ಅಳ್ವೆಕೋಡಿ ಮಾರಿಜಾತ್ರಾ ಮಹೋತ್ಸವ ಅದ್ಧೂರಿ ಸಂಪನ್ನ

| Published : Jan 16 2025, 12:49 AM IST

ಸಾರಾಂಶ

ಬುಧವಾರ ಸಂಜೆ ೫ ಗಂಟೆಗೆ ಮಾರಿ ಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಿದ ಬಳಿಕ ಅಳ್ವೆಕೋಡಿಯಿಂದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ವಿದ್ಯುತ್‌ದೀಪಗಳಿಂದ ಸುಂದರವಾಗಿ ಅಲಂಕೃತಗೊಂಡ ವಾಹನದಲ್ಲಿ ಹೊರಟ ಮಾರಿಕಾಂಬಾ ದೇವಿಗೆ ದಾರಿಯುದ್ದಕ್ಕೂ ಜನರು ಕೈಮುಗಿದು ದರ್ಶನ ಪಡೆದರು.

ಭಟ್ಕಳ: ಶಕ್ತಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿರಾಲಿ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾರಿಜಾತ್ರಾ ಮಹೋತ್ಸವ ಬುಧವಾರ ರಾತ್ರಿ ೧೦ ಕಿಮೀ ದೂರದ ಗುಡಿಹಿತ್ಲು ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದ ಸನಿಹದ ನದಿಯಲ್ಲಿ ಮಾತಾಂಗಿ ಮೂರ್ತಿ ವಿಸರ್ಜಿಸುವುದರ ಮೂಲಕ ಅದ್ಧೂರಿ ಹಾಗೂ ಶಾಂತಿಯುತವಾಗಿ ಸಂಪನ್ನಗೊಂಡಿತು. ಬುಧವಾರ ಸಂಜೆ ೫ ಗಂಟೆಗೆ ಮಾರಿ ಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಿದ ಬಳಿಕ ಅಳ್ವೆಕೋಡಿಯಿಂದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ವಿದ್ಯುತ್‌ದೀಪಗಳಿಂದ ಸುಂದರವಾಗಿ ಅಲಂಕೃತಗೊಂಡ ವಾಹನದಲ್ಲಿ ಹೊರಟ ಮಾರಿಕಾಂಬಾ ದೇವಿಗೆ ದಾರಿಯುದ್ದಕ್ಕೂ ಜನರು ಕೈಮುಗಿದು ದರ್ಶನ ಪಡೆದರು.

ಮೆರವಣಿಗೆಯಲ್ಲಿ ವಾದ್ಯ, ಭಜನೆ, ನೃತ್ಯ, ಚಂಡೆ ವಾದನ, ಆಕರ್ಷಕ ಸ್ತಬ್ದಚಿತ್ರಗಳು, ವಿವಿಧ ವೇಷಧಾರಿಗಳ ಕುಣಿತ, ಯುವಕರ ನೃತ್ಯ ಗಮನ ಸೆಳೆದವು. ಬೃಹತ್ ಮೆರವಣಿಗೆಯಲ್ಲಿ ಮಾರಿ ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ ಹಾಗೂ ಸಮಿತಿಯ ಪದಾಧಿಕಾರಿಗಳು, ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನಿ, ಧರ್ಮದರ್ಶಿಗಳಾದ ಹನುಮಂತ ನಾಯ್ಕ, ನಾರಾಯಣ ದೈಮನೆ ಸೇರಿದಂತೆ ಪ್ರಮುಖರಾದ ಬಾಬು ಮೊಗೇರ, ಭಾಸ್ಕರ ದೈಮನೆ, ಭಾಸ್ಕರ ಮೊಗೇರ ಮುಂಗ್ರಿಮನೆ, ಯಾದವ ಮೊಗೇರ, ವಿಠಲ್ ದೈಮನೆ, ಊರಿನ ಗಣ್ಯರು, ವಿವಿಧ ಸಮಾಜದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲೇ ಮಾರಿಮೂರ್ತಿಯನ್ನು ಹೊತ್ತ ಬೃಹತ್ ಮೆರವಣಿಗೆ ಸಾಗಿ ಬಂದಿದ್ದರಿಂದ ಹೊರ ಊರಿನ ಜನರೂ ಮಾರಿಯ ದರ್ಶನ ಪಡೆಯುವಂತಾಯಿತು. ಮೆರವಣಿಗೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.ನಾಳೆ ಕುಂದರಗಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ

ಯಲ್ಲಾಪುರ: ತಾಲೂಕಿನ ಕುಂದರಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಜ. ೧೭ರಂದು ಶಾಲಾ ಆವರಣದಲ್ಲಿ ನಡೆಯಲಿದೆ. ಅಂದು ಸಂಜೆ ೪.೩೦ಕ್ಕೆ ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮವನ್ನು ಉದ್ಘಾಟಿಸುವರು.ಕುಂದಣ ಸ್ಮರಣಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಲೋಕಾರ್ಪಣೆ ಮಾಡುವರು. ಪ್ರತಿಭಾ ಪ್ರೋತ್ಸಾಹ ಹಾಗೂ ಬಹುಮಾನ ವಿತರಣೆಯನ್ನು ಕುಂದರಗಿ ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ ನೆರವೇರಿಸುವರು.ಎಸ್‌ಡಿಎಂಸಿ ಅಧ್ಯಕ್ಷ ಮುಕ್ತಾರ ಪಠಾಣ ಅಧ್ಯಕ್ಷತೆ ವಹಿಸುವರು. ಶಾಲಾ ಮಕ್ಕಳ ಕೈಬರಹ ಪತ್ರಿಕೆಯನ್ನು ಬಿಇಒ ಎನ್.ಆರ್. ಹೆಗಡೆ ಬಿಡುಗಡೆ ಮಾಡುವರು.

ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಸೌಮ್ಯಾ ನಾಯ್ಕ, ಸದಸ್ಯರಾದ ರಾಮಕೃಷ್ಣ ಹೆಗಡೆ, ಪ್ರಕಾಶ ನಾಯ್ಕ, ಜ್ಯೋತಿ ಹುದಾರ, ಪಿಡಿಒ ರವಿ ಪಟಗಾರ, ಉಪವಲಯಾರಣ್ಯಾಧಿಕಾರಿ ಬೀರಪ್ಪ ಪಟಗಾರ, ಸಿಆರ್‌ಪಿ ವಿಷ್ಣು ಭಟ್ಟ, ಧ.ಗ್ರಾ. ಯೋಜನೆಯ ಅಧಿಕಾರಿ ಯಲ್ಲಪ್ಪ ಹೊಸಮನಿ ಪಾಲ್ಗೊಳ್ಳುವರು.