ಸಾರಾಂಶ
congress appel: help to farmers
ಕನ್ನಡಪ್ರಭ ವಾರ್ತೆ, ಬೀದರ್
ಬಸವಕಲ್ಯಾಣ ಸುತ್ತಮತ್ತಲಿನ ಪ್ರದೇಶದಲ್ಲಿ ಅತಿವೃಷ್ಠಿಯಿಂದಾಗಿ ಭಾರಿ ಪ್ರಮಾಣದಲ್ಲಿ ರೈತರ ಬೆಳೆ, ಫಲವತ್ತಾದ ಭೂಮಿ ಹಾಳಾಗಿದ್ದು ತಕ್ಷಣವೇ ರೈತರ ನೆರವಿಗೆ ಧಾವಿಸಲು ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕ ಆನಂದ ದೇವಪ್ಪ ಮನವಿ ಸಲ್ಲಿಸಿದರು.ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಭೇಟಿಯಾಗಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಕುರಿತಂತೆ ಮನವರಿಕೆ ಮಾಡಿ, ರೈತರು ಬಹಳಷ್ಟು ಸಂಕಷ್ಟದಲ್ಲಿದ್ದಾರೆ, ಸೇತುವೆಗಳು ಕುಸಿದುಬಿದ್ದಿವೆ, ಕೆರೆಗಳು ಒಡೆದು ಅಪಾರ ಹಾನಿಯುಂಟಾಗಿದೆ ಎಂದು ವಿವರ ನೀಡಿದರು.
ಹಾನಿಯ ಕುರಿತಂತೆ ಈಗಾಗಲೇ ಸರ್ವೆಗಳು ನಡೆ ದಿದ್ದು ಪ್ರಾಮಾಣಿಕ ಹಾಗೂ ವಾಸ್ತವಾಂಶವುಳ್ಳ ಸರ್ವೆಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಬಸವಕಲ್ಯಾಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವದಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿಸಿದರು.ಬಸವಕಲ್ಯಾಣ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಅನುಭವ ಮಂಟಪಕ್ಕೆ 200ಕೋಟಿ ರು.ಗಳನ್ನು ಬಿಡುಗಡೆ ಮಾಡಿದ್ದೆಯಾದಲ್ಲಿ ಬಸವಾದಿ ಶರಣರು ನಡೆದಾಡಿದ ನೆಲದಲ್ಲಿ ಶರಣ ಹಾಗೂ ವಚನ ಸಾಹಿತ್ಯ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುವದಲ್ಲದೆ ಬಸವಕಲ್ಯಾಣವನ್ನು ವಿಶ್ವ ಪ್ರವಾಸಿ ತಾಣವಾಗಿಸುವ ಕನಸು ನನಸಾಗಿಸುವಂತೆ ಮಾಡಲಿದೆ ಎಂದು ಆನಂದ ದೇವಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿಸಿದರು.
----ಫೈಲ್ 20ಬಿಡಿ4...