ನಿರಂತರ ಹೋರಾಟ ಮೂಲಕ ಭವ್ಯವಾದ ರಾಮಮಂದಿರವನ್ನು ಕಟ್ಟುವುದರ ಮೂಲಕ ಹಿಂದೂಗಳ ಹೋರಾಟದ ಸಂಕಲ್ಪ ಶಕ್ತಿಯ ಸಂಕೇತ
ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆಅಯೋಧ್ಯೆ ಶ್ರೀರಾಮ ಮಂದಿರದ ಮೇಲೆ ಧರ್ಮ ಧ್ವಜ ಹಾರಿಸಿದ್ದು, ಈ ರಾಷ್ಟ್ರದಲ್ಲಿ ಸನಾತನ ಧರ್ಮದ ವಿಜಯಪರ್ವ ಪ್ರಾರಂಭವಾಗಿದೆ ಎಂಬುದು ಸಾಧು ಸಂತರ ಅಭಿಪ್ರಾಯವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಪ್ರಮುಖ್ ಉಲ್ಲಾಸ್ ಹೇಳಿದರು.ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ನಿರಂತರ ಹೋರಾಟ ಮೂಲಕ ಭವ್ಯವಾದ ರಾಮಮಂದಿರವನ್ನು ಕಟ್ಟುವುದರ ಮೂಲಕ ಹಿಂದೂಗಳ ಹೋರಾಟದ ಸಂಕಲ್ಪ ಶಕ್ತಿಯ ಸಂಕೇತವಾಗಿ ಮಂದಿರ ತಲೆ ಎತ್ತಿ ನಿಂತಿದೆ. ಹಾಗೇ ಸೋಮನಾಥ ದೇವಾಲಯದ ಮೇಲೆ ದಾಳಿಯಾಗಿ ಸಾವಿರ ವರ್ಷಗಳು ಸಂದಿದ್ದು, ಅದು ಎಷ್ಟೇ ಬಾರಿ ದಾಳಿ ನಡೆದರು ಹಿಂದೂಗಳು ಮತ್ತೆ ಮತ್ತೆ ಪುನರುತ್ಥಾನಗೊಳಿಸಿದರು ಎಂದರು.ಸ್ವಾಮಿ ವಿವೇಕಾನಂದರು ವಿದೇಶದಿಂದ ಆಗಮಿಸಿದ ನಂತರ ಇಡೀ ದೇಶವನ್ನು ಸುತ್ತಾಟ ನಡೆಸಿದರು. ಹಿಂದೂಗಳು ತಮ್ಮ ಮೇಲಿನ ವಿಶ್ವಾಸವನ್ನೆ ಕಳೆದುಕೊಂಡು ಪರಸ್ಪರ ಅಸೂಯೆ, ಕಚ್ಚಾಟದಲ್ಲಿ ತೊಡಗಿರುವುದನ್ನು ಕಂಡರು. ಆಗ ಧರ್ಮ ಉಳಿದರೆ ಮಾತ್ರ ದೇಶವೆಂದು ಧರ್ಮ ಸಂಸ್ಕೃತಿಯ ಪುನರುತ್ಥಾನ ಮತ್ತು ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟದ್ದನ್ನು ನಾವು ಮರೆಯಬಾರದು. ನಮ್ಮ ಭಾರತ ದೇಶವೂ ಇಂದು ಬಲಿಷ್ಠವಾಗಿದ್ದು , ನೆರೆಯ ದೇಶಗಳ ಮಧ್ಯೆ ಸಮಸ್ಯೆಗಳು ತಲೆದೋರಿದರೆ ನಮ್ಮ ಭಾರತ ದೇಶವಿಲ್ಲದೆ ಇತ್ಯರ್ಥವಾಗುದಿಲ್ಲ ಎಂಬುದರ ಮಟ್ಟಿಗೆ ದೇಶ ಬೆಳೆದಿದೆ ಎಂದರು.ನೂರು ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಜಗತ್ತಿನಲ್ಲಿಯೆ ಅತೀ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದ ಸಂಘವಾಗಿರುವುದು ಹೆಮ್ಮೆಯ ವಿಷಯ ಎಂದರು.