ಹಾಸನಾಂಬ ಆಸ್ಪತ್ರೆಯಿಂದ ಬಡವರಿಗೆ ಉತ್ತಮ ಚಿಕಿತ್ಸೆ: ಡಾ ಜಿ.ಎನ್.ಬಸವರಾಜು

| Published : Apr 29 2024, 01:36 AM IST

ಹಾಸನಾಂಬ ಆಸ್ಪತ್ರೆಯಿಂದ ಬಡವರಿಗೆ ಉತ್ತಮ ಚಿಕಿತ್ಸೆ: ಡಾ ಜಿ.ಎನ್.ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಶ್ರೀ ಹಾಸನಾಂಬ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಗ್ಯಾಸ್ಟೋಎಂಟರಾಲಜಿ ಸೆಂಟರ್‌ ಆಸ್ಪತ್ರೆಯ ೩ನೇ ವರ್ಷದ ಪ್ರಯುಕ್ತ ಏ.೩೦ರ ಮಂಗಳವಾರ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಉಚಿತ ತಪಾಸಣೆ । ಎಂ.ಡಿ. ಮಾಹಿತಿ । ಆಸ್ಪತ್ರೆಗೆ 3 ವರ್ಷದ ಹಿನ್ನೆಲೆ ಬೃಹತ್‌ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹಾಸನ

ಹಾಸನಾಂಬ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನುರಿತ ವೈದ್ಯರನ್ನು ಒಳಗೊಂಡು ಕಳೆದ ಮೂರು ವರ್ಷ ಗಳಿಂದ ಹಾಸನದಲ್ಲಿ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸುವ ಮೂಲಕ ಉತ್ತಮ ಹೆಸರು ಪಡೆದಿದೆ. ಸರ್ಕಾರದ ವಿಮಾ ಯೋಜನೆಗಳು ಲಭ್ಯವಿದ್ದು ಬಡವರು ಚಿಕಿತ್ಸೆಗೆ ಹಣ ನೀಡಲು ಕಷ್ಟ ಆಗದವರಿಗೆ ಹಣವನ್ನು ಕಡಿತಗೊಳಿಸಿ ಅನುಕೂಲ ಕಲ್ಪಿಸಲಾಗಿದೆ ಎಂದು ಹಾಸನಾಂಬ ಆಸ್ಪತ್ರೆಯ ಎಂ.ಡಿ.ಮತ್ತು ವೈದ್ಯಕೀಯ ನಿರ್ದೇಶಕ ಡಾ ಜಿ.ಎನ್.ಬಸವರಾಜು ತಿಳಿಸಿದರು.

ನಗರದ ಸಿಲ್ವರ್ ಜ್ಯೂಬ್ಲಿ ಪಾರ್ಕ್ ರಸ್ತೆ, ಕೆ.ಆರ್. ಪುರಂನಲ್ಲಿರುವ ಶ್ರೀ ಹಾಸನಾಂಬ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಗ್ಯಾಸ್ಟೋಎಂಟರಾಲಜಿ ಸೆಂಟರ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಆಸ್ಪತ್ರೆಯ ೩ನೇ ವರ್ಷದ ಪ್ರಯುಕ್ತ ಏ.೩೦ರ ಮಂಗಳವಾರ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

‘ನಮ್ಮ ಆಸ್ಪತ್ರೆಯಲ್ಲಿ ನಿಸ್ವಾರ್ಥ ಸೇವೆ, ಪ್ರಾಮಾಣಿಕ ಪ್ರಯತ್ನ, ನಾಡಿನ ಜನರ ಮೆಚ್ಚುಗೆಯ ಕಾರ್ಯನಿರ್ವಹಣೆಗೆ ಇಂದು ೩ ವರ್ಷ ತುಂಬಿದೆ. ಈ ಸುಸಂದರ್ಭದಲ್ಲಿ ಮಂಗಳವಾರ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೂ ನಮ್ಮ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಜನರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸುವಲ್ಲಿ ಹಾಸನಾಂಬ ಇಂದು ಸಫಲವಾಗಿರುವುದು ಪಾರದರ್ಶಕವಾಗಿರುವುದು ಕಾರಣ’ ಎಂದು ಹೇಳಿದರು.

