ದೇಶದ ಅಭಿವೃದ್ಧಿಗೆ ಶಿಕ್ಷಕರು ಅತ್ಯವಶ್ಯಕ

| Published : Sep 07 2024, 01:34 AM IST

ಸಾರಾಂಶ

ಶಿಕ್ಷಕ ಶಿಕ್ಷಣ ನೀಡುವುದರ ಮೂಲಕ ಸಮಾಜದಲ್ಲಿ ಸುಧಾರಣೆಯನ್ನು ತರಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುದೇಶದ ಪ್ರಗತಿಯನ್ನು ತರಗತಿಗಳಲ್ಲಿ ಬರೆಯಲಾಗುತ್ತದೆ. ಹೀಗಾಗಿಯೇ ಒಬ್ಬ ವ್ಯಕ್ತಿ ಅಥವಾ ದೇಶದ ಪ್ರಗತಿಗೆ ಶಿಕ್ಷಕರು ಅವಶ್ಯಕ ಎಂದು ಎನ್.ಐಇ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜಿ.ಎಲ್. ಶೇಖರ್ ಅಭಿಪ್ರಾಯಪಟ್ಟರು. ರೋಟರಿ ಐವರಿ ಸಿಟಿ ಮೈಸೂರು ವತಿಯಿಂದ ವನಿತ ಸದನ ಶಾಲೆಯ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿ, ಶಿಕ್ಷಕ ಶಿಕ್ಷಣ ನೀಡುವುದರ ಮೂಲಕ ಸಮಾಜದಲ್ಲಿ ಸುಧಾರಣೆಯನ್ನು ತರಲು ಸಾಧ್ಯವಾಗುತ್ತದೆ. ಜ್ಞಾನವೆಂಬ ಸಂಪತ್ತನ್ನು ಯಾರು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕಲಿಕೆಯಿಂದ ಮಾತ್ರ ಸಾಧ್ಯ ಎಂದರು.ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ಶಿಕ್ಷಣ ಇಲ್ಲದ ಮನುಷ್ಯ ದಿಕ್ಸೂಚಿ ಇಲ್ಲದ ನಾವೆಯಂತೆ ಎಂದು ಅವರು ತಿಳಿಸಿದರು.ಪೀಪಲ್ಸ್ ಪಾರ್ಕ್ ಶಾಲೆಯ ಸಿ. ರಮಾಮಣಿ, ವನಿತಾ ಸದನ ಶಾಲೆಯ ಬಿ.ತ್ರಿವೇಣಿ, ಕೆಪಿಎಸ್ ಶಾಲೆಯ ಜಿ.ರವಿಕುಮಾರ್, ಮಾದಾಪುರ ಸರ್ಕಾರಿ ಪ್ರೌಢಶಾಲೆಯ ಎನ್. ಭೀಮೇಶ್, ಹಾರ್ಡ್ವೀಕ್ ಪ್ರೌಢಶಾಲೆಯ ಕೆ.ವಿ. ಪುಷ್ಪಲತಾ, ನಿವೃತ್ತ ಶಿಕ್ಷಕಿ ಬಿ. ನಿರ್ಮಲಾ, ಸತ್ಯ ಸಾಯಿಬಾಬಾ ಶಾಲೆಯ ಜಿ.ಎನ್. ಕಾವ್ಯಾ ಹಾಗೂ ಆಕ್ಮೆ ಶಾಲೆಯ ಎಸ್. ಗೀತಾ ಅವರನ್ನು ಸನ್ಮಾನಿಸಲಾಯಿತು.ರೋಟರಿ ಐವರಿ ಸಿಟಿ ಮೈಸೂರು ಅಧ್ಯಕ್ಷ ಕೆ. ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸಂಜಯ್ ಅರಸ್, ಸುನಿಲ್ ಬಾಳಿಗ, ಕಾರ್ಯದರ್ಶಿ ಶೋಭ ನಾಗರಾಜ್, ಎಂ.ಕೆ. ಸಚ್ಚಿದಾನಂದನ್, ಎಂ.ಕೆ. ಮುಖೇಶ್, ಇಫ್ತಿಕರ್ ಅಹಮದ್, ಕೇಶವ್ ಬಿ. ಕಾಂಚನ್ ಇದ್ದರು.