ಸಾರಾಂಶ
ಯಾದಗಿರಿ: ಇಲ್ಲಿನ ಕಡೇಚೂರು - ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಸೂರಜ್ ಲ್ಯಾಬ್‌ನ ಪ್ರೊಡಕ್ಷನ್ ಬ್ಲಾಕ್-1 ರಲ್ಲಿರುವ ಸ್ಟೇನ್‌ಲೆಸ್ ಸ್ಟೀಲ್ ರಿಯಾಕ್ಟರ್ (ಎಸ್.ಎಸ್.ಆರ್.) ಸ್ಫೋಟ ಹಾಗೂ ಕಾರ್ಮಿಕರಿಗಾದ ಗಾಯ ಪ್ರಕರಣದ ಕುರಿತು, ದೂರು ದಾಖಲಿಸುವಲ್ಲಿ ಹಿಂದೇಟು ಹಾಕಲಾಗುತ್ತಿದೆಯೇ ? ದೂರು ನೀಡಲು ಸಂಬಂಧಿತ ಇಲಾಖೆಯ ಅಧಿಕಾರಿಗಳ ಮೀನಾಮೇಷ ಹಾಗೂ ಅಧಿಕಾರಿಗಳು ದೂರು ನೀಡಿದರೆ ಮಾತ್ರ ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಶಂಕೆಗಳ ಮೂಡಿಸುತ್ತಿದೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳೀ ಬರುತ್ತಿವೆ.
ಎಂದಿನಂತೆ ಪ್ರಕರಣವನ್ನು ಮರೆ ಮಾಚುವ ಯತ್ನ ನಡೆದಿದೆ. ಇದಕ್ಕೆ ಬೆನ್ನೆಲುಬಾಗಿ ನಿಂತಂತಿರುವ ರಾಜಕೀಯ ಪ್ರಭಾವ ಹಾಗೂ ಕೆಲವು ಅಧಿಕಾರಿಗಳ ಕಂಪನಿಗಳ ಜೊತೆಗಿನ ಹೊಂದಾಣಿಕೆಯಿಂದಾಗಿ ಈ ಪ್ರಕರಣಕ್ಕೂ ಸಹ ಎಳ್ಳು ನೀರು ಬಿಡುವ ಸಂಚು ನಡೆದಿದೆ ಎಂಬ ಮಾತುಗಳಿವೆ. ಘಟನೆ ನಡೆದಾಗ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಕಣ್ಮುಂದೆ ಎಲ್ಲವೂ ಕಂಡರೂ, ದೂರು ದಾಖಲಿಸುವಲ್ಲಿ ಅವರಾಡಿದ ಮಾತುಗಳು ಶಂಕೆ ಮೂಡಿಸಿವೆ ಎಂದ ಕನ್ನಡಪರ ಸಂಘಟನೆಯ ವೀರೇಶ ಸಜ್ಜನ್, ಕಂಪನಿಯವರು ಹಾಗೂ ನಿಮ್ಮನ್ನು ಮುಖಾಮುಖಿ ಮಾಡಿಸುತ್ತೇನೆ, ನಂತರ ಎಫ್‌ಐಆರ್ ದಾಖಲಿಸುವ ಬಗ್ಗೆ ನಿರ್ಧರಿಸಬಹುದು ಎಂದರು ಎಂದು ಅಚ್ಚರಿ ವ್ಯಕ್ತಪಡಿಸಿದರು.ಕಾರ್ಮಿಕರಿಗಾದ ಗಾಯಗಳ ಬಗ್ಗೆ ಖುದ್ದು ಪೊಲೀಸರೂ ನೋಡಿದ್ದಾರೆ. ಕಾರ್ಮಿಕ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೂ ಸಹ, ಕಾರ್ಮಿಕ ಇಲಾಖೆಯವರಾಗಲೀ, ಪರಿಸರ ಇಲಾಖೆಯವರಾಗಲೀ, ಪೊಲೀಸರು ಸ್ವಯಂ ಪ್ರೇರಿತವಾಗಲಿ ದೂರು ದಾಖಲಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಕಾರ್ಯವೈಖರಿಯ ಬಗ್ಗೆ ಅನುಮಾನ ಮೂಡಿಸಿದೆ ಅಂತಾರೆ.
ಜಿಲ್ಲಾಧಿಕಾರಿ ಹರ್ಷಲ್ ಭೇಟಿ
ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಹರ್ಷಲ್ ಭೇಟಿ ನೀಡಿ, ರಿಯಾಕ್ಟರ್ ಸ್ಫೋಟ ಸಂಭವಿಸಿದ್ದ ಸೂರಜ್ ಲ್ಯಾಬೋರೇಟರೀಸ್ ಪ್ರೈ. ಲಿ. ಘಟನೆಯ ಸ್ಥಳವನ್ನು ಪರಿಶೀಲಿಸಿದರು. ಈ ಸಮಯದಲ್ಲಿ ಸ್ಫೋಟದ ಕಾರಣ, ಹಾನಿಯ ಪ್ರಮಾಣ ಕುರಿತು ಮಾಹಿತಿ ಪಡೆದುಕೊಂಡರು. ಘಟನೆಯ ದಿನದಂದು 0.5 ಕೆಎಲ್ ಸಾಮರ್ಥ್ಯ ದ ಸೈನ್ ಲೇಸ್ ಸ್ಟೀಲ್ ರಿಯಾಕ್ಟರ್ ದಲ್ಲಿ ಉತ್ಪನ್ನ ತಯಾರಿಸುವಾಗ ರಿಯಾಕ್ಟರ್ ಒಳಗಡೆಯ ಒತ್ತಡದಿಂದ ರಿಯಾಕ್ಟರ್‌ದ ಮುಚ್ಚಳವು (ಲಿಡ್) ಹೊರಗಡೆ ಬಂದಿರುವುದಾಗಿ, ಅದರಿಂದ ಸದರಿ ಜಾಗದ ಸುತ್ತ-ಮುತ್ತ ಅಲ್ಪ ಪ್ರಮಾಣದಲ್ಲಿ ಗೋಡೆ ಕುಸಿದಿರುವದಾಗಿ ಮತ್ತು ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇವರುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಅವರು ಚೇತರಿಸಿಕೊಂಡಿರುವದಾಗಿ ತಿಳಿಸಿದರು. ಘಟನೆಯಲ್ಲಿ ಯಾವುದೇ ಸಾವು ಆಗಿರುವುದಿಲ್ಲವೆಂದು ಮಾಲೀಕರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ನಂತರ, ಸದರಿ ಕೈಗಾರಿಕೆಯ ಮಾಲೀಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ, ಇನ್ನು ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಡಿಸಿ ಸೂಚಿಸಿದರು.ಸೂರಜ್ ಲ್ಯಾಬ್‌ನಲ್ಲಿ ಸ್ಫೋಟ ಪ್ರಕರಣದ ಎಫ್‌ಐಆರ್ ದಾಖಲಿಸದೆ, ಪ್ರಕರಣ ಮುಚ್ಚುವ ಸಂಚು ನಡೆದಿದೆ. ಅಧಿಕಾರಿಗಳ ನಡೆ ಅನುಮಾನ ಮೂಡಿಸಿದೆ.
- ಟಿ.ಎನ್. ಭೀಮುನಾಯಕ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ.
;Resize=(128,128))
;Resize=(128,128))
;Resize=(128,128))