ತಾಲೂಕಿನ ಸಿದ್ದನಮಠದ ಗೇಟ್ ಬಳಿ ಸಿರಿಗೆರೆಯ ಬೃಹನ್ಮಠದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗಮಿಸುತ್ತಿದ್ದಂತೆಯೇ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಅಧಿಕ ಪ್ರಮಾಣದ ಭಕ್ತ ಸಮೂಹ ಶ್ರೀಗಳವರಿಗೆ ಗೌರವ ಸಲ್ಲಿಸಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸಿದ್ದನಮಠದ ಗೇಟ್ ಬಳಿ ಸಿರಿಗೆರೆಯ ಬೃಹನ್ಮಠದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗಮಿಸುತ್ತಿದ್ದಂತೆಯೇ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಅಧಿಕ ಪ್ರಮಾಣದ ಭಕ್ತ ಸಮೂಹ ಶ್ರೀಗಳವರಿಗೆ ಗೌರವ ಸಲ್ಲಿಸಿ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ಜ.24ರ ಶನಿವಾರದಿಂದ ಫೆ.1ರವರೆಗೆ ನಡೆಯಲಿರುವ ತರಳಬಾಳು ಹುಣ್ಣಿಮೆ ಮತ್ತು ಸರ್ವಧರ್ಮ ಸಮ್ಮೇಳನಕ್ಕೆ ಭಾಗವಹಿಸಲು ಸಿರಿಗೆಯ ಶ್ರೀಗಳವರ ಉದ್ಘಾಟನಾ ಮೆರವಣಿಗೆ ಸಿರಿಗೆರೆಯ ಶ್ರೀ ಮಠದಿಂದ ಹೊರಟು ತಾಲೂಕಿನ ಸಿದ್ದನಮಠಕ್ಕೆ ಬರುತ್ತಿದ್ದಂತೆಯೇ ಭಕ್ತ ಸಮೂಹವು ಹರ್ಷೋದ್ಘಾರವನ್ನು ಮಾಡುತ್ತ ಶ್ರೀಗಳವರನ್ನು ಬರಮಾಡಿಕೊಂಡರು.

ನಂತರ ತಾಲೂಕಿನ ಕಸ್ತೂರ್ ಬಾ ನಗರ, ದೊಡ್ಡಬ್ಬಿಗೆರೆ, ಸಂತೆಬೆನ್ನೂರು, ಕಾಕನೂರು, ನುಗ್ಗಿಹಳ್ಳಿ ಕ್ರಾಸ್, ದೇವರಹಳ್ಳಿ, ಹಿರೇಉಡ, ಹಟ್ಟಿ, ಆಕಳಕಟ್ಟೆ, ಆಗರಬನ್ನಿಹಟ್ಟಿ, ಮುದ್ದೇನಹಳ್ಳಿ, ಚನ್ನಗಿರಿ ಮುಖಾಂತರ ಸಾಗಿ ಅಜ್ಜಿಹಳ್ಳಿ, ಸುಣಿಗೆರೆ, ಮಾವಿನಕಟ್ಟೆ, ಭದ್ರಾವತಿಯ ತಾಲೂಕಿನ ಕಡೆಗೆ ಉದ್ಘಾಟನಾ ಮೆರವಣಿಗೆ ಸಾಗಿತು.

ತಾಲೂಕಿಗೆ ಶ್ರೀಗಳವರ ಮೆರವಣಿಗೆ ಪ್ರವೇಶ ಮಾಡಿದ ಎಲ್ಲಾ ಗ್ರಾಮಗಳಲ್ಲಿನ ಭಕ್ತ ಸಮೋಹವು ಸ್ವಾಗತ ಕೋರುತ್ತ ಸಂಭ್ರಮಿಸಿದರು.

ಅಪಾರ ಸಂಖ್ಯೆಯ ಭಕ್ತಾದಿಗಳು ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಶ್ರೀಗಳವರ ಭಾವಚಿತ್ರ ಮತ್ತು ಕೇಸರಿ ಬಣ್ಣದ ಧ್ವಜಗಳನ್ನು ಕಟ್ಟಿಕೊಂಡು ಹರಹರ ಮಹಾದೇವ, ಶಿವ-ಶಿವ ಎಂಬ ಘೋಷಣೆಗಳೊಂದಿಗೆ ತರಳಬಾಳು ಜಗದ್ಗುರುಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಸಾಗಿ ಬೀಳ್ಕೊಟ್ಟರು.

ಈ ಮೆರವಣಿಗೆ ಸಾಗುವ ಎಲ್ಲಾ ಮಾರ್ಗಗಳಲ್ಲಿಯೋ ಭಕ್ತಾದಿಗಳು ತಳಿರು-ತೋರಣಗಳಿಂದ ಸಿಂಗರಿಸಿ ಶ್ರೀಗಳನ್ನು ಸ್ವಾಗತಿಸಿ ನಂತರ ಬೀಳ್ಕೊಟ್ಟರು.

ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ, ಮಾಯಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ, ತುಮ್ ಕೋಸ್ ಸಂಸ್ಥೆಯ ಅಧ್ಯಕ್ಷ ಹೆಚ್.ಎಸ್.ಶಿವಕುಮಾರ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್, ಬಿ.ಜಿ.ನಾಗರಾಜ್, ರೈತ ಮುಖಂಡ ಬಸವರಾಜಪ್ಪ, ದಿಗ್ಗೇನಹಳ್ಳಿ ನಾಗರಾಜ್ ಭಕ್ತರು ಹಾಜರಿದ್ದರು.