ಕನ್ನಡಪ್ರಭ ವಾರ್ತೆ ಸವದತ್ತಿ ಗ್ರಾಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಟ್ಟಿ ಓಣಿಯ ದ್ಯಾಮವ್ವನ ಗುಡಿಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯ ಜೊತೆಗೆ ಜಾತ್ರಾ ಉತ್ಸವದ ದೇಣಿಗೆ ಸಂಗ್ರಹಕ್ಕೆ ರವಿವಾರ ಶಾಸಕರು, ರೈತರು, ಅಧಿಕಾರಿಗಳು ಮತ್ತು ಪ್ರಮುಖರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು

ಕನ್ನಡಪ್ರಭ ವಾರ್ತೆ ಸವದತ್ತಿ

ಗ್ರಾಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಟ್ಟಿ ಓಣಿಯ ದ್ಯಾಮವ್ವನ ಗುಡಿಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯ ಜೊತೆಗೆ ಜಾತ್ರಾ ಉತ್ಸವದ ದೇಣಿಗೆ ಸಂಗ್ರಹಕ್ಕೆ ರವಿವಾರ ಶಾಸಕರು, ರೈತರು, ಅಧಿಕಾರಿಗಳು ಮತ್ತು ಪ್ರಮುಖರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ದೇವಸ್ಥಾನದಲ್ಲಿ ಸಾಂಕೇತಿಕವಾಗಿ ದೇಣಿಗೆ ರಶೀದಿಗಳ ಪೂಜೆ ಸಲ್ಲಿಸುವ ಮೂಲಕ ಐದು ಜನ ಕುರುಬ ಸಮಾಜ ಬಾಂಧವರಿಂದ ದೇಣಿಗೆ ಸಂಗ್ರಹಿಸಲಾಯಿತು. ಅದರಲ್ಲಿ ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಗ್ರಾಮದೇವಿ ಜಾತ್ರಾ ಉತ್ಸವದ ಪ್ರಥಮ ರಶೀದಿ ದೇಣಿಗೆಯಾಗಿ ₹ ೧ಲಕ್ಷ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ ₹ ೫೦ ಸಾವಿರ ದೇಣಿಗೆ ನೀಡುವ ಮೂಲಕ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದರು.ಶಾಸಕ ವಿಶ್ವಾಸ ವೈದ್ಯ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ವಿರುಪಾಕ್ಷಣ್ಣ ಮಾಮನಿ ಮಾತನಾಡಿ, ಜಾತ್ರೆಯ ಪ್ರಾರಂಭಕ್ಕೆ ಎಲ್ಲ ಸಮಾಜ ಬಾಂಧವರಿಂದ ಸಂಪೂರ್ಣ ಸಹಕಾರ ದೊರಕಿದ್ದು, ಅದ್ದೂರಿಯಾಗಿ ಜಾತ್ರೆ ಮಾಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ೯ ದಿನಗಳವರೆಗೆ ನಡೆಯುವ ಜಾತ್ರೆಗೆ ಬರುವ ಜನರಿಗೆ ಪ್ರಸಾದ ವ್ಯವಸ್ಥೆ ಹಾಗೂ ಇನ್ನುಳಿದಂತ ಎಲ್ಲ ಸೌಕರ್ಯಗಳನ್ನು ಕಲ್ಪಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ರೂಪರೇಷೆಗಳನ್ನು ತಯಾರಿಸಲಾಗುವುದು ಎಂದು ತಿಳಿಸಿದರು.ಈ ವೇಳೆ ಅಡಿವೆಪ್ಪ ಬೀಳಗಿ, ಲಕ್ಷ್ಮಣರಾವ್‌ ಕುಲಕರ್ಣಿ, ಶಿವಾನಂದ ಹೂಗಾರ, ಅಶ್ವತ ವೈದ್ಯ, ಚಂದ್ರಣ್ಣ ಶಾಮರಾಯನವರ, ಶ್ರೀಶೈಲ್ ಮುತಗೊಂಡ, ಅಲ್ಲಮಪ್ರಭು ಪ್ರಭುನವರ, ಭರಮಪ್ಪ ಅಣ್ಣಿಗೇರಿ, ಬಿ.ಎನ್.ಪ್ರಭುನವರ, ಪುಂಡಲೀಕ ಬಾಳೋಜಿ, ಮಂಜುನಾಥ ಪಾಚಂಗಿ, ಬಸವರಾಜ ಗುರಣ್ಣವರ, ಈರಪ್ಪ ಚಿಕ್ಕುಂಬಿ, ಸಿದ್ದಯ್ಯ ವಡಿಯರ, ಲಕ್ಷ್ಮಣ ಹೆಬ್ಬಳ್ಳಿ, ಯಲ್ಲಪ್ಪ ಗೊರವನಕೊಳ್ಳ, ಕಾಶೆಪ್ಪ ಶಿರೂರ, ಸಂಗಪ್ಪ ಮಜ್ಜಗಿ, ರಾಜು ಸಾಲಿಮಠ, ಬಸವರಾಜ ಬಟಕುರ್ಕಿ, ಮಲ್ಲು ಬೀಳಗಿ, ಶಿವಾನಂದ ಮೇಟಿ, ಅಬ್ದುಲ್‌ ಲತೀಪ ಸವದತ್ತಿ, ಗಿರೀಶ ಬೀಳಗಿ ಇತರರು ಉಪಸ್ಥಿತರಿದ್ದರು.