ಮಡಬೂರು ಗ್ರಾಮದಲ್ಲಿ ಶೆಡ್ ಗೆ ಬೆಂಕಿ: ಲಕ್ಷಾಂತರ ರು.ನಷ್ಟ

| Published : May 22 2025, 12:47 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ಮಡಬೂರು ಗ್ರಾಮದ ಗುಡ್ಡೇಕೊಪ್ಪದ ಪುಟ್ಟೇಗೌಡ ಎಂಬುವರ ಮನೆಯ ಪಕ್ಕದ ಶೆಡ್ ಗೆ ಬುಧವಾರ ಬೆಳಗಿನಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದು ಶೆಡ್ ಸಂಪೂರ್ಣ ಸುಟ್ಟು ಹೋಗಿ ಲಕ್ಷಾಂತರ ರು.ನಷ್ಟ ಉಂಟಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಪುಟ್ಟೇಗೌಡರ ಶೆಡ್ ನಲ್ಲಿ ದುರ್ಘಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ಮಡಬೂರು ಗ್ರಾಮದ ಗುಡ್ಡೇಕೊಪ್ಪದ ಪುಟ್ಟೇಗೌಡ ಎಂಬುವರ ಮನೆಯ ಪಕ್ಕದ ಶೆಡ್ ಗೆ ಬುಧವಾರ ಬೆಳಗಿನಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಬಿದ್ದು ಶೆಡ್ ಸಂಪೂರ್ಣ ಸುಟ್ಟು ಹೋಗಿ ಲಕ್ಷಾಂತರ ರು.ನಷ್ಟ ಉಂಟಾಗಿದೆ. ಪುಟ್ಟೇಗೌಡರು ಗುಡ್ಡೇಕೊಪ್ಪದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದರು. ಆದ್ದರಿಂದ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಪಕ್ಕದ ಶೆಡ್ ಗೆ ಸ್ಥಳಾಂತರಿಸಿದ್ದರು. ಆದರೆ, ರಾತ್ರಿ ಮಲಗಲು ನಿರ್ಮಾಣ ಹಂತದಲ್ಲಿದ್ದ ಮನೆಗೆ ಹೋಗುತ್ತಿದ್ದರು. ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ನೋಡಿದಾಗ ಹೊಸ ಮನೆ ಪಕ್ಕದ ಶೆಡ್ ಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ತಕ್ಷಣ ಅಕ್ಕ, ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಆದರೆ, ಪಕ್ಕದ ಸೆಡ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪುಟ್ಟೇಗೌಡರ ಕುಟುಂಬದವರ ಪ್ರಕಾರ ಶೆಡ್ ನಲ್ಲಿ ₹80 ಸಾವಿರ ರು. ನಗದು, 2 ಚೀಲ ಅಡಕೆ ಮೂಟೆ, ಅಡಕೆ ಸುಲಿಯುವ ಯಂತ್ರ, ಗಾಡ್ರೇಜ್ ಬೀರು, ಮಂಚಗಳು, ಪಾತ್ರೆಗಳು, ಬಟ್ಟೆಗಳು,ಟಾರ್ಪಲ್, ಮನೆಯ ಇತರ ಪರಿಕರಗಳು ಸಂಪೂರ್ಣ ಸುಟ್ಟು ಹೋಗಿದೆ. ₹10 ಲಕ್ಷ ರು. ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.