ಸಾರಾಂಶ
ಗದಗ ಜಿಲ್ಲೆಯಲ್ಲಿ ಇಂತಹ ಕಾರ್ಯಾಗಾರ ಎಲ್ಲ ವಿಷಯದಲ್ಲಿ ಕೈಗೊಂಡಾಗ ಮಾತ್ರ ಜಿಲ್ಲೆಗೆ ಉತ್ತಮ ಫಲಿತಾಂಶ ದೊರೆಯಲು ಸಾಧ್ಯ ಎಂದು ರವೀಂದ್ರನಾಥ ಬಿ.ದಂಡಿನ ಹೇಳಿದರು.
ಗದಗ: ಭೂಗೋಳಶಾಸ್ತ್ರ ವಿಷಯ ವಿದ್ಯಾರ್ಥಿ ಜೀವನಕ್ಕೆ ತುಂಭಾ ಅವಶ್ಯಕವಾಗಿದೆ ಎಂದು ಕನಕದಾಸ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಬಿ.ದಂಡಿನ ಹೇಳಿದರು.
ನಗರದ ಕೆ.ವಿ.ಎಸ್.ಆರ್ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ (ಪಪೂ) ಹಾಗೂ ಭೂಗೋಳಶಾಸ್ತ್ರ ವಿಷಯದ ಉಪನ್ಯಾಸಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜರುಗಿದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗದಗ ಜಿಲ್ಲೆಯಲ್ಲಿ ಇಂತಹ ಕಾರ್ಯಾಗಾರ ಎಲ್ಲ ವಿಷಯದಲ್ಲಿ ಕೈಗೊಂಡಾಗ ಮಾತ್ರ ಜಿಲ್ಲೆಗೆ ಉತ್ತಮ ಫಲಿತಾಂಶ ದೊರೆಯಲು ಸಾಧ್ಯ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭೂಗೋಳಶಾಸ್ತ್ರ ವಿಷಯದಲ್ಲಿ ಪ್ರತಿವರ್ಷ ಕನಿಷ್ಠ 10 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸುತ್ತಾ ಬಂದಿದ್ದಾರೆ, ಅದರಂತೆ ಈ ವರ್ಷವು ಕೂಡ ಅದೇ ರೀತಿ ಅಂಕ ತಾವೆಲ್ಲರೂ ಗಳಿಸಲು ಸತತ ಪ್ರಯತ್ನ, ನಿರಂತರ ಅಭ್ಯಾಸ ಮಾಡಿ ನಿಮ್ಮ ಸಮಯ ಜ್ಞಾನಾರ್ಜನೆಗೆ ಮೀಸಲಿಟ್ಟು ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತರಬೇಕು ಎಂದರು.
ಶಾಲಾ ಶಿಕ್ಷಣ (ಪಪೂ) ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯಕ ಮಾತನಾಡಿ, ಗದಗ ಜಿಲ್ಲೆಯಲ್ಲಿ ಭೂಗೋಳಶಾಸ್ತ್ರ ವಿಷಯದ ಕಾರ್ಯಾಗಾರ ಹಮ್ಮಿಕೊಂಡಿರುವುದು ಸಂತೋಷದ ವಿಷಯವಾಗಿದ್ದು, ಈ ಕಾರ್ಯಾಗಾರದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಂಡು ಮುಂಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದರು.ಈ ವೇಳೆ ಪ್ರಾ.ವಿ.ಎಸ್.ದಲಾಲಿ ಮಾತನಾಡಿದರು. ರಾಜೇಂದ್ರ ಹಿರೇಮಠ, ಎ.ಡಿ. ತಹಸೀಲ್ದಾರ, ಗೀತಾ ಮಳ್ಳೂರ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಇದ್ದರು.
ಕಾಲೇಜಿನ ಭೂಗೋಳಶಾಸ್ತ್ರ ಉಪನ್ಯಾಸಕ ಪ್ರದೀಪ ಜಿ. ನಾಯಕ ಸ್ವಾಗತಿಸಿದರು. ಭೂಗೋಳಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಈರಣ್ಣ ವಿ. ಕಮತರ ನಿರೂಪಿಸಿದರು, ನಗರಸಭೆ ಪಪೂ ಕಾಲೇಜಿನ ಉಪನ್ಯಾಸಕ ರಾಜೇಂದ್ರ ಹಿರೇಮಠ ವಂದಿಸಿದರು.;Resize=(128,128))
;Resize=(128,128))