ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿವಿಶ್ವದಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಭೂಮಿಯಲ್ಲಿಯ ಕಸುವು ಮತ್ತು ಲವನಾಂಶಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇದರ ವ್ಯತಿರಿಕ್ತ ಪರಿಣಾಮ ಜೀವ ಪ್ರಪಂಚದ ಮೇಲಾಗುತ್ತಿದೆ ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಹೇಳಿದರು.
ಬೆಳಗಾವಿ ಮರಾಠಾ ಮಂಡಳ ಆರ್‌ಟಿಎಸ್, ಕಾಮರ್ಸ್, ಸೈನ್ಸ್ ಮತ್ತು ಹೋಮ್ ಸೈನ್ಸ್ ಕಾಲೇಜಿನಲ್ಲಿ ವನ್ಯಜೀವಿ ಪರಿಸರ ಅಭಿವೃದ್ಧಿ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಉಷ್ಣತೆಯಿಂದ ಭೂಮಿ ಜೀವಜಲ ಕಳೆದುಕೊಂಡು ಮರುಭೂಮಿಯಾಗುತ್ತಿದ್ದು, ಅತ್ಯಂತ ಕಳವಳಕಾರಿ ವಿಷಯ ಎಂದರು.ಸಂಸ್ಥೆ ನ್ಯಾಕ್ ಗ್ರೇಡ ಪಡೆದಿದ್ದಕ್ಕೆ ಅಭಿನಂದಿಸಿದರಲ್ಲದೆ ಸಂಸ್ಥೆಯ ಗ್ರಂಥಾಲಯ, ಪ್ರಯೋಗಾಲಯಗಳನ್ನು ವೀಕ್ಷಿಸಿ ಸಂಸ್ಥೆಯಿಂದ ಬಡ ಮಕ್ಕಳಿಗೆ ಮತ್ತು ವಯಸ್ಕರಿಗೆ ಕೊಡಲ್ಪಡುವ ಉಪಯುಕ್ತವಾದ ಉಚಿತ ನ್ಯಾಪ್ಕಿನ್‌ಗಳು ಮತ್ತು ಡೈಪರ್‌ಗಳ ಉತ್ಪಾದನಾ ಘಟಕ ವೀಕ್ಷಿಸಿ ಸಂಸ್ಥೆಯ ಚೇರಮನ್ ರಾಜಶ್ರೀ ಹಲಗೇಕರ್ ಅವರನ್ನು ಅಭಿನಂದಿಸಿ, ಗೌರವಿಸಿದರು.
ಪ್ರಾಚಾರ್ಯ ಡಾ.ಎಚ್.ಜೆ.ಮೊಳೆರಾಖಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ಪರಿಸರ ದಿನದ ಕಾರ್ಯಕ್ರಮಕ್ಕೆ ಅಗತ್ಯವಾದ ಗಿಡ ನೆಟ್ಟು ಪೋಷಿಸಿ. ಪ್ರತಿಯೊಬ್ಬರ ಮನೆಗಳಲ್ಲಿಯ ವಿವಿಧ ಕಾರ್ಯಕ್ರಮಗಳ ನೆನಪಿಗಾಗಿ ವನಗಳನ್ನು ನಿರ್ಮಿಸುವ ಕಾರ್ಯಕ್ಕೆ ಕೈ ಜೋಡಿಸುವುದಾಗಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಡಾ.ಡಿ.ಎನ್.ಮಿಸಾಳೆ ಪರಿಸರಕ್ಕೆ ಪೂರಕವಾದ ಪ್ರಾಣಿ, ನೀರು, ಗಿಡ,ಮರಗಳು, ಮತ್ತು ಭೂಮಿ ಕುರಿತು ಮಾತನಾಡಿ, ಇವೆಲ್ಲ ಶಿಸ್ತಿನಿಂದ ಇದ್ದರೇ ಮಾತ್ರ ನಮ್ಮ ಸುಂದರ ಬದುಕು. ಇಲ್ಲದಿದ್ದರೇ ನಮ್ಮ ಭೂಮಿಯ ಮೇಲಿನ ಬದುಕು ಅಸ್ತಿರ ಎಂದರು.
ವನ್ಯಜೀವಿ ಪರಿಸರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಪರಿಸರದ ಉಳಿವಿನ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ಲೇಶ ರೊಟ್ಟಿ, ಜಗದೀಶ ಮಠದ, ಜಿ.ಐ.ದಳವಾಯಿ, ಸುರೇಶ ಉರಬಿನಹಟ್ಟಿ ಸೇರಿದಂತೆ ಕಾಲೇಜಿನ ಪ್ರಾದ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರುತುಜಾ ಸಪ್ಲೆ ಪ್ರಾರ್ಥಿಸಿದರು. ಪ್ರೊ.ಜಿ.ಎಂ.ಕರಕಿ ಸ್ವಾಗತಿಸಿದರು. ಪ್ರೊ.ಮಾಯಾಪ್ಪಾ ಪಾಟೀಲ ನಿರೂಪಿಸಿದರು. ಪ್ರೊ.ವೇದಾ ಶಿವಪೂಜಿಮಠ ವಂದಿಸಿದರು.-------------
ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣತೆಯಿಂದ ಜನ ಮತ್ತು ಜಾನುವಾರಗಳ ಬದುಕು ಸಂಕಷ್ಟಕ್ಕೀಡಾಗಿವೆ. ಇದರಿಂದ ಸುರಕ್ಷಿತವಾಗಿರಲು ಪ್ರತಿಯೊಬ್ಬರೂ ಹಸಿರಿಗಾಗಿ ಒಂದೊಂದು ಗಿಡ ನೆಟ್ಟು ಪೋಷಿಸುವದಾಗಬೇಕು. ಇಂಗು ಬಚ್ಚಲ ಸೇರಿದಂತೆ ಅಂಗಳಗಳಲ್ಲಿ ಇಂಗು ತೊಟ್ಟಿಲುಗಳನ್ನು ನಿರ್ಮಿಸಬೇಕು. ಕಾಲೇಜಿನ ನಾಲ್ಕು ಗೋಡೆಗಳ ಮಧ್ಯದ ಕಾರ್ಯಕ್ರಮವಿದಾಗದೇ ನೈಜ ಪರಿಸರ ಪೂರಕ ಕಾರ್ಯಕ್ರಮ ಇದಾಗಬೇಕು.-ಎಂ.ಜಿ.ಹಿರೇಮಠ, ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ.