ಸಾರಾಂಶ
ಹೇಳಿಕೆ । ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ಚಾಮರಾಜನಗರಉಪ್ಪಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಂಗಲ ಶಿವಕುಮಾರ್ ಸಲಹೆ ನೀಡಿದರು.
ನಗರದ ರಾಯಲ್ ಬ್ರದರ್ ಹೋಟಲ್‌ನಲ್ಲಿ ಭಗೀರಥ ಯುವಸೇನೆ ವತಿಯಿಂದ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಸಮುದಾಯದ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 90 ರಷ್ಠು ಫಲಿತಾಂಶ ಪಡೆಯುತ್ತಿರುವುದು ಅಲ್ಲದೆ ಸರ್ಕಾರಿ ಅಧಿಕಾರಿಗಳು ಆಗುತ್ತಿರುವ ತುಂಬಾ ಖುಷಿಯಾಗಿದೆ. ವಿದ್ಯಾರ್ಥಿಗಳು ದೊಡ್ಡಕನಸ್ಸುನ್ನು ಇಟ್ಟುಕೊಂಡು ಶ್ರದ್ಧೆ, ಭಕ್ತಿಯಿಂದ ವ್ಯಾಸಂಗ ಮಾಡಬೇಕು. ಪೋಷಕರು ಕೂಡ ಮಕ್ಕಳ ವಿದ್ಯಾರ್ಜನೆ ಪೋತ್ಸಾಹ ನೀಡಬೇಕಿದೆ ಎಂದರು.
ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಬದುಕು ಹಸನು ಮಾಡಿಕೊಳ್ಳಬೇಕಾದರೆ ಶಿಕ್ಷಣ ಅತ್ಯಗತ್ಯವಾಗಿದೆ. ಯಾವುದೇ ಸಮಾಜ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಣವೇ ಮೂಲವಾಗಿದೆ. ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದರೂ ಕೂಡ ಉಪ್ಪಾರ ಸಮುದಾಯ ಶಿಕ್ಷಣದಿಂದ ವಂಚಿತರಾಗಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬೇರೆ ಬೇರೆ ಸಮಾಜಗಳು ಶಿಕ್ಷಣಕ್ಕೆ ಒತ್ತು ನೀಡಿದ ಕಾರಣದಿಂದ ಅಭಿವೃದ್ದಿ ಹೊಂದಿ ಉನ್ನತ ಸ್ಥಾನಮಾನ ಪಡೆದು ಮಕ್ಕಳ ಜೀವನವನ್ನು ಹಸನು ಮಾಡುತ್ತಿದ್ದಾರೆ. ಹಾಗಾಗಿ ಉಪ್ಪಾರ ಸಮಾಜವು ಕೂಡ ಬದಲಾವಣೆಯಾಗಬೇಕು. ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರೆ ಸಮಾಜದಲ್ಲಿ ಒಳ್ಳೆಯ ವಿದ್ಯಾವಂತರಾಗಿ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೀರ್ತಿ ತರುವಂತಹ ಪ್ರತಿಭಾವಂತ ಮಕ್ಕಳು ಇದ್ದಾರೆ, ಕಂದಚಾರ, ಮೂಡನಂಬಿಕೆಗಳನ್ನು ತ್ಯಜಿಸಿ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಚೆಸ್ಕಾಂ ಲೆಕ್ಕಾಧಿಕಾರಿ ಮಹೇಶ್, ಭಗೀರಥ ಸೇನೆಯ ಅಧ್ಯಕ್ಷ ರಾಜೇಂದ್ರ, ವಕೀಲರಾದ ಗೌಡಹಳ್ಲಿ ಮಹೇಶ್, ಯುವ ಮುಖಂಡ ಆನಂದ್ ಭಗೀರಥ್, ಹೊನ್ನೂರು ಮಹದೇವಸ್ವಾಮಿ, ಸೋಮಣ್ಣ ಉಪ್ಪಾರ್, ಬಿ.ಜಿ. ಶಿವಕುಮಾರ್, ಚಾಮರಾಜನಗರ ಉಪ್ಪಾರ ಸಂಘದ ಅಧ್ಯಕ್ಷ ರಾಚಶೆಟ್ಟಿ, ರಾಜ್ಯಮಟ್ಟದ ಕ್ರೀಡಾಪಟು ಕೃಷ್ಣಸ್ವಾಮಿ, ಕಾಳನಹುಂಡಿ ಕೃಷ್ಣ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.