ಹರಿಹರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಭಾರೀ ಜನಬೆಂಬಲ

| Published : May 02 2024, 01:36 AM IST / Updated: May 02 2024, 10:29 AM IST

ಸಾರಾಂಶ

ಹರಿಹರ ನಗರದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಅವರು ರೋಡ್ ಷೋ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶಿಸಲಾಯಿತು.

 ದಾವಣಗೆರೆ :  ಹರಿಹರ ನಗರದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಅವರು ರೋಡ್ ಷೋ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶಿಸಲಾಯಿತು.

ನಗರಕ್ಕೆ ವಿನಯಕುಮಾರ್‌ ಆಗಮಿಸಿದಾಗ ಸಾವಿರಾರು ಜನರು ಜಮಾಯಿಸಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆ ವಿನಯಕುಮಾರ ಪರ ಹಾಗೂ ಗ್ಯಾಸ್ ಸಿಲಿಂಡರ್‌ ಗುರುತಿಗೆ ಜೈಕಾರಗಳು ಮುಗಿಲುಮುಟ್ಟಿದವು. ಹರಿಹರ ಪಟ್ಟಣ ಸುತ್ತಮುತ್ತಲಿನಿಂದ ಮಾತ್ರವಲ್ಲ, ತಾಲೂಕಿನ ವಿವಿಧೆಡೆಯಿಂದಲೂ ಸಾವಿರಾರು ಜನರು ಆಗಮಿಸಿದ್ದರು. ಜನರಿಂದ ಹರಿಹರ ಪಟ್ಟಣದ ರಸ್ತೆಗಳು ತುಂಬಿ ಹೋಗಿದ್ದವು. ಎಲ್ಲೆಲ್ಲೂ ಜನಸಾಗರವೇ ಹರಿದು ಬಂದಿತ್ತು.

ಹರಿಹರ ಎಪಿಎಂಸಿ ಹರಿಹರೇಶ್ವರ ದೇವಸ್ಥಾನ ರಸ್ತೆ ಕೆ.ಇ.ಬಿ. ರಸ್ತೆ ಮಾರ್ಗವಾಗಿ ಹರಪನಹಳ್ಳಿ ಸರ್ಕಲ್, ಎ.ಕೆ. ಕಾಲೋನಿ ರಸ್ತೆ, ಹರ್ಲಾಪುರ ರಸ್ತೆ, ಶಿವಮೊಗ್ಗ ರಸ್ತೆ ಮಾರ್ಗವಾಗಿ ಜೆ ಸಿ ಬಡಾವಣೆ ನಾಲ್ಕನೇ ಮೇನ್ ಆಸ್ಪತ್ರೆ ರಸ್ತೆ ಮಾರ್ಗವಾಗಿ ಪಿ. ಬಿ. ರಸ್ತೆಯವರೆಗೆ ರೋಡ್ ಶೋ ನಡೆಸಲಾಯಿತು. ಹರಿಹರ ನಗರದಾದ್ಯಂತ ವಿನಯ್ ಕುಮಾರ್ ಭಾವಚಿತ್ರಗಳು, ಗ್ಯಾಸ್ ಸಿಲಿಂಡರ್ ಭಿತ್ತಿಪತ್ರಗಳು ರಾರಾಜಿಸಿದವು.

ಹರಿಹರ ತಾಲೂಕಿನ ಎಲ್ಲ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು, ಮಹಿಳೆಯರು, ಯುವಕರು, ರೈತರು, ಆಟೋ ಚಾಲಕರು, ಹಮಾಲರ ಸಂಘ, ಸಂಗೊಳ್ಳಿ ರಾಯಣ್ಣ ಯುವಕರ ಸಂಘ, ಕಾಳಿದಾಸ ನಗರದ ಯುವಕ ಸಂಘದ ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಬಿಬಿಎಂಪಿ ಮಾಜಿ ಮೇಯರ್ ಕೆ.ವೆಂಕಟೇಶ್ ಮೂರ್ತಿ, ನಿವೃತ್ತ ಕೆಎಎಸ್ ಅಧಿಕಾರಿಗಳಾದ ಕೊತ್ತಂಬರಿ ಸಿದ್ಧಪ್ಪ ಭಾನುವಳ್ಳಿ, ಕೆ.ರೇವಣಪ್ಪ ಕಮಲಪುರ, ಕುರುಬ ಸಮಾಜದ ರಾಜ್ಯ ಘಟಕದ ಮಾಜಿ ನಿರ್ದೇಶಕ ಟಿ.ಬಸವರಾಜ್, ನಾಗರಾಜ್ ಎಸ್. ಮೇರ್ವಾಡಿ, ಇಮ್ರಾನ್, ಕೆ.ಲಕ್ಷ್ಮಣ್, ಮುಬಾರಕ್, ನವಾಬ್, ಜಫಾರ್, ಸಾಹಿಲ್, ವಾಸೀಂ, ಇದಾಯತ್, ಅರ್ಫಾನ್, ಝೈಯದ್, ಕಾರ್ತಿಕ್, ಮಂಜುನಾಥ, ವಿನಯ್, ನದೀಮ್, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.

ಕೋಟ್‌ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದರೆ ಹರಿಹರ ತಾಲೂಕಿನಲ್ಲಿ ಎಷ್ಟೊಂದು ಜನಬೆಂಬಲ ಸಿಕ್ಕಿದೆ ಎಂಬುದು ಗೊತ್ತಾಗುತ್ತದೆ. ಎಲ್ಲ ವರ್ಗದ ಜನರು ತುಂಬಾನೇ ಪ್ರೀತಿ ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಮೇ 7ರಂದು ನಡೆಯುವ ಮತದಾನದ ವೇಳೆ ಹೆಚ್ಚಿನ ಮತಗಳು ಕ್ರಮ ಸಂಖ್ಯೆ 28, ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಬೀಳುವಂತೆ ಮಾಡಿ-  

ಜಿ.ಬಿ.ವಿನಯಕುಮಾರ್‌, ಪಕ್ಷೇತರ ಅಭ್ಯರ್ಥಿ