ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಯಿಯ ಮಡಿಲು ಮಗುವಿನ ಮೊದಲನೇ ಪಾಠಶಾಲೆ. ಅಲ್ಲಿ ಕಲಿಯುವ ಮಗು ಮುಂದೆ ಸಮಾಜದ ಆಸ್ತಿಯಾಗಿ ಬದಲಾಗುವಂತೆ ಪಾಲಕರು ಅವರ ಶಿಕ್ಷಣದ ಜವಾಬ್ದಾರಿ ನಿಭಾಯಿಸಬೇಕು ಎಂದು ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್‌ಗಫೂರ ಮಕಾನದಾರ ಹೇಳಿದರು.

ಪಟ್ಟಣದ ಮಹೆಬೂಬ ನಗರದ ಮೆಕ್ಕಾ ಶಾದಿ ಹಾಲ್‌ನಲ್ಲಿ ಭಾನುವಾರ ಉಮ್ಮೀದ್ ಫೌಂಡೇಶನ್ ನೇತೃತ್ವದಲ್ಲಿ ಏರ್ಪಡಿಸಿದ್ದ ಮುಸ್ಲಿಂ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದಲ್ಲಿ ಹಿಂದುಳಿಯುತ್ತಿರುವ ಸಮಾಜದ ಮಕ್ಕಳಿಗೆ ಅಗತ್ಯ ಪ್ರೋತ್ಸಾಹ, ಮಾರ್ಗದರ್ಶನ ಮಾಡುವ ಇಂತಹ ಕಾರ್ಯಕ್ರಮಗಳು ಹೆಚ್ಚಬೇಕಿದೆ. ಜ್ಞಾನ ಮನುಷ್ಯನ ಜೀವನ ರೂಪಿಸುವ ಶಕ್ತಿಯಾಗಿದ್ದು, ಮನುಷ್ಯನಿಗೆ ಮಾತ್ರ ಬುದ್ದಿ, ವಿವೇಕ ಮತ್ತು ಯೋಚನೆ ಮಾಡುವ ಸಾಮರ್ಥ್ಯ ಕರುಣಿಸಿದ್ದಾನೆ. ಇದನ್ನರಿತು ಸಾಧನೆ ತೋರಿದಾಗ ಅವರನ್ನು ಅಭಿನಂದಿಸುವ ಕಾರ್ಯಕ್ರಮಗಳಿಗೆ ಅವರ ಪ್ರತಿಭೆಗೆ ಪ್ರೋತ್ಸಾಹಿಸುವ ಕಾರ್ಯ ಸಮಾಜದವರಿಂದ ಆಗಬೇಕು ಎಂದು ಹೇಳಿದರು.

ಸಿಪಿಐ ಮೊಹ್ಮದ್‌ ಫಸಿವುದ್ದೀನ್‌ ಮಾತನಾಡಿ, ಮುಸ್ಲಿಂ ಸಮಾಜದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ. ಆದರೆ, ಈ ವಿಷಯದಲ್ಲಿ ಸಮಾಜದ ಗಂಡು ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಪಾಲಕರು ಮಕ್ಕಳನ್ನು ಸಣ್ಣವರಿದ್ದಾಗಲೇ ದುಡಿಯಲು ಕಳಿಸದೇ ಅವರಿಗೆ ಶಿಕ್ಷಣ ಕೊಡಿಸಿ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.

ಶಿಕ್ಷಣ ಸಂಯೋಜಕಿ ಪಿ.ಎ.ಬಾಳಿಕಾಯಿ ಮಾತನಾಡಿ, ಸಾಧನೆ ಮಾಡಿದ ಮಕ್ಕಳನ್ನು ಗೌರವಿಸುವ, ಅಭಿನಂದಿಸುವ ಕೈಗಳ ಕೊರತೆ ಕಾಡುತ್ತಿತ್ತು. ಉಮ್ಮೀದ್ ಫೌಂಡೇಶನ್‌ದಿಂದ ಅದನ್ನು ನೀಗಿಸುವ ಕೆಲಸವನ್ನು ಮಿತ್ರರು ಮಾಡಿದ್ದಾರೆ ಎಂದು ಸ್ಮರಿಸಿದರು.


