ಸಾರಾಂಶ
ಗಂಡಸರಿಗೂ ಫ್ರೀ ಬಸ್ ಕೊಟ್ರೆ ಕೆಎಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ : ಗಂಡಸರಿಗೂ ಫ್ರೀ ಬಸ್ ಕೊಟ್ರೆ ಕೆಎಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಯಳಂದೂರಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ಮಾತನಾಡುವಾಗ ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಆಗ ಸ್ಥಳೀಯ ಪುರುಷರು ನಮಗೂ ಫ್ರೀ ಬಸ್ ಕೊಡಿ ಎಂದು ಆಗ್ರಹಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಗಂಡಸರಿಗೂ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ ಮುಚ್ಚಬೇಕಾಗುತ್ತೆ ಎಂದರು.
ಅಧಿಕಾರ ಹಂಚಿಕೆ ಮಾತು ಜೋರಾಗಿ ಕೇಳಿಬರುತ್ತಿರುವ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವ ಎಚ್.ಸಿ. ಮಹಾದೇವಪ್ಪ ಅವರು, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು ಎಂದರು. ಜನರ ಆಶೀರ್ವಾದ ಇರುವ ತನಕ ಸಿದ್ದರಾಮಯ್ಯ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ, ಸರ್ಕಾರ ಅಲುಗಾಡಿದರೇ ನೀವು ಸುಮ್ಮನಿರುತ್ತೀರಾ ಎಂದು ಜನರಿಗೇ ಪ್ರಶ್ನೆ ಕೇಳಿದರು.