ಜಿಲ್ಲೆಯಾದ್ಯಂತ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಸಂಭ್ರಮ

| Published : Dec 26 2024, 01:02 AM IST

ಜಿಲ್ಲೆಯಾದ್ಯಂತ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ನಗರದ ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್ ಸಂಭ್ರಮದೊಂದಿಗೆ ಯೇಸುವಿನಲ್ಲಿ ಪ್ರಾರ್ಥನೆ ಮಾಡಿದ್ದು, ಜಿಲ್ಲೆಯ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ರಾತ್ರಿಯಿಂದ ಮತ್ತು ಬೆಳಿಗ್ಗೆ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಸಮುದಾಯದವರಿಗೆ ಶುಭಕೋರಿದರು. ಡಿಸೆಂಬರ್ ೨೪ರಂದು ಮಧ್ಯ ರಾತ್ರಿ ೧೨ ಗಂಟೆಯಿಂದಲೇ ಬಹಳ ಹರ್ಷದಿಂದ, ಪ್ರೀತಿಯಿಂದ ಯಾವ ಮತಬೇಧವಿಲ್ಲದೇ ಎಲ್ಲಾರೂ ಕೂಡ ಆಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ವಿವಿಧ ಚರ್ಚ್ಗಳಲ್ಲಿ ಕ್ರಿಸ್ಮಸ್ ಸಂಭ್ರಮದೊಂದಿಗೆ ಯೇಸುವಿನಲ್ಲಿ ಪ್ರಾರ್ಥನೆ ಮಾಡಿದ್ದು, ಜಿಲ್ಲೆಯ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ರಾತ್ರಿಯಿಂದ ಮತ್ತು ಬೆಳಿಗ್ಗೆ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಸಮುದಾಯದವರಿಗೆ ಶುಭಕೋರಿದರು.

ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಮಾಧ್ಯಮದೊಂದಿಗೆ ಮಾತನಾಡಿ, ಇವತ್ತು ಒಂದು ಪವಿತ್ರವಾದ ದಿನ. ಹಾಸನ ಜಿಲ್ಲೆಯ ಜನತೆಗೆ ಕ್ರಿಸ್ಮಸ್ ಹಬ್ಬದ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಮೊದಲು ಹೇಳುತ್ತೇನೆ. ಯೇಸು ಭಗವಂತ ಎಲ್ಲಾರಿಗೂ ಒಳ್ಳೆಯದು ಮಾಡಲಿ. ಉತ್ತಮ ಮಳೆ, ಬೆಳೆ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು. ನಾನು ಚಿಕ್ಕ ವಯಸ್ಸಿನಿಂದಲೂ ಕ್ರೈಸ್ತ ಸಮುದಾಯದ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದರಿಂದ ಕ್ರಿಸ್ಮಸ್ ಹಬ್ಬ ಎಂದರೇ ನನಗೆ ಒಂದು ವಿಶೇಷವಾದ ಮತ್ತು ಮನಸ್ಸಿಗೆ ನೆಮ್ಮದಿ ಕೊಡುವ ದಿನವಾಗಿದೆ. ಕ್ರಿಸ್ಮಸ್ ಹಿಂದಿನ ದಿನ ರಾತ್ರಿ ಸಂತ ಫಿಲೋಮಿನ ಚರ್ಚ್‌ಗೆ ಹೋಗಿದ್ದು, ಬುಧವಾರದಂದು ವೆಸ್ಲಿ ಚರ್ಚ್‌ಗೆ ಹೋಗಿ ಬಂದಿದ್ದೇನೆ. ಯೇಸು ತಂದೆಯನ್ನು ನಂಬಿದ ಯಾರಿಗೂ ಕೂಡ ಮೋಸ ಆಗಿರುವುದಿಲ್ಲ. ಎಲ್ಲಾರಿಗೂ ಕೈಹಿಡಿದಿದ್ದಾನೆ. ಆ ಭಗವಂತ ಯೇಸು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.

