ಕಾಮನ್ ಪುಟಕ್ಕೆಆನಂದೂರು ಗ್ರಾಪಂ ಅಧ್ಯಕ್ಷೆಗೆ ರೈತ ಸಂಘದಿಂದ ಸನ್ಮಾನ

| Published : Sep 02 2024, 02:01 AM IST

ಕಾಮನ್ ಪುಟಕ್ಕೆಆನಂದೂರು ಗ್ರಾಪಂ ಅಧ್ಯಕ್ಷೆಗೆ ರೈತ ಸಂಘದಿಂದ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಕ್ಷೇತ್ರದಲ್ಲಿ ಚಳವಳಿಗಾರರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡುವುದು ಬಹಳ ವಿರಳ.

ಕನ್ನಡಪ್ರಭ ವಾರ್ತೆ ಮೈಸೂರುಆನಂದೂರು ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಮೈಸೂರು ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಭಾಕರ್ ಅವರ ಪತ್ನಿ ಶೋಭಾ ಅವರನ್ನು ರಾಜ್ಯ ರೈತ ಸಂಘದ ವತಿಯಿಂದ ಅಭಿನಂದಿಸಲಾಯಿತು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿನಂದಿಸಿದರು.ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಸಾರ್ವಜನಿಕ ಕ್ಷೇತ್ರದಲ್ಲಿ ಚಳವಳಿಗಾರರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡುವುದು ಬಹಳ ವಿರಳ. ನಾವು ಭ್ರಷ್ಟಾಚಾರರ, ಜನಪ್ರತಿನಿಧಿಗಳ, ದುರಾಡಳಿತ ಖಂಡಿಸಿ ಹೋರಾಟ ಮಾಡುತ್ತೇವೆ. ಇದಕ್ಕೆ ಕಾರಣ ಚುನಾವಣೆ ವೇಳೆ ಪ್ರಜಾಪ್ರಭುತ್ವದ ಆಯ್ಕೆಯನ್ನು ಪಾವಿತ್ರ್ಯತೆಯಿಂದ ಆಯ್ಕೆ ಮಾಡಿದರೆ ಚಳವಳಿ ಹಾಗೂ ಹೋರಾಟಗಳ ಅವಶ್ಯಕತೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೋರಾಟಗಾರರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮತದಾರರು ನಮ್ಮನ್ನು ಆಯ್ಕೆ ಮಾಡುವಲ್ಲಿ ವಿಫಲರಾಗುತ್ತಾರೆ ಎಂದರು.ಮುಖಂಡ ಪ್ರಸನ್ನ ಎನ್. ಗೌಡ, ಜಿಲ್ಲಾ ರೈತ ಸಂಘದ ಮಹಿಳಾ ಅಧ್ಯಕ್ಷೆ ನೇತ್ರಾವತಿ, ಜಿಲ್ಲಾ ಉಪಾಧ್ಯಕ್ಷೆ ನಂಜುಂಡಸ್ವಾಮಿ, ನಂಜನಗೂಡು ತಾಲೂಕು ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಎಚ್.ಕೆ. ಪ್ರಕಾಶ್, ಮರಂಕಯ್ಯ, ಮಂಟಗಳ ಮಹೇಶ್, ರಾಘವೇಂದ್ರ, ಆನಂದೂರು ರಘು, ತಾಲೂಕು ಸಂಚಾಲಕ ರಾಘವೇಂದ್ರ, ಯುವ ಘಟಕದ ಅಧ್ಯಕ್ಷ ಮಹೇಶ್, ಬಸವರಾಜ ನಾಯಕ, ಕೆಂಚಲಗೋಡು ಶಿವ, ಬಸಪ್ಪ ಮೊದಲಾದವರು ಇದ್ದರು.