ಜಗತ್ತಿಗೆ ಯೋಗ ಪರಿಚಯಿಸಿದ್ದು ಭಾರತ: ಮಂಜುನಾಥ ಬ್ಯಾಲಹುಣಸಿ

| Published : Jun 22 2024, 12:47 AM IST

ಜಗತ್ತಿಗೆ ಯೋಗ ಪರಿಚಯಿಸಿದ್ದು ಭಾರತ: ಮಂಜುನಾಥ ಬ್ಯಾಲಹುಣಸಿ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗ ದೈಹಿಕ, ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಾಯವಾಗಿದ್ದು, ಪ್ರತಿದಿನ ಯೋಗ ಮಾಡುತಿದ್ದರೆ ನಿರೋಗಿಯಾಗಿ ಬದುಕಬಹುದು ಎಂದು ತಾಲೂಕು ವೈದ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕುಕನೂರು

ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದ ಹೆಮ್ಮೆ ಭಾರತದ್ದು. ಇಂದಿನ ಒತ್ತಡದ ಬದುಕಿನ ದಿನಮಾನಗಳಲ್ಲಿ ಯೋಗ ಒಂದು ಪರಿಣಾಮಕಾರಿ ಚಿಕಿತ್ಸೆ ಆಗಿದೆ. ಇದು ದೈಹಿಕ, ಮಾನಸಿಕ ಹಾಗೂ ಭೌತಿಕ ಬೆಳವಣಿಗೆಗೆ ಸಹಾಯವಾಗಿದ್ದು, ಪ್ರತಿದಿನ ಯೋಗ ಮಾಡುತಿದ್ದರೆ ನಿರೋಗಿಯಾಗಿ ಬದುಕಬಹುದು ಎಂದು ತಾಲೂಕು ವೈದ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪತಂಜಲಿ ಯೋಗ ತರಬೇತಿಯ ಜಿಲ್ಲಾ ಸಂಚಾಲಕ ಚಿದಾನಂದ ಪತ್ತಾರ, ಕೃಷ್ಣ ವಿದ್ಯಾಪತಿ, ವೀರಯ್ಯ ಉಳ್ಳಾಗಡ್ಡಿ, ಡಾ. ಜಂಬಣ್ಣ ಅಂಗಡಿ, ಡಾ. ಮಮತಾ ಇಲಕಲ್, ಗವಿಸಿದ್ದಪ್ಪ ಕರಮುಡಿ, ಸಿದ್ಧಾರೂಢ ಬಣ್ಣದಭಾವಿ, ಯಶೋದಾ, ಶಾರದಾ ಆರೇರ, ಪ್ರಭು ವಕ್ಕಳದ, ಖಾಜಾಸಾಬ, ಶಿವಯ್ಯ ಹಿರೇಮಠ ಇತರರಿದ್ದರು.ವಸತಿ ಶಾಲೆಯಲ್ಲಿ ಯೋಗಾಸನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾಯೋಗದಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಯೋಗ ಹೆಚ್ಚು ಸಹಕಾರಿಯಾಗಿದೆ. ಬಳೋಟಗಿ ವಸತಿ ಶಾಲೆ ಪ್ರಾಂಶುಪಾಲ ಜ್ಯೋತಿಶ್ವರ ಬೇಸ್ತರ ಹೇಳಿದರು.

ತಾಲೂಕಿನ ಬಳೋಟಗಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಶಾಲಾ ವಿದ್ಯಾರ್ಥಿನಿಯರಿಗೆ ಯೋಗಾಸನ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗ ಇಂದಿನ ಒತ್ತಡದ ಜೀವನದಲ್ಲಿ ಅತ್ಯಂತ ಮಹತ್ವ ಪಡೆದಿದೆ ಎಂದರು.ಬಳಿಕ ದೈಹಿಕ ಶಿಕ್ಷಕಿ ಸಾವಿತ್ರಿ ಡಂಬಳ ವಿದ್ಯಾರ್ಥಿನಿಯರಿಗೆ ನಾನಾ ಆಸನಗಳನ್ನು ಮಾಡಿಸಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಶಿಕ್ಷಕರಾದ ವಿಜಯಲಕ್ಷ್ಮೀ, ನಾಗರತ್ನಾ, ನಿರ್ಮಲಾ, ಶಶಿಕಲಾ, ನಾಗರಾಜ, ಹನುಮಪ್ಪ, ಶ್ರೀಕಾಂತ,ಶ್ರೀನಿವಾಸ ಮತ್ತಿತರರು ಇದ್ದರು.