ಸಾರಾಂಶ
ಆರ್ಥಿಕ ವರ್ಷ ೨೦೨೫-೨೬ನೇ ಸಾಲಿನ ಮನರೇಗಾ ಯೋಜನೆಯ ಅನುಮೋದನೆಗೊಂಡಿರುವ ಕ್ರೀಯಾ ಯೋಜನೆ ಹಾಗೂ ಕಾಮಗಾರಿ ಅವಶ್ಯವಿರುವ ಕಡೆಗಳಲ್ಲಿ ಅನುಷ್ಠಾನಗೊಳಿಸಬೇಕಾಗಿದೆ
ಹನುಮಸಾಗರ: ಕುಡಿವ ನೀರು ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಾಗದಂತೆ ಸದಸ್ಯರು ನೋಡಿಕೊಳ್ಳಬೇಕು ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.
ಇಲ್ಲಿನ ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಕಳೆದ ವರ್ಷ ಮನರೇಗಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಿಲ್ ಪಾವತಿಯ ಹಂತದಲ್ಲಿವೆ. ಇನ್ನೂ ಆರ್ಥಿಕ ವರ್ಷ ೨೦೨೫-೨೬ನೇ ಸಾಲಿನ ಮನರೇಗಾ ಯೋಜನೆಯ ಅನುಮೋದನೆಗೊಂಡಿರುವ ಕ್ರೀಯಾ ಯೋಜನೆ ಹಾಗೂ ಕಾಮಗಾರಿ ಅವಶ್ಯವಿರುವ ಕಡೆಗಳಲ್ಲಿ ಅನುಷ್ಠಾನಗೊಳಿಸಬೇಕಾಗಿದೆ. ಆದ್ದರಿಂದ ಸದಸ್ಯರು ಯಾವ ವಾರ್ಡ್‌ಗಳಲ್ಲಿ ಕಾಮಗಾರಿ ಅವಶ್ಯವಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿಗದಿತ ಗುರಿಗೆ ತಕ್ಕಂತೆ ಫಲಾನುಭವಿಗಳನ್ನು ೧೫ ದಿನದೊಳಗಾಗಿ ಆಯ್ಕೆ ಮಾಡಬೇಕಾಗಿದೆ. ಗ್ರಾಮದಲ್ಲಿ ಕುಡಿವ ನೀರಿಗಾಗಿ ಸಿಸಿ ರಸ್ತೆ ಅಗೆದಿರುವದನ್ನು ದುರಸ್ಥಿಗಾಗಿ ಶಾಸಕರ ತಮ್ಮ ೨೫ ಲಕ್ಷ ಅನುದಾನದಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದರು.ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಉಪಾಧ್ಯಕ್ಷೆ ಗೌರಮ್ಮ ಮುತ್ತಣ್ಣ ವಾಲ್ಮೀಕಿ, ಕಾರ್ಯದರ್ಶಿ ಅಮರೇಶ ಕರಡಿ, ಎಸ್‌ಡಿಎ ವೀರನಗೌಡ ಪಾಟೀಲ್, ಗ್ರಾಪಂ ಸದಸ್ಯ ಮಂಜುನಾಥ ಹುಲ್ಲೂರ, ಶ್ರೀಶೈಲಪ್ಪ ಮೋಟಗಿ, ಮುತ್ತಣ್ಣ ಪತ್ತಾರ, ಪಾರುಕ್ ಡಾಲಾಯತ್, ಸಂಗಮೇಶ ಕರಂಡಿ,ಶಿವಪ್ಪ ಕಂಪ್ಲಿ, ಮರೇಗೌಡ ಬೋದುರ, ನೀಲಮ್ಮ ಸೊಪ್ಪಿಮಠ, ಗಂಗಮ್ಮ ಸಂಗಮದ, ರಮೇಶ ಬಡಿಗೇರ, ಪ್ರಶಾಂತ ಕುಲಕರ್ಣಿ, ಮಹ್ಮದರಿಯಾಜ್ ಖಾಜಿ, ವಿಶ್ವನಾಥ ಯಾಳಗಿ ಸೇರಿದಂತೆ ಇತರ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಇತರರು ಇದ್ದರು.