ಸಾರಾಂಶ
ದೇವನಹಳ್ಳಿ: ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಿರಿಯರು ನೀಡಿರುವ ಕೊಡುಗೆ. ದುರ್ಗಾ ನಮಸ್ಕಾರ ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇವೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ದೇವನಹಳ್ಳಿ ಶಾಖಾಧ್ಯಕ್ಷ ಮುನಿವೆಂಕಟಪ್ಪ ತಿಳಿಸಿದರು.
ದೇವನಹಳ್ಳಿ: ಸಂಸ್ಕೃತಿ, ಸಂಪ್ರದಾಯ, ಆಚರಣೆ ಹಿರಿಯರು ನೀಡಿರುವ ಕೊಡುಗೆ. ದುರ್ಗಾ ನಮಸ್ಕಾರ ಶ್ರದ್ಧಾಭಕ್ತಿಯಿಂದ ಆಚರಿಸಿದ್ದೇವೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ದೇವನಹಳ್ಳಿ ಶಾಖಾಧ್ಯಕ್ಷ ಮುನಿವೆಂಕಟಪ್ಪ ತಿಳಿಸಿದರು.
ಪಟ್ಟಣದ ಕೋಟೆ ಮಾರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ದುರ್ಗಾ ಮಂತ್ರ ಪಠಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕ ಕಲ್ಯಾಣಾರ್ಥ ಹಾಗೂ ಸಕಲ ಜೀವರಾಶಿಗಳ ಒಳಿತಿಗಾಗಿ ನವರಾತ್ರಿಯ 9ನೇ ದಿನದಂದು ಬೆಳಗಿನ ಜಾವ ಅಗ್ನಿಹೋತ್ರಿ ಕ್ರಿಯಾತ್ಮಕ ಯೋಗಾಸನ, ಗಣಪತಿ ನಮಸ್ಕಾರ, ಒಂಭತ್ತು ಸುತ್ತಿನ ದುರ್ಗಾ ನಮಸ್ಕಾರ ನಂತರ ಸೂರ್ಯ ನಮಸ್ಕಾರ 108 ಬಾರಿ ದುರ್ಗಾ ಮಂತ್ರ ಪಠಣೆ ಮಾಡಲಾಯಿತು ಎಂದರು.ಯೋಗ ಶಿಕ್ಷಕರಾದ ನಾಗೇಶ್ ಮಾತನಾಡಿ, ನವರಾತ್ರಿಯ ಯೋಗ ದೈಹಿಕ-ಮಾನಸಿಕ ಯೋಗಕ್ಷೇಮ. ಯೋಗ ದೇಹವನ್ನು ಬಲಪಡಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ಮನಷ್ಯನಿಗೆ ಬಾಹ್ಯ ಸೌಂದರ್ಯ ಎಷ್ಟು ಮುಖ್ಯವೋ ಆಂತರಿಕ ಸೌಂದರ್ಯ ಅಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ತರಗುಚಾವಡಿ ಶ್ರೀ ಆಂಜಿನೇಯ ಸ್ವಾಮಿ ಸಮುಧಾಯ ಭವನ, ಶಾಂತಿನಗರ ಶಾಖೆ, ಪುಟ್ಟಪ್ಪನಗುಡಿ ಬೀದಿ ಶಾಖೆ, ಮತ್ತು ದೇವನಹಳ್ಳಿ ತಾಲೂಕಿನ ಆವತಿ, ಬೈಚಾಪುರ, ಚನ್ನಹಳ್ಳಿ, ಕೋಡಿಮಂಚೇನಹಳ್ಳಿ, ತೆಳ್ಳೋಹಳ್ಳಿ ಶಾಖೆಗಳ ಯೋಗಾ ಪಟುಗಳು ಭಾಗವಹಿಸಿದ್ದರು.ಸಮಿತಿ ಜಿಲ್ಲಾ ಸಂಚಾಲಕಿ ಮಹಾಲಕ್ಷ್ಮೀ, ಸಹಸಂಚಾಲಕ ಸುರೇಶ, ಯೋಗ ಪ್ರಮುಖರಾದ ದೀಪಕ್, ವಿನಯ್ ಕುಮಾರ್, ಸತೀಶ್, ಶ್ರೀನಿವಾಸ, ಶ್ರೀನಿವಾಸ್, ಗೋಪಿ, ಮಂಜುನಾಥ, ಭಾರತಿ, ಲಕ್ಷ್ಮೀವಿಜಯಕುಮಾರ್, ತುಳಸಿ, ಚೈತ್ರ, ಶ್ಯಾಮಲಾ, ರೇಖಾದೀಪಕ್ ಇತರರಿದ್ದರು.
೩೦ ದೇವನಹಳ್ಳಿ ಚಿತ್ರಸುದ್ದಿ: ೨ದೇವನಹಳ್ಳಿಯಲ್ಲಿ ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ದುರ್ಗಾ ಮಂತ್ರ ಪಠಣೆಗೆ ಅಧ್ಯಕ್ಷ ಮುನಿವೆಂಕಟಪ್ಪ ಚಾಲನೆ ನೀಡಿದರು.