ಅಧ್ಯಕ್ಷತೆ ವಹಿಸಿದ್ದ ಡಾ.ಎ.ಎಂ.ಮುಲ್ಲಾ ಮಾತನಾಡಿ, ಸಮಾಜದ ಬಹುತೇಕ ಜನರು ದೂರದಲ್ಲಿ ನಿಂತು ಹಲವು ಮಾತನಾಡುವ ಬದಲು ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಎಂದರು.

ವಿಜಯಪುರ ಜಮಿಯತ್ ಎ ಅಬ್ನಾಯೆ ಕದೀಮ ಉಪಾಧ್ಯಕ್ಷ ಮೌಲಾನಾ ನಿಸಾರ್‌ಅಹ್ಮದ್ ಜಾಮಯಿ, ಮುದ್ದೇಬಿಹಾಳ ಜಮಿಯತೇ ಉಲೇಮಾ ಹಿಂದ್ ಸಂಚಾಲಕ ಕಾರಿ ಇಸಾಕ್ ಮಾಗಿ,ಮೌಲಾನಾ ಅಲ್ಲಾಭಕ್ಷ್ಯ ಖಾಜಿ, ಮೊಹ್ಮದರಫೀಕ್‌ ನದಾಫ್‌ ಸಾನ್ನಿಧ್ಯ ವಹಿಸಿದ್ದರು. ಬಾಗಲಕೋಟೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹಾಜಿಸಾಬ ರುದ್ರವಾಡಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಹೆಸ್ಕಾಂ ನೌಕರರ ಸಹಕಾರ ಸಂಘದ ನಿರ್ದೇಶಕ ಹುಸೇನ್ ನಾಯ್ಕೋಡಿ, ಗಣ್ಯರಾದ ಲಾಡ್ಲೇಮಶ್ಯಾಕ್ ನಾಯ್ಕೋಡಿ, ವಕೀಲರಾದ ಎನ್.ಬಿ.ಮುದ್ನಾಳ, ಪ್ರೊ.ಮುಸ್ತಾಕ್ ಬಾಗವಾನ, ಮೊಹ್ಮದಶಫೀ ಅಕ್ಕಲಕೋಟ ಇತರರು ಇದ್ದರು. ಪ್ರೊ.ರಹೀಂ ಮುಲ್ಲಾ ಸ್ವಾಗತಿಸಿದರು. ಉಮ್ಮೀದ್ ಫೌಂಡೇಶನ್ ಸಂಚಾಲಕ ಗುಲಾಮೊಹ್ಮದ ದಫೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್.ಮೊಕಾಶಿ ನಿರೂಪಿಸಿದರು. ಎಂ.ಎ.ಲಿಂಗಸಗೂರ ವಂದಿಸಿದರು.

-----ಬಾಕ್ಸ್--

ವಿದ್ಯಾರ್ಥಿಗಳಿಗೆ ಅಭಿನಂದನೆ:

ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೈಮುನಾ ಮುದ್ನಾಳ, ಮಿಸ್ಬಾ ಬಾಗಲಕೋಟ, ಸಿದ್ದಿಕಾ ಅವಟಿ,ಅರ್ಷದ ರಿಸಾಲ್ದಾರ್, ಜೈಬುನ್ನೀಸಾ ತಾಳಿಕೋಟಿ, ನೇಹಾ ಮಕಾನದಾರ, ಸುಮೈಯಾ ಗಣಿ, ಮಾಬುಬಿ ದೊಡಮನಿ, ಫಹಿಮಾ ಖತಿಬ, ಪಿಯುಸಿಯಲ್ಲಿ ಸಾಧನೆ ತೋರಿದ ಆಸೀಫಾ ಖತಿಬ, ಕಾಶೀಂಬಿ ಮುಲ್ಲಾ, ಜುನೇರಾ ಎತ್ತಿನಮನಿ ಹಾಗೂ ವಿಶೇಷ ಸಾಧನೆ ತೋರಿದ ಮೊಹ್ಮದಜಿಶಾನ್ ರಿಸಾಲ್ದಾರ್, ಮೊಹ್ಮದಆಹೀಲ್ ಅಕ್ಕಲಕೋಟ ಅವರನ್ನು ಸನ್ಮಾನಿಸಲಾಯಿತು.