ಸಾರಾಂಶ
- ಕೋಲಿ ಸಮಾಜದ ವತಿಯಿಂದ ರೈಲ್ವೆ ಖಾತೆ ಸಚಿವರಾದ ವಿ. ಸೋಮಣ್ಣರವರಿಗೆ ಮನವಿ
-------ಕನ್ನಡಪ್ರಭ ವಾರ್ತೆ ಯಾದಗಿರಿ
ಇಂಟರ್ ಸಿಟಿ ಸೇರಿ ಎಲ್ಲ ಎಕ್ಸಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ನೇತೃತ್ವದಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣವಾಗಿ ಒಂದು ದಶಕವೇ ಕಳೆದಿದ್ದು, ಜಿಲ್ಲಾ ಕೇಂದ್ರವಾಗಿ 18 ವರ್ಷಗಳು ಕಳೆದರೂ ಕೆಲವು ಎಕ್ಸಪ್ರೆಸ್ ರೈಲುಗಳು ನಿಲುಗಡೆ ಆಗುತ್ತಿಲ್ಲ. ಆದರೆ, ವಾಡಿ ಮತ್ತು ಸೇಡಂನಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ ಆಗುತ್ತಿದ್ದು, ಆದಾಯದಲ್ಲಿ ಗುಂತಕಲ್ ಮತ್ತು ತಿರುಪತಿ ಬಿಟ್ಟರೆ 2ನೇ ಆದಾಯದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವಿದ್ದರೂ 13 ಎಕ್ಸಪ್ರೆಸ್ ರೈಲುಗಳು ನಿಲ್ಲುತ್ತಿಲ್ಲ ಮತ್ತು ಕೊರೋನಾ ಸಮಯದಲ್ಲಿ ರದ್ದಾದ ಇಂಟರ್‌ಸಿಟಿ ಪ್ಯಾಸೆಂಜರ್ ರೈಲು ಇನ್ನುವರೆಗೂ ಓಡಿಸುತ್ತಿಲ್ಲ. ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವಂದೇ ಭಾರತ ನಿಲುಗಡೆಗೆ ಹಸಿರು ನಿಶಾನೆ ತೋರಿಸಿರುವುದು ಸ್ವಾಗತ. ಆದರೆ, ಈ ವಂದೇ ಭಾರತ ರೈಲಿನಿಂದ ಕಲ್ಯಾಣ ಕರ್ನಾಟಕ ಭಾಗದ ಜನಸಾಮಾನ್ಯರಿಗೆ ಕೂಲಿ ಕಾರ್ಮಿಕರಿಗೆ ಪ್ರಯಾಣಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಮೇಲೆ ತೋರಿಸಿದ ಎಲ್ಲಾ ಎಕ್ಸಪ್ರೆಸ್ ರೈಲು ಗಾಡಿಗಳು ಮತ್ತು ಇಂಟರ್‌ಸಿಟಿಯನ್ನು ತುರ್ತಾಗಿ ಆರಂಭ ಮಾಡಿ ನಿಲುಗಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ಒತ್ತಾಯಿಸಿದರು.ಈ ವೇಳೆ ಸಚಿವರು ಮನವಿ ಸ್ವೀಕರಿಸಿ ಮಾತನಾಡಿ, ಕೊರೋನಾದಲ್ಲಿ ರದ್ದಾಗಿದ್ದ ರೈಲುಗಳನ್ನು ಶೀಘ್ರದಲ್ಲೇ ಅವು ಮರು ಪ್ರಾರಂಭ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಉಳಿದ ರೈಲುಗಳನ್ನು ನಿಲುಗಡೆ ಮಾಡಲು ಹಂತ-ಹಂತವಾಗಿ ನಿಲ್ಲಿಸುವುದಾಗಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಹಣಮಂತ ಅರಕೇರಾ (ಗುಜ್ರಾತ್), ಜಿ. ವೆಂಕಟೇಶ ಯಾದಗಿರಿ, ನಾಗಪ್ಪ ಪೋತಾಲ್ ಯಾದಗಿರಿ, ಆಂಜನೇಯ ಬೆಳಗೇರಾ, ಬಾಬು ಖಾನ್, ಅಹ್ಮದ್ ಅಲಿ, ಮಹ್ಮದ್ ಇಮ್ರಾನ್, ಚಂದ್ರು ನಾಯ್ಕಲ್, ಪ್ರವೀಣ ತೋರಣತಿಪ್ಪಾ, ದುರ್ಗಪ್ಪ ಕೌಳೂರು, ಬನಶಂಕರ ಎಲ್ಹೇರಿ, ಸಾಬಯ್ಯ ಗುತ್ತೇದಾರ, ಶರಣು ನಾರಾಯಣಪೇಠ, ಶರಣು ಜೋತೆ, ಲಕ್ಷ್ಮಣ ಜಿನಕೇರಿ, ಭೀಮರಾಯ ಗಣಪೂರ, ರಫೀಕ್ ಪಟೇಲ್, ಮಹ್ಮದ್ ಇಮ್ರಾನ್, ಅಕ್ರಮ ಸಗರಿ, ರಫಿಕ್ ಪಟೇಲ್ ಇದ್ದರು.ಫೋಟೊ:
4ವೈಡಿಆರ್12: ಯಾದಗಿರಿಯಲ್ಲಿ ಇಂಟರ್ ಸಿಟಿ ಸೇರಿ ