ಟಿ. ನರಸೀಪುರದಲ್ಲಿ ಸಿಐಟಿಯುನಿಂದ ಕಾರ್ಮಿಕ ದಿನಾಚರಣೆ

| Published : May 02 2024, 12:18 AM IST

ಸಾರಾಂಶ

ತಾಲೂಕು ಸಿಐಟಿಯು ಸಮಿತಿಯಿಂದ ಬುಧವಾರ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಕಾರ್ಮಿಕರು ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರು ಬಹಿರಂಗ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತಾಲೂಕು ಸಿಐಟಿಯು ಸಮಿತಿಯಿಂದ ಬುಧವಾರ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಕಾರ್ಮಿಕರು ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರು ಬಹಿರಂಗ ಸಭೆ ನಡೆಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಾಜಿ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಮಿಕ ಚಳವಳಿಯ ಇತಿಹಾಸ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಉಪಾಧ್ಯಕ್ಷ, ಗ್ರಾಪಂ ನೌಕರರ ಸಂಘಟನೆ ಮುಖಂಡ ಮಾದೇಶ್ ಕಾರ್ಮಿಕರ ಚಳವಳಿಯ ಪ್ರಾಮುಖ್ಯತೆ ವಿವರಿಸಿದರು.

ಉಸ್ತುವಾರಿ ಶಶಿಕುಮಾರ್ ಕಾರ್ಮಿಕರ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿದರು. ತಾಲೂಕು ಪದಾಧಿಕಾರಿಗಳಾದ ಕೃಷ್ಣ ಮತ್ತು ಗೋವಿಂದ ಮಾತನಾಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಮಾದೇಶ ಅವರು.

ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಅವರು ಸಂಘಟನೆ ವಿಸ್ತರಣೆಗೆ ಕಾರ್ಮಿಕರ ಕಾರ್ಮಿಕರ ತಿಳವಳಿಕೆ ಮಟ್ಟ ಹೆಚ್ಚಿಸಿ ಸಂಘಟನೆ ವಿಸ್ತರಣೆಗೆ ಕರೆ ನೀಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿದರು. ಕೃಷ್ಣ ವಂದಿಸಿದರು.