ತಾಲೂಕಿನ ಕಣಕೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧವಾಗಿ ಆಯ್ಕೆಯಾದರು

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಕಣಕೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಗುಡ್ಡೇನಹಳ್ಳಿ ಕಾಂತಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಸಂಘದ ಸಿಇಓ ಚೇತನ್, ನೂತನ ಅಧ್ಯಕ್ಷರಾಗಿ ಗುಡ್ಡೇನಹಳ್ಳಿ ಕಾಂತಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಅಂದಾನಿಗೌಡ, ನಿರ್ದೇಶಕರಾದ ಶ್ರೀನಿವಾಸ್, ಮುಕುಂದ, ರಮೇಶ್, ಕೆಂಚಪ್ಪ, ಜಹೀರ್, ನಂದೀಪ, ಕರಿಯಪ್ಪ, ನಾಗರಾಜು, ವನಜಾಕ್ಷಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿದ್ದಲಿಂಗಪ್ಪ, ಸಿಇಓ ಚೇತನ್ ಸೇರಿದಂತೆ ಹಲವರು ನೂತನ ಅಧ್ಯಕ್ಷ ಗುಡ್ಡೇನಹಳ್ಳಿ ಕಾಂತಣ್ಣ ನವರನ್ನು ಅಭಿನಂದಿಸಿದರು. ನೂತನ ಅಧ್ಯಕ್ಷ ಗುಡ್ಡೇನಹಳ್ಳಿ ಕಾಂತಣ್ಣ ಮಾತನಾಡಿ ತಮ್ಮ ಸಂಘದಲ್ಲಿ 1800 ಸದಸ್ಯರು ಇದ್ದಾರೆ. 2.80 ಕೋಟಿ ಕೆಸಿಸಿ ಸಾಲ ವಿತರಣೆ ಮಾಡಲಾಗಿದೆ. ಸದ್ಯ ಸಾಲ ನೀಡಿರುವವರ ಪೈಕಿ ಹಲವಾರು ಮಂದಿ ಸಾಲ ತೀರುವಳಿ ಮಾಡಿದ್ದಾರೆ. ಉಳಿದವರಿಂದ ಸಾಲ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.