ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಆಯುರ್ವೇದ ಚಿಕಿತ್ಸೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಹೊಸಪೇಟೆ: ಆಯುರ್ವೇದ ಪದ್ಧತಿ ಚಿಕಿತ್ಸೆ ಕುರಿತು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಜನರ ಆರೋಗ್ಯ ಸುಧಾರಣೆಗೆ ಆಯುರ್ವೇದ ಪದ್ಧತಿಯೂ ಸಹಕಾರಿ ಆಗಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಗಾಗಿ 25 ಹಾಸಿಗೆಗಳನ್ನು ಕಾಯ್ದಿರಿಸಲು ಚಿಂತನೆ ನಡೆದಿದೆ ಎಂದು ಶಾಸಕ ಎಚ್‌.ಆರ್‌. ಗವಿಯಪ್ಪ ಹೇಳಿದರು.ನಗರದ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೋಧಾವ್ಯ 2025: ವಿದ್ಯಘ್ನಿಕರ್ಮ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಆಯುರ್ವೇದ ಚಿಕಿತ್ಸೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗ ರಾಜ್ಯದಲ್ಲೂ ಜಾಗೃತಿ ಮೂಡಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ₹40 ಕೋಟಿ ಮೊತ್ತದ ವೈದ್ಯಕೀಯ ಪರಿಕರಗಳನ್ನು ಖರೀದಿಸಲಾಗುತ್ತಿದೆ. ಹೈದರಾಬಾದ್‌ಗೆ ತೆರಳಿ ಅಲ್ಲಿನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ವೈದ್ಯಕೀಯ ಪರಿಕರಗಳನ್ನು ಪರಿಶೀಲಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಗಾಗಿ 25 ಹಾಸಿಗೆಗಳನ್ನು ಕಾಯ್ದಿರಿಸಲು ಚಿಂತನೆ ನಡೆದಿದೆ ಎಂದರು.

ಆಯುರ್ವೇದ ವೈದ್ಯ ಡಾ.ಚಂದ್ರಕುಮಾರ್ ದೇಶಮುಖ್ ವಿದ್ಯಘ್ನಿಕರ್ಮದ ಬಗ್ಗೆ ವಿಶೇಷ ಮಾಹಿತಿ ನೀಡಿದರು. 50ಕ್ಕೂ ಹೆಚ್ಚು ರೋಗಿಗಳಿಗೆ ವಿದ್ಯಘ್ನಿಕರ್ಮದ ಮೂಲಕ ತತ್‌ಕ್ಷಣ ಪರಿಹಾರ ನೀಡಿದರು.

ಹೋಟೆಲ್‌ ಉದ್ಯಮಿ ಅಭಿಷೇಕ್‌, ರಾಜೀವ್ ಗಾಂಧಿ ವಿವಿಯ ಡಾ.ಸಿದ್ದನಗೌಡ ಪಾಟೀಲ್, ಜಿಲ್ಲಾ ಆಯುಷ್‌ ಆಧಿಕಾರಿ ಡಾ.ಫಣೀಂದ್ರ, ಆಯುಷ್ ಫೆಡರೇಷನ್ ನ ಡಾ.ಬಿ.ವಿ. ಭಟ್, ಡಾ. ಚೇತನ್, ಡಾ.ಗುರು ಮಹಾಂತೇಶ್, ಡಾ.ಕಾಶಿಲಿಂಗಯ್ಯ, ಡಾ.ದಾಸುರಾವ್, ಡಾ.ಮೋಹನ್ ಬಿರಾದಾರ್, ಡಾ.ಸೋಮಶೇಖರ್ ಹುದ್ದಾರ್, ಡಾ.ಕುಂಬಾರ್, ಡಾ.ಸುನಿಲ್ ಹಿರೇಮಠ ಮತ್ತಿತರರಿದ್ದರು. ಡಾ.ಕೇದಾರ್ ದಂಡಿನ್, ಡಾ.ರಾಧಾ, ಡಾ.ವೀಣಾ ನಿರ್ವಹಿಸಿದರು.