ತೆಂಗು ಉತ್ಪಾದನೆಗೆ ಹೆಚ್ಚಿನ ಅರಿವು ಅಗತ್ಯ: ಕೆ.ಪಿ.ಜಯದೇವ್

| Published : May 18 2024, 12:45 AM IST / Updated: May 18 2024, 01:02 PM IST

ತೆಂಗು ಉತ್ಪಾದನೆಗೆ ಹೆಚ್ಚಿನ ಅರಿವು ಅಗತ್ಯ: ಕೆ.ಪಿ.ಜಯದೇವ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು ತಾಲೂಕಿನ ಪುರ ಗ್ರಾಪಂ ವ್ಯಾಪ್ತಿಯ ಪುರ, ಪಿ ಕೋಡಿಹಳ್ಳಿ, ಹಿರೇಗರ್ಜೆ ಮತ್ತಿತರ ಗ್ರಾಮಗಳಲ್ಲಿ ತೆಂಗು ಅಭಿವೃದ್ದಿ ಮಂಡಳಿಯಿಂದ ತೆಂಗು ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರ ಜ್ಞಾನ ಕುರಿತು ಮಾಹಿತಿ ನೀಡಿಕೆ‌ ಕಾರ್ಯಕ್ರಮ ನಡೆಯಿುತು.

 ಕಡೂರು:  ತೆಂಗು ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರ ಜ್ಞಾನ ವಿಸ್ತರಣೆಗೂ ಮುನ್ನ ರೈತರು ಅನೇಕ ವಿಷಯಗಳನ್ನು ಅರಿಯುವ ಅಗತ್ಯವಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ.ಪಿ.ಜಯದೇವ್ ಹೇಳಿದರು.

ತಾಲೂಕಿನ ಪುರ ಗ್ರಾಪಂ ವ್ಯಾಪ್ತಿಯ ಪುರ, ಪಿ ಕೋಡಿಹಳ್ಳಿ, ಹಿರೇಗರ್ಜೆ ಮತ್ತಿತರ ಗ್ರಾಮಗಳಲ್ಲಿ ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ, ಕೀಟ ನಿಯಂತ್ರಣದ ತಂತ್ರಜ್ಞಾನದ ಕುರಿತು ತೋಟಗಾರಿಕಾ ಇಲಾಖೆಯ ಮಾಹಿತಿ ನೀಡಿಕೆ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರ ಗ್ರಾಪಂ ವ್ಯಾಪ್ತಿಯ ಪುರ,ಪಿ.ಕೋಡಿಹಳ್ಳಿ, ದೊಣ್ಣೆ ಕೋರನಹಳ್ಳಿ, ಹಿರೇಗರ್ಜೆ, ರಾಂಪುರ,ಪಿ. ಮಲ್ಲಾಪುರ, ಮಾವಿನಹಳ್ಳಿ, ಮೇರೆದೇವರ ಹಳ್ಳಿ, ನರಸೀಪುರ ಮತ್ತು ಲಕ್ಷ್ಮೀಪುರ ಗ್ರಾಮಗಳನ್ನು ಗುಚ್ಚ ಗ್ರಾಮಗಳೆಂದು ಆಯ್ಕೆ ಮಾಡಿ ಇಲ್ಲಿ ತೆಂಗು ಬೆಳೆ ಉತ್ಪಾದನಾ ಹೆಚ್ಚಳ ಮತ್ತಿತರ ಅಗತ್ಯ ಮಾರ್ಗದರ್ಶನವನ್ನು ನೀಡಲು ಶಾಸಕ ಕೆ.ಎಸ್.ಆನಂದ್ ಅವರು ಸೂಚಿಸಿದ್ದಾರೆ. ಅವರ ಮಾರ್ಗದರ್ಶನದಂತೆ ಯೋಜನೆಯ ವಿವರಗಳನ್ನು ರೈತರಿಗೆ ನೀಡಲಾಗಿದೆ ಎಂದರು.

ಎಲ್ಲ ಗ್ರಾಮಗಳ ರೈತರು ಸಾಮೂಹಿಕವಾಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ವ್ಯಾಪ್ತಿಯ 1974 ಫಲಾನುಭವಿಗಳಿಗೆ ಇದರ ಪ್ರಯೋಜನ ದೊರೆಯಲಿದೆ. ರೈತರು ಅಗತ್ಯ ದಾಖಲೆಗಳೊಂದಿಗೆ ನಿಗಧಿತ ಅರ್ಜಿಯನ್ನು ಇಲಾಖೆಗೆ ಸಲ್ಲಿಸಿ ಈ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಪುರ ಗ್ರಾಪಂ ಅಧ್ಯಕ್ಷೆ ಜಿ.ಸುಮ, ಉಪಾಧ್ಯಕ್ಷ ಜಿ.ಪಿ.ಈಶ್ವರಪ್ಪ, ಸದಸ್ಯರಾದ ಪ್ರಕಾಶ್, ಅಶೋಕ್, ಮಂಜಪ್ಪ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರು ಹಾಜರಿದ್ದರು.