕರಿಸಿದೆ. ನಿರ್ಣಯವನ್ನು ಈಗಾಗಲೇ ಸರ್ಕಾರಕ್ಕೂ ತಿಳಿಸಲಾಗಿದೆ. ಈ ನಡುವೆ ಜಿಲ್ಲಾಡಳಿತ ಸೆ.18ರಂದು ಸಾರ್ವಜನಿಕರ ಅಹವಾಲು ಆಲಿಸಲು ಗೇರುಸೊಪ್ಪೆಯಲ್ಲಿ ವಿಶೇಷ ಸಬೆ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಅಂದು ನಮ್ಮ ಪರಿಸರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ಪ್ರಮುಖರು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಮ್ಮತದ ನಿರ್ಧಾರಕ್ಕೆ ಬರಬೇಕಾಗಿದೆ ಎಂದರು.

ಶರಾವತಿ ನದಿಕಣಿವೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷೆ ಅನ್ನಪೂರ್ಣಾ ಶಾಸ್ತ್ರಿ, ಕಾಂಗ್ರೆಸ್ ಪ್ರಮುಖ ರಾಘವೇಂದ್ರ ನಾಯ್ಕ, ಕಾರ್ಲೊಸ ಸೋಜ, ಅಕ್ತರ್, ಗುರುರಾಜ ನಾಯ್ಕ ಅಭಿಪ್ರಾಯ ಮಂಡಿಸಿದರು.

ನಗರಬಸ್ತಿಕೇರಿ ಗ್ರಾಪಂ ಅಧ್ಯಕ್ಷೆ ಸುನಿತಾ ಹೆಗಡೆ, ಸದಸ್ಯರಾದ ಮಹೇಶ ನಾಯ್ಕ ಅಡಿಗದ್ದೆ, ಕೃಷ್ಣ ಮರಾಠಿ, ಜಯಂತ ನಾಯ್ಕ, ಶರಣಪ್ಪ ಮಂಜು, ಹೇಮಾವತಿ ನಾಯ್ಕ, ರೇಷ್ಮಾ ನಾಯ್ಕ, ಬಿಜೆಪಿ ಪ್ರಮುಖ ಹನುಮಂತ ಶೇಟ್, ಮಂಜುನಾಥ ಹೆಗಡೆ, ದಲಿತ ಸಂಘಟನೆಯ ಮಂಜುನಾಥ ಹಳ್ಳೇರ ಇದ್ದರು.