ಕನ್ನಡಪ್ರಭ ವಾರ್ತೆ ಬೆಳಗಾವಿ ಬನಾರಸ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಪ್ರಮೋಷನ್ ಬೆಳಗಾವಿಯಲ್ಲಿ ಗುರುವಾರ ಅದ್ಧೂರಿಯಾಗಿ ನಡೆದಿದ್ದು, ಚಿತ್ರದ ಹಾಡು-ಟ್ರೇಲರ್‌ಗೆ ಜನ ಫುಲ್ ಫಿದಾ ಆದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬನಾರಸ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ನಟ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಪ್ರಮೋಷನ್ ಬೆಳಗಾವಿಯಲ್ಲಿ ಗುರುವಾರ ಅದ್ಧೂರಿಯಾಗಿ ನಡೆದಿದ್ದು, ಚಿತ್ರದ ಹಾಡು-ಟ್ರೇಲರ್‌ಗೆ ಜನ ಫುಲ್ ಫಿದಾ ಆದರು.ನಗರದ ಕೆಎಲ್ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ನಟಿಸಿದ ಕಲ್ಟ್ ಸಿನಿಮಾ ಪ್ರಮೋಷನ್ ಅಪಾರ ಸಿನಿಪ್ರಿಯರ ಸಮ್ಮುಖದಲ್ಲಿ ನಡೆಯಿತು. ಬೃಹತ್ ಪರದೆ ಮೇಲೆ ಕಲ್ಟ್ ಚಿತ್ರದ ಟ್ರೇಲರ್ ಹಾಗೂ ಅಯ್ಯೋ ಶಿವನೇ, ಬ್ಲಡಿ ಲವ್ ಎಂಬ ಎರಡು ಹಾಡುಗಳನ್ನು ಆಲಿಸಿದ ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ನಟ ಜೈದ್ ಖಾನ್ ಬೆಳಗಾವಿಗೆ ಬರುತ್ತಿದ್ದಂತೆ ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿದರು. ನಂತರ ಪುನೀತ ರಾಜಕುಮಾರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ನಾಯಕ ನಟ ಜೈದ್ ಖಾನ್, ಕಲ್ಟ್ ಕನ್ನಡ ಚಲನಚಿತ್ರ ಜ.23ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಹಾಗೂ ಹಾಡುಗಳು ಜನಮನ ಗೆದ್ದಿವೆ. ಕುಟುಂಬ ಸಮೇತರಾಗಿ ಚಿತ್ರವನ್ನು ನೋಡಬಹುದು. ಎಲ್ಲ ವರ್ಗದ ಜನರಿಗೆ ಚಿತ್ರ ಇಷ್ಟವಾಗಲಿದೆ. ಕನ್ನಡಿಗರು ಚಿತ್ರ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಅನೇಕ ಕಡೆಗಳಲ್ಲಿ ಚಿತ್ರೀಕರಣ ಆಗಿದೆ. ನಿರ್ದೇಶಕರು ಉತ್ತಮ ಕಥೆಯುಳ್ಳ ಸಿನಿಮಾ ನಿರ್ದೇಶಿಸಿದ್ದು, ಗುಣಮಟ್ಟದ ಚಿತ್ರ ಸಿದ್ದವಾಗಿದೆ. ಕಿತ್ತೂರು ಉತ್ಸವದಲ್ಲಿ ಚಿತ್ರದ ಎರಡನೇ ಹಾಡು ಬ್ಲಡಿ ಲವ್ ಬಿಡುಗಡೆಯಾಗಿದೆ. ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಕೆ.ವಿ.ಎನ್. ಪ್ರೊಡಕ್ಷನ್ಸ್ ಸಿನಿಮಾ ಅರ್ಪಿಸುತ್ತಿದೆ. ಅನಿಲಕುಮಾರ ಚಿತ್ರಕತೆ ಬರೆದು, ನಿರ್ದೇಶನ ಮಾಡಿದ್ದಾರೆ. ಜೆ.ಎಸ್.ವಾಲಿ ಛಾಯಾಚಿತ್ರಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ನಾಯಕಿಯರಾಗಿ ರಚಿತಾ ರಾಮ್, ಮಲೈಕಾ ವಸುಪಾಲ್ ಅಭಿನಯಿಸಿದ್ದಾರೆ ಎಂದು ತಿಳಿಸಿದರು.ತಂದೆ ಜಮೀರ್ ಅಹಮ್ಮದ್ ಖಾನ್ ರಾಜಕೀಯದಲ್ಲಿದ್ದು, ತಾವು ರಾಜಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಗೆ, ನನಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ವೃತ್ತಿಪರ ನಟನಾಗಿದ್ದೇನೆ. ರಾಜಕೀಯಕ್ಕೆ ಬರುವ ಉದ್ದೇಶ ಇಲ್ಲ, ಅಭಿಮಾನಿಗಳು ಬಯಸುವ ಚಿತ್ರಗಳನ್ನು ಮಾಡುತ್ತೇನೆ. ಇನ್ನು ಮುಂದೆ ವರ್ಷಕ್ಕೆ ಒಂದಾದರೂ ಚಿತ್ರ ಮಾಡುವ ಉದ್ದೇಶವಿದೆ ಎಂದರು.
ಯುವ ಮುಖಂಡ ಮೃಣಾಲ್ ಹೆಬ್ಬಾಳಕರ ಮಾತನಾಡಿ, ನಟ ಜೈದ್ ಖಾನ್ ಅಭಿನಯವನ್ನು ಈಗಾಗಲೇ ಅಭಿಮಾನಿಗಳು ಮೆಚ್ಚುಕೊಂಡಿದ್ದಾರೆ. ಕಲ್ಟ್ ಚಿತ್ರ ಕರ್ನಾಟಕ ಅಷ್ಟೇ ಅಲ್ಲ, ದೇಶದೆಲ್ಲೆಡೆ ಸದ್ದು ಮಾಡಲಿದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.ಯುವ ನಾಯಕ ಅಮನ್ ಸೇಠ ಮಾತನಾಡಿ, ಜೈದ್ ಖಾನ್ ನಟಿಸಿದ ಚಿತ್ರದ ಬಗ್ಗೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾದ ಬಳಿಕ ಬ್ಲಾಕ್ ಬಸ್ಟರ್ ದಾಖಲೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.