ಒಳಪಂಗಡ ಮರೆತು ಒಂದಾದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಭವಿಷ್ಯ

| Published : Oct 29 2025, 11:30 PM IST

ಒಳಪಂಗಡ ಮರೆತು ಒಂದಾದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ಭವಿಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವೀರಶೈವ ಲಿಂಗಾಯತದ ಒಳಪಂಗಡಗಳು ಮೀಸಲಾತಿಗಾಗಿ ಹೋರಾಟ ಮಾಡಿ ಹಕ್ಕು ಪಡೆದುಕೊಳ್ಳಲಿ. ಆದರೆ, ಧರ್ಮದ ವಿಚಾರ ಬಂದಾಗ ವೀರಶೈವ ಲಿಂಗಾಯತರು ಒಂದೇ ಎಂದು ಒಳಪಂಗಡಗಳನ್ನು ಮರೆತು ಒಂದಾದಲ್ಲಿ ಮಾತ್ರ ಉತ್ತಮ ಭವಿಷ್ಯ. ಇಲ್ಲದಿದ್ದರೇ ವೀರಶೈವ ಲಿಂಗಾಯತ ಧರ್ಮ ಸಂಕಷ್ಟಕ್ಕಿಡಾಗಲಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯರು ನುಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ವೀರಶೈವ ಲಿಂಗಾಯತದ ಒಳಪಂಗಡಗಳು ಮೀಸಲಾತಿಗಾಗಿ ಹೋರಾಟ ಮಾಡಿ ಹಕ್ಕು ಪಡೆದುಕೊಳ್ಳಲಿ. ಆದರೆ, ಧರ್ಮದ ವಿಚಾರ ಬಂದಾಗ ವೀರಶೈವ ಲಿಂಗಾಯತರು ಒಂದೇ ಎಂದು ಒಳಪಂಗಡಗಳನ್ನು ಮರೆತು ಒಂದಾದಲ್ಲಿ ಮಾತ್ರ ಉತ್ತಮ ಭವಿಷ್ಯ. ಇಲ್ಲದಿದ್ದರೇ ವೀರಶೈವ ಲಿಂಗಾಯತ ಧರ್ಮ ಸಂಕಷ್ಟಕ್ಕಿಡಾಗಲಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯರು ನುಡಿದರು.

ತಾಲೂಕಿನ ಮುದಕವಿ ಗ್ರಾಮದ ವೀರಭದ್ರೇಶ್ವರ ಹಾಗೂ ಆಂಜನೇಯಸ್ವಾಮಿ ರಥೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಲಿಂಗಾಯತ ಮತ್ತು ವೀರಶೈವ ಬೇರೆ ಎಂದು ಕೆಲವು ಪ್ರತ್ಯೇಕತಾವಾದಿಗಳು ವೀರಶೈವ ಲಿಂಗಾಯತ ಧರ್ಮದಲ್ಲಿ ಒಡಕು ಸೃಷ್ಟಿಸುತ್ತಿದ್ದಾರೆ. ಲಿಂಗಾಯತ ಧರ್ಮ ಬೇರೆ ಎಂಬುದು ಸುಮಾರು 20 ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಕೂಸಾಗಿದ್ದು ಅದಕ್ಕೆ ಭವಿಷ್ಯವಿಲ್ಲ. ಬಸವಣ್ಣನವರು ತಮ್ಮ ಕೆಲವು ವಚನಗಳಲ್ಲಿ ವೀರಶೈವ ಪದ ಬಳಕೆ ಮಾಡಿದ್ದಾರೆ ವಿನಃ ಎಲ್ಲಿಯೂ ಲಿಂಗಾಯತ ಪದ ಬಳಕೆ ಮಾಡಿಲ್ಲ ಎಂದರು.ವೀರಶೈವಕ್ಕೂ ಲಿಂಗಾಯತಕ್ಕೂ ಸಂಬಂಧವಿಲ್ಲ. ಎರಡು ಬೇರೆ ಬೇರೆ ಎನ್ನುವ ಅರ್ಥಹೀನ ಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ವೀರಶೈವ ಲಿಂಗಾಯತ ಎರಡು ಒಂದೇ. ಕೆಲವು ಮಠಾಧೀಶರು ಮಾತ್ರ ಪ್ರತ್ಯೇಕತಾ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಪತ್ಯೇಕ ಎನ್ನುವವರ ಹಿಂದಿನ ಇತಿಹಾಸ ಗಮನಿಸಿದರೇ ಅವರ ಹಿಂದಿನ ದಾಖಲೆಗಳೇ ವೀರಶೈವ ಲಿಂಗಾಯತ ಎಂದಿವೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರತ್ಯೇಕತಾವಾದಿಗಳಿಗೆ ತಿರುಗೇಟು ನೀಡಿದರು.ದೇವಸ್ಥಾನಗಳನ್ನು, ದೇವರನ್ನು ನಿಂದನೆ ಮಾಡುತ್ತಿರುವುದು ಪತ್ಯೇಕಿಗಳು, ವೀರಭದ್ರನನ್ನು ಕಡಗಣನೆ ಮಾಡುತ್ತಿದ್ದಾರೆ. ಬಸವಾದಿ ಶರಣರ ಸಮಗ್ರ ವಚನಗಳನ್ನು ಅಧ್ಯಯನ ಮಾಡಬೇಕು. ಅವರ ವಚನಗಳಲ್ಲಿಯೂ ವೀರಶೈವ ಪದ ಬಳಕೆ ಇದೆ ಎಂದರು.ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ಧರ್ಮ ಜಾಗೃತಿಗಾಗಿ ಪಂಚಪೀಠಗಳು ಶ್ರಮಿಸುತ್ತಿವೆ. ಪಂಚಪೀಠಗಳ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ಪಾಲನೆ ಆಗಬೇಕಾದಲ್ಲಿ ಗುರು ಮಾರ್ಗದರ್ಶನದಲ್ಲಿ ನಿಶ್ಚಿತ ಗುರಿಯೊಂದಿಗೆ ಯುವ ಪೀಳಿಗೆ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.ಕೆರೂರಿನ ಡಾ.ಶಿವಕುಮಾರ ಸ್ವಾಮೀಜಿ, ಎಂ.ಆರ್.ಪಾಟೀಲ, ಚಂದ್ರಶೇಖರಪ್ಪ ಹಳ್ಳೂರ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಮುಳ್ಳೂರ ಅನ್ನದಾನೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲಾತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಕಟಕೋಳ-ಮುದಕವಿ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ ಮಹಾರಾಜರು, ಕರಿಬಸವ ಶಿವಯೋಗಿ ಸ್ವಾಮೀಜಿ, ಬಿ.ಎನ್.ದಳವಾಯಿ, ವೀರಭದ್ರಪ್ಪ ಮುದ್ನೂರ, ಮಲ್ಲಿಕಾರ್ಜನ ಮುದ್ನೂರ, ಗ್ರಾಪಂ ಅಧ್ಯಕ್ಷ ವಹೀದ್‌ ಖಾಜಿ, ಮರುಗಯ್ಯ ಚಿಕ್ಕೂರಮಠ, ಪಿಕೆಪಿಎಸ್ ಅಧ್ಯಕ್ಷ ಸುರೇಶ ರಕ್ಷಿ ಸೇರಿದಂತೆ ಇತರರಿದ್ದರು. ಎಸ್.ವಿ.ಕಲ್ಯಾಣಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.