ಈವರೆಗೆ ಎಥೆನಾಲ್‌ಗೆ ೭೧ ಖಾತೆಗಳು ಮತ್ತು ಪೌಲ್ಟರಿಗೆ ೧೪೫ ಖಾತೆಗಳು ಮಾತ್ರ ನೋಂದಣಿಯಾಗಿವೆ. ಇನ್ನೂ ೨ ಸಾವಿರಕ್ಕೂ ಹೆಚ್ಚಿನ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ನೋಂದಣಿ ಮಾಡಿಸಿಕೊಳ್ಳಲು ನಿತ್ಯ ಸಹಕಾರಿ ಸಂಘದ ಎದುರು ಸರದಿ ನಿಂತಿದ್ದಾರೆ.

ಶಿರಹಟ್ಟಿ: ತಾಲೂಕಿನಲ್ಲಿ ಒಟ್ಟು ೫೮ ಹಳ್ಳಿಗಳಿದ್ದು, ಈ ಬಾರಿ ಸಮಯಕ್ಕೆ ಸರಿಯಾಗಿ ಬಿತ್ತನೆ ವೇಳೆಗೆ ಉತ್ತಮವಾದ ಮಳೆ ಸುರಿದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆ ಬೆಳೆದಿದ್ದು, ನಿರೀಕ್ಷೆಗೂ ಮೀರಿ ಇಳುವರಿ ಕೂಡ ಬಂದಿದೆ. ಆದರೆ ಮಾರುಕಟ್ಟಯಲ್ಲಿ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ತಕ್ಷಣವೇ ಸ್ಥಗಿತಗೊಂಡಿರುವ ಮೆಕ್ಕೆಜೋಳ ಖರೀದಿ ಕೇಂದ್ರ ನೋಂದಣಿ ಪ್ರಕ್ರಿಯೆಯ ಅವಧಿ ವಿಸ್ತರಿಸಬೇಕೆಂದು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಬುಧವಾರ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ವಿ. ಕಪ್ಪತ್ತನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅವರು, ಈವರೆಗೆ ಎಥೆನಾಲ್‌ಗೆ ೭೧ ಖಾತೆಗಳು ಮತ್ತು ಪೌಲ್ಟರಿಗೆ ೧೪೫ ಖಾತೆಗಳು ಮಾತ್ರ ನೋಂದಣಿಯಾಗಿವೆ. ಇನ್ನೂ ೨ ಸಾವಿರಕ್ಕೂ ಹೆಚ್ಚಿನ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ನೋಂದಣಿ ಮಾಡಿಸಿಕೊಳ್ಳಲು ನಿತ್ಯ ಸಹಕಾರಿ ಸಂಘದ ಎದುರು ಸರದಿ ನಿಂತಿದ್ದಾರೆ. ಆದರೆ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ.

ಕಳೆದ ಒಂದು ವಾರದಿಂದ ನೋಂದಣಿ ಮಾಡಿಸಲು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದು, ಜಿಲ್ಲಾಧಿಕಾರಿಗಳು ತಮ್ಮ ಹಂತದಲ್ಲಿಯೇ ಸಮಸ್ಯೆ ಇರ್ಥ್ಯವಾಗುವುದಿದ್ದರೆ ತಕ್ಷಣವೇ ನಮ್ಮ ತಾಲೂಕಿಗೆ ಮೊದಲ ಪ್ರಾಶಸ್ತ್ಯ ನೀಡಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ನಮ್ಮ ಸಂಘದಲ್ಲಿ ಇಲ್ಲಿಯ ವರೆಗೆ ೧೬ ರೈತರಿಂದ ೫೩೩ ಕ್ವಿಂಟಲ್ ಖರೀದಿ ಮಾಡಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಮುಖಂಡರಾದ ಹುಮಾಯೂನ್ ಮಾಗಡಿ, ತಿಪ್ಪಣ್ಣ ಕೊಂಚಿಗೇರಿ, ಈರಣ್ಣ ಹಿರೇಮಠ ಸೇರಿ ಅನೇಕರು ಇದ್ದರು.