ಸಾನಿಧ್ಯ ವಹಿಸಿದ್ದ ಪಡುವಲು ವೀರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ, ರಾಷ್ಟ್ರದ ಮೇಲೆ ಆಕ್ರಮಣ, ದಬ್ಬಾಳಿಕೆಯು ದೇಶದ ಹೊರಗಿನಿಂದ ಮತ್ತು ಒಳಗಡೆ ನಡೆಯುತ್ತಿದೆ. ಹಾಗಾಗಿ ನಾವು ಜಾತಿ, ಮತ, ಪಂಥ ಮೀರಿ ಒಗ್ಗೂಡಬೇಕಾದ ಅನಿವಾರ್ಯತೆ ಇದೆ. ಆಧುನಿಕ ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗಿ ಉಡುಗೆ ತೊಡುಗೆಗಳು, ಆಚಾರ ವಿಚಾರಗಳನ್ನು ಅನುಸರಿಸುವುದನ್ನು ತಡೆಯಬೇಕು. ನಮ್ಮ ದೇಶದ ಸಂಸ್ಕೃತಿ ಶ್ರೇಷ್ಠವಾಗಿದ್ದು ಮಕ್ಕಳಿಗೆ ತಿಳಿ ಹೇಳಬೇಕು. ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವಾಗಬೇಕು ಎಂದರು.ಕಾರ್ಯಕ್ರಮಕ್ಕೂ ಮೊದಲು ಶೋಭಯಾತ್ರೆಯು ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಗೋ ಪೂಜೆ ನೆರವೇರಿಸಿದ ನಂತರ ಮಂಗಳವಾದ್ಯ, ಮಹಿಳೆಯರಿಂದ ಪೂರ್ಣಕುಂಭ ಕಳಶ ಹೊತ್ತು ಸಾಗಿದರೆ, ವೀರಗಾಸೆ, ನಗಾರಿಯೊಂದಿಗೆ ಭಾರತ ಮಾತೆಯ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಸಾಗಿತು, ಟೈಗರ್ ಬ್ಲಾಕ್ ಮತ್ತು ಸುತ್ತಮುತ್ತಲಿನ ಯುವಕರು ಬೈಕ್ ರ್ಯಾಲಿ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಂಯೋಜಕರಾದ ಜೆ.ಬಿ. ಶಿವಸ್ವಾಮಿ, ಸಹ ಸಂಯೋಜಕ ಪೂರ್ಣೇಶ್, ಮುಖಂಡರಾದ ಸಿ.ಎನ್. ನಾಗಣ್ಣ, ರುದ್ರಪ್ಪ, ಶಂಭೇಗೌಡ, ವೀರಪ್ಪ, ಟಿ. ವೆಂಕಟೇಶ್, ನಟರಾಜು, ಮಹದೇವಪ್ಪ, ಸಂತೋಷ್, ಕನ್ನಡ ಪ್ರಮೋದ, ಜಯಂತ್, ಶ್ರೀಕಾಂತ್, ದೇವರಾಜು, ನಂದೀಶ್, ಚಂದ್ರಮೌಳಿ, ಮಹೇಶ್, ರೂಪೇಶ್, ರಾಜು, ಮುತ್ತುರಾಜು, ಸಿದ್ದನಾಯಕ, ಮಹೇಶ್, ಸೋಮೇಶ್, ಪಳನಿಸ್ವಾಮಿ, ವಿಶ್ವಾರಾಧ್ಯ, ನಾಗೇಶ್, ಗುರುಸ್ವಾಮಿ, ಮಾದರಾಜು, ಪೃಥ್ವಿ ಚಂದ್ರಶೇಖರ್, ಮಂಜುನಾಥ್ ಇದ್ದರು.-