ಸಾರಾಂಶ
ಭಾರತದಲ್ಲಿ ಗೋವುಗಳನ್ನು ಮಾತೃ ಹೃದಯಿ ತಾಯಿಯಷ್ಟೇ ಪವಿತ್ರವಾದ ಭಾವನೆಯಿಂದ ಗೌರವಿಸಲಾಗುತ್ತಿದೆ. ಬಸವಪ್ಪನ ಅಗಲಿಕೆಯಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ನಿರಾಸೆ ಉಂಟುಮಾಡಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಾಲಯದ ಬಸವಪ್ಪ ಶಿವೈಕ್ಯವಾಗಿದ್ದು ಅಪಾರ ಭಕ್ತರು ಕಂಬನಿ ಮಿಡಿದಿದ್ದಾರೆ.ಆತ್ಮಲಿಂಗೇಶ್ವರ ದೇವಾಲಯದ ಆರಂಭದಿಂದಲೂ ಬಸವಪ್ಪನನ್ನು ನೇಮಿಸುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಶ್ರೀಆತ್ಮಲಿಗೇಶ್ವರ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಬಸವನನ್ನು ಇರಿಸಲಾಗಿತ್ತು. ಸುತ್ತಮುತ್ತ ನೂರಾರು ಭಕ್ತರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಬಸವಪ್ಪ ಲಿಂಗೈಕ್ಯವಾಗಿರುವುದ್ದಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಭಾರತೀ ವಿದ್ಯಾಸಂಸ್ಥೆ ಚೇರ್ಮನ್ ಮಧು ಜಿ.ಮಾದೇಗೌಡ ಕಂಬನಿ ಮಿಡಿದು ದೇವಾಲಯದ ಆವರಣಕ್ಕೆ ಆಗಮಿಸಿ ಬಸವನಿಗೆ ಪೂಜೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಅವರು, ಭಾರತದಲ್ಲಿ ಗೋವುಗಳನ್ನು ಮಾತೃ ಹೃದಯಿ ತಾಯಿಯಷ್ಟೇ ಪವಿತ್ರವಾದ ಭಾವನೆಯಿಂದ ಗೌರವಿಸಲಾಗುತ್ತಿದೆ. ಬಸವಪ್ಪನ ಅಗಲಿಕೆಯಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ನಿರಾಸೆ ಉಂಟುಮಾಡಿದೆ ಎಂದರು.
ಬಸವಣ್ಣ ಭಾಗದಲ್ಲಿ ಅಪಾರ ಭಕ್ತರನ್ನು ಹೊಂದಿದ್ದು, ಶ್ರದ್ದಾ ಭಕ್ತಿಯಿಂದ ಪೂಜಿಸಿ ಗೌರವಿಸುತ್ತಾರೆ. ಶ್ರೀ ಪುಣ್ಯ ಕ್ಷೇತ್ರದ ದೇವಾಲಯದ ಬಸವ ವಿಧಿವಶವಾಗಿರುವುದು ಭಕ್ತರಿಗೆ ನೋವುಂಟಾಗಿದೆ ಎಂದು ಭಾವುಕರಾದರು.ಮೂರು ವರ್ಷದ ಬಸವ ಕರುವನ್ನು ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಿದ್ದೇಗೌಡರು ಅರಳಿ ಕಟ್ಟೆ ಹತ್ತಿರ ಬಿಟ್ಟಾಗ ಬಸವಪ್ಪ ಕರು ಗರ್ಭಗುಡಿ ಪ್ರವೇಶಿತು ಅಂದಿನಿಂದ ಇಂದಿನವರೆಗೂ ಭಕ್ತರಿಗೆ, ನಮ್ಮ ಕುಟುಂಬ ವರ್ಗದವರಿಗೆ, ಸುತ್ತಮುತ್ತಲಿನ ಊರಿನ ಪ್ರದೇಶದವರೆಗೂ ಶುಭವನ್ನು ಉಂಟು ಮಾಡಿದೆ ಎಂದರು.
ಭವ್ಯ ಮೆರವಣಿಗೆಯ ನಂತರ. ಶೈವ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಭಾರತೀ ವಿದ್ಯಾಸಂಸ್ಥೆ ಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು, ಕಾರ್ಯದರ್ಶಿ ಸಿದ್ದೇಗೌಡ, ಪ್ರಾಂಶುಪಾಲರಾದ ಪುಟ್ಟಸ್ವಾಮಿ, ಡಾ.ಎಂ.ಎಸ್.ಮಹದೇವಸ್ವಾಮಿ, ನಿಲಯಪಾಲಕ ಜಗದೀಶ್, ಪ್ರಸನ್ನ, ಮಲ್ಲಿಕಾರ್ಜುನ ಸ್ವಾಮಿ,ಕೆ.ಎಸ್. ಗೌಡ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿದರು.;Resize=(128,128))
;Resize=(128,128))