ಆನೆಗೊಂದಿ ಪೂಜಾರಾಧನೆ: ರಾಯರ ಮಠದ ಮನವಿಗೆ ಪುರಸ್ಕಾರ

| Published : Dec 21 2024, 01:16 AM IST

ಸಾರಾಂಶ

Elephant worship:Reward for the request of the Roya Mutt

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕೊಪ್ಪಳ ಜಿಲ್ಲೆ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿನ ರಘುವರ್ಯರ ಪೂಜಾರಾಧನೆಯ ಕುರಿತ ಉತ್ತರಾಧಿ ಮಠದ ರಿಟ್‌ ಅರ್ಜಿಯನ್ನು ಶುಕ್ರವಾರ ಧಾರವಾರ ಹೈಕೋರ್ಟಿನ ವಿಭಾಗೀಯ ತಿರಸ್ಕರಿಸಿದ್ದು, ಇದರಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠದ ಅನುಯಾಯಿಗಳಿಗೆ ಈ ಮೊದಲಿನಂತೆ ಜಯತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸುವ ಅವಕಾಶ ದೊರೆತಿದೆ.

ಮಂತ್ರಾಲಯ ಮತ್ತು ಉತ್ತರಾಧಿ ಪೀಠಗಳ ಮಧ್ಯೆ ಆರಾಧನೆ ವಿಷಯದಲ್ಲಿ ತಗಾದೆ ಇದ್ದು, ಶಾಂತಿ ಕಾಪಾಡುವ ಉದ್ದೇಶದಿಂದ ಉಭಯ ಮಠಗಳಿಗೂ ಪುಣ್ಯಾರಾಧನೆಗೆ ಗಂಗಾವತಿ ತಹಸೀಲ್ದಾರರು ಅನುಮತಿ ನಿರಾಕರಿಸಿದ್ದರು.

ನಂತರ ರಘುವರ್ಯ ತೀರ್ಥರ ವೃಂದಾವನವನ್ನು ರಾಯರಮಠದವರು ಜಯತೀರ್ಥರದ್ದು ಎಂದು ವಾದಿಸುತ್ತಿದ್ದು ಮತ್ತು ಅದಕ್ಕೆ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಯತಿ ಪರಂಪರೆಗೆ ಅಪಚಾರ ಮಾಡುತ್ತಿದ್ದಾರೆ. ಇದಕ್ಕೆ ತಡೆ ನೀಡಬೇಕೆಂದು ಕೋರಿ ಉತ್ತರಾಧಿ ಮಠದ ಅನುಯಾಯಿಗಳು ಧಾರವಾಡದ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಮನವಿ ಪುರಸ್ಕರಿಸಿದ್ದ ಧಾರವಾಡದ ಹೈಕೋರ್ಟ್‌ ಏಕಸದಸ್ಯ ಪೀಠ, ವಿವಾದಿತ ವೃಂದಾವನಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡದಂತೆ ರಾಯರ ಮಠದ ಅನುಯಾಯಿಗಳಿಗೆ ನಿಬಂರ್ಧ ಹೇರಿತ್ತು.

ಇದನ್ನು ಪ್ರಶ್ನಿಸಿ ರಾಯರಮಠದ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮನವಿ ಆಲಿಸಿದ ಧಾರವಾಡದ ಹೈಕೋರ್ಟ್‌ನ ದ್ವಿ ಸದಸ್ಯ ನ್ಯಾಯಪೀಠವು ಏಕ ಸದಸ್ಯ ಪೀಠದ ಆದೇಶವನ್ನು ತಳ್ಳಿ ಹಾಕಿದೆ.