ಸಾರಾಂಶ
ಸುದ್ದಿಗೋಷ್ಠಿ । ಘಟಕದ ನೂತನ ಅಧ್ಯಕ್ಷ ಮಾಹಿತಿ । ನೂತನ ಪದಾಧಿಕಾರಿಗಳ ಆಯ್ಕೆಕನ್ನಡಪ್ರಭ ವಾರ್ತೆ ಅರಸೀಕೆರೆ
ಪ್ರೊ. ಬಿ. ಕೃಷ್ಣಪ್ಪ ೫೦ ವರ್ಷಗಳ ಹಿಂದೆ ಸ್ಥಾಪಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ನೂತನ ಘಟಕವು ಅಸ್ತಿತ್ವಕ್ಕೆ ಬಂದಿದೆ. ಈ ಘಟಕದ ಮೂಲಕ ನೂತನ ಪದಾಧಿಕಾರಗಳನ್ನು ಆಯ್ಕೆ ಮಾಡಿ ವಿವಿಧ ಜವಾಬ್ದಾರಿ ನೀಡಲಾಗಿದೆ ಎಂದು ನೂತನ ಅಧ್ಯಕ್ಷ ದಾಸಪ್ಪ ಹೇಳಿದರು.ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಘಟಕದ ಅಧ್ಯಕ್ಷ ವಿ.ಆರ್ ಪ್ರಕಾಶ್, ವಿಭಾಗೀಯ ಸಂಚಾಲಕ ಜಾಜೂರು ಬಾಸ್ಕರ್ ಮತ್ತು ಸಂಘಟನಾ ಸಂಚಾಲಕ ಗೋವಿಂದರಾಜು ಹೊಸೂರು, ಇವರು ಅರಸೀಕೆರೆ ತಾಲೂಕು ನೂತನ ಘಟಕದೊಂದಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಘೋಷಣೆ ಮಾಡಿದ್ದಾರೆ. ಗೌರವ ಅಧ್ಯಕ್ಷರಾಗಿ ರಂಗಪ್ಪ ಚಲ್ಲಾಪುರ, ಉಪಾಧ್ಯಕ್ಷರಾಗಿ ಮಂಜುನಾಥ್ ಮಲ್ಲದೇವಿಹಳ್ಳಿ, ಕಾರ್ಯದರ್ಶಿ ಕೊಟ್ರೇಶ್ ನರಸೀಪುರ, ಕಸಬಾ ಹೋಬಳಿ ಕುಮಾರ್ ತುಬೀನಕೆರೆ, ಬಾಣಾವರ ಹೋಬಳಿ ರಾಮಸ್ವಾಮಿ, ಜಾವಗಲ್ ಹೋಬಳಿ ಕಾಂತರಾಜು, ಬಸವರಾಜು ಉಂಡಿಗನಾಳು, ಗಂಡಸಿ ಹೋಬಳಿ ನಂಜೇಶ ನಾಗರಾಳು ಮತ್ತು ಕಣಕಟ್ಟೆ ಹೋಬಳಿ ಚನ್ನಬಸಪ್ಪ ಶಶಿವಾಳ ಇವರನ್ನು ಹೋಬಳಿ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.
ತಾಲೂಕು ಸಂಘಟನಾ ಸಂಚಾಲಕರಾಗಿ ಸಿದ್ದೇಶ್ ಎನ್.ಕೆ. ನಾಗವೇದಿ, ಅಶೋಕ್ ಜಾಜೂರು, ಚಂದ್ರಶೇಖರ್ ನಾಗೇನಹಳ್ಳಿ, ಪ್ರಭಾಕರ್ ಅರಸೀಕೆರೆ, ಧರ್ಮಶೇಖರ್ ನಾಗವೇದಿ, ನಿಂಗರಾಜು ಹಿರೇಸಾದರಹಳ್ಳಿ, ಸಿದ್ದೇಶ್ ಶಶಿವಾಳ, ಕುಮಾರ್ ದುಮ್ಮೇನಹಳ್ಳಿ ಮತ್ತು ಬೈರಪ್ಪ ಮೇಟಿಕುರ್ಕೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.ನೂತನ ಉಪಾಧ್ಯಕ್ಷ ಮಂಜುನಾಥ ಮಲ್ಲದೇವಿಹಳ್ಳಿ ಮಾತನಾಡಿ, ೫೦ ವರ್ಷಗಳ ಇತಿಹಾಸ ಇವರು ಡಿಎಸ್‌ಎಸ್ ಸಂಘವು ದಲಿತರ ಕ್ಷೇಮಾಭಿವೃದ್ಧಿ ಮತ್ತು ರಕ್ಷಣೆಗಾಗಿ ಸ್ಥಾಪಿತವಾದ ರಾಜ್ಯ ಘಟಕವಾಗಿದೆ. ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿಸಿದ ಈ ಸಮಿತಿಯು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಧೈಯಗಳನ್ನು ಆಳವಡಿಸಿಕೊಂಡು ದಲಿತರ ಪರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದೆ. ತಾಲೂಕಿನಲ್ಲಿ ವಿವಿಧೆಡೆ ಮುಜರಾಯಿ ದೇವಸ್ಥಾನಕ್ಕೆ ದಲಿತರ ಪ್ರವೇಶವನ್ನು ನಿರಾಕರಿಸಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಲೂಕು ಆಡಳಿತದಿಂದ ನಡೆಸಲ್ಪಡುವ ದಲಿತರ ಕುಂದು ಕೊರೆತಗಳ ಸಂಬಂಧ ಅನೇಕ ಪ್ರಕರಣಗಳು ಇನ್ನು ಇತ್ಯರ್ಥವಾಗಿರುವುದಿಲ್ಲ. ಈ ಸಂಬಂಧ ಮುಂಬರುವ ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ಕುಂದುಕೊರತೆ ಸಭೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೋರಾಟ ಮಾಡುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮಾಹಿತಿಯನ್ನು ದಲಿತ ಕುಟುಂಬಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಯಾವುದೇ ಸಮುಧಾಯದ ವಿರುದ್ಧ ನಮ್ಮ ಹೋರಾಟಗಳಿರದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ತತ್ವ ಆದರ್ಶಗಳ ಅಡಿಯಲ್ಲಿ ನಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ನೊಂದವರ ಪರವಾಗಿ ಹೋರಾಟ ಮಾಡಲಿದ್ದೇವೆ. ಅನಾಮಧೇಯ ಸಂಘ ಸಂಸ್ಥೆಗಳ ಹೆಸರಿನಲ್ಲಿ ಅಂಬೇಡ್ಕರ್ ಫೊಟೋ ಮತ್ತು ಹೆಸರು ಯಾವುದೇ ಕಾರಣಕ್ಕೂ ದುರುಪಯೋಗವಾಗದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಕೊಟ್ರೇಶ್ ನರಸೀಪುರ, ಕುಮಾರ್ ದುಮ್ಮೇನಹಳ್ಳಿ, ಕಾಂತರಾಜು ಉಪಸ್ಥಿತರಿದ್ದರು.
ಅರಸೀಕೆರೆ ನಗರದಲ್ಲಿ ಡಿಎಸ್‌ಎಸ್ ನೂತನ ತಾಲೂಕು ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.