ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಸಿಎಸ್ಪಿ ಸೂಚನೆ

| Published : Nov 18 2025, 12:30 AM IST

ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಸಿಎಸ್ಪಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಾಜಿ ಸಚಿವರು ನಾಳೆಯೇ ಒಡೆದಿರುವ ಕಾಂಪೌಂಡ್ ಸರಿಪಡಿಸಬೇಕು. ನಿಮ್ಮಲ್ಲಿ ಅನುದಾನ ಇಲ್ಲಾ ಎಂದರೆ ಅವಶ್ಯಕತೆ ಇದ್ದರೆ ಅದಕ್ಕಾಗುವ ಸಾಮಗ್ರಿಗಳನ್ನು ನಾನೇ ಬರಿಸುತ್ತೇನೆ. ಕಾಂಪೌಂಡ್ ನಿರ್ಮಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನಘಟ್ಟ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ವಿವಾದದ ಸ್ಥಳಕ್ಕೆ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿ ತಹಸೀಲ್ದಾರ್ ಬಸವರಡ್ಡೆಪ್ಪ ರೋಣದರಿಗೆ ದೂರವಾಣಿ ಕರೆ ಮಾಡಿ ನಾಳೆಯೇ ಒಡೆದಿರುವ ಕಾಂಪೌಂಡ್ ಸರಿಪಡಿಸುವಂತೆ ಸೂಚಿಸಿದರು.

ಡಿಸೆಂಬರ್ 2 ರಂದು 21ನೇ ವರ್ಷದ ಹನುಮ ಜಯಂತಿ ಮಹೋತ್ಸವ ನಡೆಯಲಿದೆ. ಈ ರೀತಿ ಅಕ್ರಮವಾಗಿ ಕಾಂಪೌಂಡ್ ಕೆಡವಿ ಹನುಮ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಈಗಾಗಲೇ ಮಂಡ್ಯದ ಕೆರಗೋಡಿನಲ್ಲಿ ಕೋಮು ಗಲಭೆಗಳು ನಡೆದು ರಾಜ್ಯಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಹಾಗೆ ಮತ್ತೊಂದು ಕೆರೆಗೋಡು ಪ್ರಕರಣ ಮರುಕಳಿಸದಂತೆ ಎಚ್ಚರವಹಿಸಿ ಎಂದು ತಹಸೀಲ್ದಾರ್‌ಗೆ ತಿಳಿಸಿದರು.ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಾಜಿ ಸಚಿವರು ನಾಳೆಯೇ ಒಡೆದಿರುವ ಕಾಂಪೌಂಡ್ ಸರಿಪಡಿಸಬೇಕು. ನಿಮ್ಮಲ್ಲಿ ಅನುದಾನ ಇಲ್ಲಾ ಎಂದರೆ ಅವಶ್ಯಕತೆ ಇದ್ದರೆ ಅದಕ್ಕಾಗುವ ಸಾಮಗ್ರಿಗಳನ್ನು ನಾನೇ ಬರಿಸುತ್ತೇನೆ. ಕಾಂಪೌಂಡ್ ನಿರ್ಮಿಸಬೇಕು ಎಂದರು.

ನಂತರ ಬಸವರಡ್ಡೆಪ್ಪ ರೋಣದ ಮಾಜಿ ಸಚಿವರ ಮಾತಿಗೆ ಸ್ಪಂದಿಸಿ ನಾಳೆಯೇ ಸರಿಪಡಿಸುವುದಾಗಿ ತಿಳಿಸಿದರು.

ಡಿಸೆಂಬರ್ 2 ರಂದು 21ನೇ ಹನುಮ ಜಯಂತೋತ್ಸವಕ್ಕೆ ವಿಶೇಷ ಪೂಜೆ ಇದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಅನ್ನಸಂತರ್ಪಣೆಯಲ್ಲಿ ಭಾಗವಹಿಸುವರು. ಕಳೆದ ಅಕ್ಟೋಬರ್ 5 ರಂದು ಅಕ್ರಮವಾಗಿ ಕಾಂಪೌಂಡ್ ಒಡೆದು ಹಾಕಿದ ವಿಚಾರವಾಗಿ ತಹಸೀಲ್ದಾರ್ ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಅಕ್ಟೋಬರ್ 11 ರಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಹ ಭೇಟಿ ನೀಡಿ ಕಾಂಪೌಂಡನ್ನು ನಿರ್ಮಿಸುವಂಚೆ ಸೂಚಿಸಿದ್ದರು. ಶಾಸಕರ ಮಾತಿಗೂ ನಿರ್ಲಕ್ಷ್ಯ ತೋರಿದ ತಹಸೀಲ್ದಾರ್ ಮುಜರಾಯಿ ಇಲಾಖೆಗೆ ಸಂಬಂಧಿಸಿದ ಕಾಂಪೌಂಡ್ ಒಡೆದು ಹಾಕಿದ್ದು, ಯಾವುದೇ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳು ಅಕ್ರಮದಾರನ ಪರವಾಗಿದ್ದಾರೆ ಎಂಬ ಸಂಶಯಗಳು ಮೂಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಆಂಜನೇಯ ದೇವಾಲಯದ ಸಮಿತಿ ಅಧ್ಯಕ್ಷ ಜಗದೀಶ್, ಹಿರೇಮರಳಿ ಗ್ರಾಪಂ ಸದಸ್ಯರಾದ ಸುನಿಲ್, ಕುಮಾರಸ್ವಾಮಿ, ವಿಜಯಕುಮಾರ್, ಮುಖಂಡರಾದ ಉಮೇಶ್, ಶಿವಣ್ಣ, ಜಯರಾಮು,ಸಗಾಯಂ, ಶ್ರೀನಿವಾಸ್, ಎಸ್.ಎಂ.ಬಿ.ಶಿವಣ್ಣ, ಬನಘಟ್ಟ ಡೇರಿ ಅಧ್ಯಕ್ಷ ದಿನೇಶ್, ಕೇಶವ, ಅಶ್ವತ್ ಹಾಗೂ ಬೇವಿನ ಕುಪ್ಪೆ, ಬನಘಟ್ಟ,ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.