ಪ್ರತಿ ವರ್ಷದಂತೆ ಈವರ್ಷವೂ ನಗರದ ವಿವಿಧ ಚರ್ಚ್‌ಗಳಲ್ಲಿ ಹೊಸ ವರ್ಷದ ಕ್ರಿಸ್ಮಸ್ ಸಂಭ್ರಮವನ್ನು ಭಾನುವಾರ ಮಧ್ ರಾತ್ರಿಯಿಂದಲೇ ನಗರದ ಎನ್.ಆರ್. ವೃತ್ತ, ಹಳೆ ಮುನ್ಸಿಪಲ್ ಶಾಲೆ ಹಿಂಭಾಗ, ಆರ್.ಸಿ. ರಸ್ತೆ ಬಳಿ ಇರುವ ಚರ್ಚ್, ಸ್ಲೇಟರ್ಸ್ ಹಾಲ್ ಇತರೆ ಭಾಗಗಳಲ್ಲಿ ಇರುವ ಇರುವ ಚರ್ಚ್‌ಗಳಲ್ಲಿ ಮಕ್ಕಳು ಮತ್ತು ದೊಡ್ಡವರು ಶುಭ್ರವಾದ ಹೊಸ ಬಟ್ಟೆ ತೊಟ್ಟು ಯೇಸು ಇರುವ ಜಾಗದ ಮುಂದೆ ಮೇಣದ ಬತ್ತಿ ಇಟ್ಟು ಪ್ರಾರ್ಥಿಸುತ್ತಿದ್ದರು. ಡಿಸೆಂಬರ್ ೨೪ರಂದು ಮಧ್ಯ ರಾತ್ರಿ ೧೨ ಗಂಟೆಯಿಂದಲೇ ಬಹಳ ಹರ್ಷದಿಂದ, ಪ್ರೀತಿಯಿಂದ ಯಾವ ಮತಬೇಧವಿಲ್ಲದೇ ಎಲ್ಲಾರೂ ಕೂಡ ಆಚರಿಸಿದರು.

೨೪ರ ರಾತ್ರಿಯಲ್ಲಿ ಪ್ರಭು ಯೇಸುರವರ ಆರಾಧನೆ, ಬಲಿಪೂಜೆಗಳು ಇರುತ್ತದೆ. ಹಾಸನದ ಸಂತ ಅಂತೋನಿಯವರ ದೇವಾಲಯದಲ್ಲಿ ರಾತ್ರಿಯಿಂದಲೇ ಭಜನೆ ಗೀತೆಗಳ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿ ಸಾವಿರಾರು ಜನರು ಇದರಲ್ಲಿ ಭಾಗವಹಿಸಿದ್ದರು. ಚರ್ಚ್ ಆವರಣದಲ್ಲಿ ಯೇಸುರವರ ಜನನದ ಕುರಿತು ಕಥೆ ಬಿಂಬಿಸುವ ಚಿತ್ರಣವನ್ನು ಕೂಡ ಅಲ್ಲಿ ಬಿಂಬಿಸಲಾಗಿತ್ತು. ಕಳೆದ ಎರಡು ವರ್ಷಗಳ ಕಾಲ ಕೊರೋನಾ ಆವರಿಸಿ ಸಂಭ್ರಮಾಚರಣೆ ಕಡಿಮೆ ಇತ್ತು. ಈಗ ಮಾಯವಾಗಿರುವುದರಿಂದ ಹೆಚ್ಚಿನ ಸಂಭ್ರಮದಲ್ಲಿ ಆಚರಿಸಿದರು. ಚರ್ಚ್ ಆವರಣದಲ್ಲಿ ಯೇಸು ಅವರ ಬಾಲ್ಯದ ಜೀವನ ಹಾಗೂ ಉದ್ದೇಶಗಳನ್ನು ಗೊಂಬೆಗಳ ಮೂಲಕ ಪ್ರದರ್ಶನಕ್ಕೆ ಇಡಲಾಗಿತ್ತು, ಬಂದವರಿಗೆ ಸಿಹಿ ಹಂಚಲಾಯಿತು.