‘ಜನರ ಆರ್ಥಿಕ ಪರಿಸ್ಥಿತಿ, ವಿದ್ಯೆ, ಊರು, ಹಿನ್ನೆಲೆ, ಲೆಕ್ಕಿಸದೇ ಸತತ ಅವರ ಸ್ವಸ್ಥ ನಗುವಿನ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಜನಾದರಣೀಯ ಹಾಸನಾಂಬ ಆಸ್ಪತ್ರೆಯ ಹಲವು ಉಚಿತ ಆರೋಗ್ಯ ತಪಾಸಣ ಶಿಬಿರಗಳನ್ನು ಗ್ರಾಮ ಪಂಚಾಯತಿ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ನಡೆಸಿದ್ದು, ಅನಾನುಕೂಲಸ್ಥರಿಗೂ ಆರೋಗ್ಯ ತಪಾಸಣೆಯ ಮೊದಲ ಅನುಭವ ಹಾಗೂ ಅನೇಕ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ’ ಎಂದು ತಿಳಿಸಿದರು.

‘ಸುಸಜ್ಜಿತ ಅತ್ಯಾಧುನಿಕ ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿ, ಅತ್ಯಾಧುನಿಕ ಹೆಲಗೆ ಕೊಠಡಿ, ಸುಸಜ್ಜಿತ ಸ್ಪೆಷಲ್, ಸೆಮಿ-ಸ್ಪೆಷಲ್, ವಿಐಪಿ, ವಿವಿಐಪಿ ಹಾಗೂ ಜನರಲ್ ವಾರ್ಡ್‌ಗಳು, ಸ್ಪಂದನೀಯ ತುರ್ತು-ನಿಗಾಘಟಕ, ಲ್ಯಾಬ್ ಹಾಗೂ ಅಖಿ ಸ್ಥಾನಿಂಗ್ ಕೇಂದ್ರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.

ಮೆದುಳು ಹಾಗೂ ನರರೋಗ ಶಸ್ತ್ರ ಚಿಕಿತ್ಸೆಯ ತಜ್ಞ ಡಾ.ಎಚ್.ಎ.ಚಂದನ್ ಮಾತನಾಡಿ, ‘೩೦೦ಕ್ಕೂ ಹೆಚ್ಚು ಮೆದುಳಿನ ಅಸಾಧ್ಯವೆನಿಸಿದ್ದ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹಿರಿಮೆ ನಮ್ಮದಾಗಿದೆ. ಅನೇಕ ಶಿಬಿರಗಳಲ್ಲಿ ಬಂದ ಜನರ ಸಮಸ್ಯೆಗೆ ಉಚಿತ ಔಷದಿ ವಿತರಿಸಿರುವುದು ಗಮನಾರ್ಹ. ಉಚಿತ ಆರೋಗ್ಯ ತಪಾಸಣೆಯಲ್ಲಿ ಬಿಪಿ, ಇಸಿಜಿ, ಜಿಆರ್‌ಬಿಎಸ್, ಯುಎಸ್‌ಜಿ, ೨ಡಿ ಇಕೋ, ರಕ್ತ ಪರೀಕ್ಷೆ, ಎಂಡೋಸ್ಕೋಪಿ ಮತ್ತು ಕೊಲೋನೋಸ್ಕೋಪಿ ಪರೀಕ್ಷೆ ಮಾಡಲಾಗುವುದು’ ಎಂದರು.

ಕೀಲು ಮತ್ತು ಮೂಳೆ ತಜ್ಞ ಡಾ ಜಿ.ಎ.ಪ್ರಶಾಂತ್, ಹಾಸನಾಂಬ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶಶಿಕಲಾ ಪಾಟೀಲ್ ಇದ್ದರು.

ಹಾಸನದ ಸಿಲ್ವರ್ ಜ್ಯೂಬ್ಲಿ ಪಾರ್ಕ್ ರಸ್ತೆ, ಕೆ.ಆರ್. ಪುರಂನಲ್ಲಿರುವ ಶ್ರೀ ಹಾಸನಾಂಬ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಗ್ಯಾಸ್ಟೋಎಂಟರಾಲಜಿ ಸೆಂಟರ್‌ನಲ್ಲಿ ಹಾಸನಾಂಬ ಆಸ್ಪತ್ರೆಯ ಎಂ.ಡಿ. ಡಾ ಜಿ.ಎನ್.ಬಸವರಾಜು ಮಾತನಾಡಿದರು.