ಕುಡಿವ ನೀರಿನ ಸಮಸ್ಯೆಕಂಡು ಬಂದರೆ ಕ್ರಮ ವಹಿಸಿ

| Published : Feb 19 2024, 01:33 AM IST

ಸಾರಾಂಶ

ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳಿಗೆ ಪ್ರತಿದಿನ 50 ಟ್ಯಾಂಕರ್‌ ಮೂಲಕ ಪ್ರತಿದಿನ 106 ಟ್ರೀಪ್ ನೀರು ಪೂರೈಸಲಾಗುತ್ತಿದೆ. ಮುಂಬರುವ ದಿನದಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಸಿ ಅಬೀದ್ ಗದ್ಯಾಳ ಸೂಚಿಸಿದರು.

-ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು.-ಬರಗಾಲದಿಂದ ನೀರಿನ ದುಸ್ತರ ವಾಗುತ್ತಿದ್ದು, ಕುಡಿಯುವ ನೀರಿನ ವಿಷಯದಲ್ಲಿ ಯಾರೂ ತಾತ್ಸಾರ ಮಾಡಬಾರದು.-ಟ್ಯಾಂಕರ್‌ಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜೆನ್ಸಿ ಜಿ.ಪಿ.ಎಸ್‌ನಲ್ಲಿ ಗುರುತಿಸಬೇಕು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಗ್ರಾಮಗಳಿಗೆ ಪ್ರತಿದಿನ 50 ಟ್ಯಾಂಕರ್‌ ಮೂಲಕ ಪ್ರತಿದಿನ 106 ಟ್ರೀಪ್ ನೀರು ಪೂರೈಸಲಾಗುತ್ತಿದೆ. ಮುಂಬರುವ ದಿನದಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಸಿ ಅಬೀದ್ ಗದ್ಯಾಳ ಸೂಚಿಸಿದರು.

ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್‌ ಸಭಾ ಭವನದಲ್ಲಿ ಹಮ್ಮಿಕೊಂಡ ಟಾಸ್ಕ್‌ಫೋರ್ಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಗಾಲದಿಂದ ನೀರಿನ ದುಸ್ತರ ವಾಗುತ್ತಿದ್ದು, ಕುಡಿಯುವ ನೀರಿನ ವಿಷಯದಲ್ಲಿ ಯಾರೂ ತಾತ್ಸಾರ ಮಾಡಬಾರದು. ಹಿರೇಬೇವನೂರ, ಅಥರ್ಗಾ ಮತ್ತು ಹೊರ್ತಿ ಸೇರಿದಂತೆ ತಾಲೂಕಿನಲ್ಲಿರುವ ವಸತಿ ನಿಲಯಗಳಿಗೆ ಬೇಡಿಕೆಯ ಅನುಗುಣವಾಗಿ ನೀರನ್ನು ಪೂರೈಸಬೇಕು. ನೀರು ಪೂರೈಸುವ ಆ್ಯಪ್ ಬಳಸಬೇಕು. ಕಿ.ಮೀ ತಿಳಿಸಬೇಕು. ಅಂದರೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಟ್ಯಾಂಕರ್‌ಗಳಿಗೆ ಜಿ.ಪಿ.ಎಸ್ ಅಳವಡಿಸಿ ಏಜನ್ಸಿ ಜಿ.ಪಿ.ಎಸ್‌ನಲ್ಲಿ ಗುರುತಿಸಬೇಕು. ಮುಂದಿನ ದಿನಗಳಲ್ಲಿ ಟ್ಯಾಂಕರ್ ಆ್ಯಪ್ ಉಪಯೋಗಿಸುವ ಕುರಿತು ಮಾಹಿತಿ ನೀಡಿದರು.

ಕೆಬಿಜೆಎನ್‌ಎಲ್‌ ರಾಂಪೂರ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ, ನಾರಾಯಣಪುರ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಮಾತ್ರ ನೀರು ಇದೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಆಗುವ ಕುರಿತು ಒಂದು ವಾರ ಮುಂಚಿತವಾಗಿ ತಿಳಿಸಿದರೆ, ಬೇಡಿಕೆ ಅನುಗುಣವಾಗಿ ಕುಡಿಯುವ ನೀರಿಗಾಗಿ ಕಾಲುವೆ ಮೂಲಕ ನೀರು ಪೂರೈಸಲಾಗುವದು. ಈಗಾಗಲೇ ಹಂಜಗಿ ಕೆರೆಯಲ್ಲಿ 4 ಮೀಟರ್‌ ಸಂಗೋಗಿ, ಅರ್ಜನಾಳ ಕೆರೆಯಲ್ಲಿ ಶೇ 50 ರಷ್ಟು, ಲೋಣಿ ಕೆರೆಯಲ್ಲಿ ಶೇ 75 ರಷ್ಟು ನೀರು ಇದೆ. ಮಾರ್ಚ್ 31ರವರೆಗೆ ಈ ನೀರು ಕುಡಿಯಲು ಸಾಕಾಗುತ್ತದೆ. ಕಂದಾಯ ಗ್ರಾಮಗಳಲ್ಲಿ ಬಹುಹಳ್ಳಿ ಯೋಜನೆ ಅಡಿಯಲ್ಲಿ ನೀರು ಪೂರೈಕೆ ಆಗುತ್ತಿದೆ ಎಂದು ಹೇಳಿದರು.

ತಹಸೀಲ್ದಾರ್‌ ಮಂಜುಳಾ ನಾಯಕ, ತಾಪಂ ಇಒ ಬಾಬು ರಾಠೋಡ, ಎಇಇ ಎಸ್.ಆರ್.ರುದ್ರವಾಡಿ, ಬಿಇಒ ಟಿ.ಎಸ್.ಅಲಗೂರ, ಪಿಡಿಒ ಸಿ.ಜಿ.ಪಾರೆ, ಬಸವರಾಜ ಬಿರಾದಾರ ಮಾತನಾಡಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿ ಮಹಾದೇವಪ್ಪ ಏವೂರ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಪಶು ಇಲಾಖೆಯ ಬಿ.ಎಚ್. ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾಧಿಕಾರಿಗಳು ಸಭೆಯಲ್ಲಿ ಇದ್ದರು.