ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ: ಶಾಸಕ ಎಚ್.ಟಿ.ಮಂಜು ಪೂಜೆ

| Published : Feb 09 2024, 01:50 AM IST

ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ: ಶಾಸಕ ಎಚ್.ಟಿ.ಮಂಜು ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.16ರಂದು ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ. ಜಾತ್ರೆ ನಿಮಿತ್ತ ಕಿರುತೆರೆ ನಟ-, ನಟಿಯರನ್ನು ಕರೆಯಿಸಿ ರಸಮಂಜರಿ ಹಾಗೂ ಚಲನಚಿತ್ರದ ಪ್ರಮೋಷನ್‌ ಮತ್ತು ನಾಟಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವದ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ಶಾಸಕ ಎಚ್.ಟಿ.ಮಂಜು ವೆಂಕಟರಮಣಸ್ವಾಮಿಗೆ ವಿಶೇಷ ಸಲ್ಲಿಸಿದರು.

ಹೇಮಗಿರಿಗೆ ಆಗಮಿಸಿದ ಶಾಸಕರನ್ನು ಸಂಪ್ರದಾಯದಂತೆ ಮುಜುರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ 12 ಗ್ರಾಮಗಳ ಗ್ರಾಮಸ್ಥರು ಮಂಗಳವಾದ್ಯದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು.

ನಂತರ ಬೆಟ್ಟದ ಮೇಲೆ ನೆಲೆಸಿರುವ ಕೈಲಾಸವಾಸಿ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ್ದ ಸ್ವಾಮಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದರು. ಫೆ.16ರಂದು ಬ್ರಹ್ಮರಥೋತ್ಸವ ಜರುಗಲಿದೆ.

ಈ ವೇಳೆ ಮಾತನಾಡಿದ ಶಾಸಕರು, ನಾಡಿ ಎಲ್ಲ ರೈತಾಪಿ ವರ್ಗಕ್ಕೆ, ವ್ಯಾಪಾರಸ್ಥರಿಗೆ, ಎಲ್ಲರಿಗೂ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ತನ್ನ ಕರುಣೆ ತೋರಬೇಕು. ಕಾಲಕಾಲಕ್ಕೆ ಮಳೆ, ಬೆಳೆ ಬೀಳಲಿ, ಜನರು ಸುಖವಾಗಿದ್ದರೆ ಈ ನಾಡು ಸುಖವಾಗಿರುತ್ತದೆ ಎಂದು ಪ್ರಾರ್ಥಿಸಿದರು.

ತಾಲೂಕಿನ ಎಲ್ಲ ಜನತೆ ಸುಖ, ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಸಾಮರಸ್ಯದ ಜೀವನ ನಡೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ. ಹೇಮಗಿರಿ ಜಾತ್ರೆಯಲ್ಲಿ ರೈತರಿಗೆ ಕುಡಿಯುವ ನೀರು, ದನಗಳ ಧವಣಿ, ರಸ್ತೆ ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗಿದೆ ಎಂದರು.

ಜಾತ್ರೆ ನಿಮಿತ್ತ ಕಿರುತೆರೆ ನಟನಟಿಯರನ್ನು ಕರೆಯಿಸಿ ರಸಮಂಜರಿ ಹಾಗೂ ಚಲನಚಿತ್ರದ ಪ್ರಮೋಷನ್ಮ ಮತ್ತು ನಾಟಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ದನಗಳ ಜಾತ್ರೆಯಲ್ಲಿ ಹಳ್ಳೀಕಾರ್ ದನಗಳು ಸೇರಿದಂತೆ ರಾಜ್ಯದ ವಿವಿಧ ಮೂಲೆಮೂಲೆಗಳಿಂದ ತಮ್ಮ ದನಗಳನ್ನು ಇಲ್ಲಿಗೆ ಕರೆತರುತ್ತಾರೆ. ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತಿದೆ. ಹಳ್ಳಿಕಾರ್ ತಳಿ ದನಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಬಹಳ ರೈತರ ಕನಸಾಗಿದೆ. ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಈ ವೇಳೆ ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಮುಜುರಾಯಿ ಇಲಾಖೆ ಪೂರ್ಣಿಮ, ಗ್ರಾಮಾಭಿವೃದ್ಧಿ ಅಧಿಕಾರಿ ಪೂಜಾ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.