ಸಾರಾಂಶ
ಜೀವನದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಆಸಕ್ತಿ ಬಹಳ ಮುಖ್ಯ. ನಾನು ನಿವೃತ್ತಿಯಾಗಿ 27 ವರ್ಷಗಳು ಕಳೆದಿವೆ. ನಾನು ಒಂದು ದಿನವೂ ಶಾಲೆಗೆ ತಡವಾಗಿ ಹೋದವನಲ್ಲ, ಶಾಲೆಯಿಂದ ಬೇಗ ಹೊರಟವನಲ್ಲ, ಕುಳಿತು ಪಾಠ ಮಾಡಿದವನಲ್ಲ, ಯಾವ ವಿದ್ಯಾರ್ಥಿಯನ್ನೂ ಏಕವಚನದಲ್ಲಿ ಮಾತನಾಡಿಸಿದವನಲ್ಲ. ಈ ರೀತಿಯ ಮೌಲಿಕ ಆದರ್ಶಗಳು ಇಲ್ಲದೆ ಕೆಲಸ ಮಾಡಿದರೆ ವ್ಯರ್ಥ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಟ್ರಾವಲ್ಸ್ಅಸೋಸಿಯೇಶನ್, ಸ್ಕಾಲ್ಇಂಟರ್ ನ್ಯಾಷನಲ್ಮೈಸೂರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಭಾರತ್ಇಂಟರ್ ನ್ಯಾಷನಲ್ಟ್ರಾವಲ್ಸ್ಕಚೇರಿಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ಶಿಕ್ಷಕರನ್ನು ಸನ್ಮಾನಿಸಲಾಯಿತು.ನಂಜನಗೂಡು ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಸ್ಕೌಟ್ಸ್ಮತ್ತು ಗೈಡ್ಸ್ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಶಿಕ್ಷಕಿ ಶಶಿಕಲಾ ಹಾಗೂ ಒಂದು ದಿನವೂ ಕುಳಿತು ಪಾಠ ಮಾಡದೆ ನಿಂತೇ ಪಾಠ ಮಾಡುತ್ತಿದ್ದ ಹಿರಿಯ ಶಿಕ್ಷಕ ರಾಜು ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ರಾಜು ಮಾತನಾಡಿ, ಜೀವನದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಆಸಕ್ತಿ ಬಹಳ ಮುಖ್ಯ. ನಾನು ನಿವೃತ್ತಿಯಾಗಿ 27 ವರ್ಷಗಳು ಕಳೆದಿವೆ. ನಾನು ಒಂದು ದಿನವೂ ಶಾಲೆಗೆ ತಡವಾಗಿ ಹೋದವನಲ್ಲ, ಶಾಲೆಯಿಂದ ಬೇಗ ಹೊರಟವನಲ್ಲ, ಕುಳಿತು ಪಾಠ ಮಾಡಿದವನಲ್ಲ, ಯಾವ ವಿದ್ಯಾರ್ಥಿಯನ್ನೂ ಏಕವಚನದಲ್ಲಿ ಮಾತನಾಡಿಸಿದವನಲ್ಲ. ಈ ರೀತಿಯ ಮೌಲಿಕ ಆದರ್ಶಗಳು ಇಲ್ಲದೆ ಕೆಲಸ ಮಾಡಿದರೆ ವ್ಯರ್ಥ. ಜನರು ವೃತ್ತಿಯಲ್ಲಿ ಮಾತ್ರವಲ್ಲದೆ ಈ ಶಿಸ್ತನ್ನು ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದರು.ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಶಶಿಕಲಾ ಮಾತನಾಡಿ, ನಾನು ನಿವೃತ್ತಳಾಗಿ 2 ವರ್ಷ ಕಳೆದಿದೆ. ಈಗಲೂ ಸ್ಕೌಟ್ಸ್ಹಾಗೂ ಗೈಡ್ಸ್ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದಕ್ಕೆ ಮಾತ್ರ ನಿವೃತ್ತಿ ಎಂಬುದಿಲ್ಲ. ಒಮ್ಮೆ ನಾನು ತರಬೇತಿ ನೀಡಿದ ನಂಜನಗೂಡು ಭಾಗದ ಗ್ರಾಮೀಣ ವಿದ್ಯಾರ್ಥಿಗಳು ರಾಜ್ಯಪಾಲರ ಬಳಿ ಬಹುಮಾನ ಪಡೆದಿದ್ದರು. ಅದಕ್ಕಿಂತ ದೊಡ್ಡ ಸಾಧನೆ ಮತ್ತೇನು ಬೇಕು. ಆ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಈ ವೇಳೆ ಸ್ಕಾಲ್ಇಂಟರ್ ನ್ಯಾಷನಲ್ಮೈಸೂರು ವಿಭಾಗದ ಅಧ್ಯಕ್ಷ ಸಿ.ಎ. ಜಯಕುಮಾರ್ಮಾತನಾಡಿ, ಶಿಕ್ಷಕರು ಎಲ್ಲಾ ವೃತ್ತಿಗಳನ್ನೂ ರೂಪಿಸುವವರು. ಅವರು ಅತ್ಯಂತ ಹೆಚ್ಚು ಅಭಿನಂದನಾರ್ಹರು. ಇಂತಹ ಹಿರಿಯ ಶಿಕ್ಷಕರಿಂದ ಅದೆಷ್ಟೋ ಜನರ ಜೀವನ ಬೆಳಗಿರುತ್ತದೆ. ನಮ್ಮ ಜೀವನದ ದಾರಿದೀಪದಂತಿರುವ ಶಿಕ್ಷಕರಿಗೆ ನಾವು ಎಷ್ಟು ಋಣಿಯಾಗಿದ್ದರೂ ಸಾಲದು ಎಂದರು.ಭಾರತ್ಇಂಟರ್ ನ್ಯಾಷನಲ್ಟ್ರಾವಲ್ಸ್ ಸಂಸ್ಥಾಪಕ ಮಹೇಂದ್ರ ಸಾಲಿಯಾನ್, ಮೈಸೂರು ಟ್ರಾವಲ್ಸ್ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಎಸ್.ಜೆ. ಅಶೋಕ್ ಮೊದಲಾದವರು ಇದ್ದರು.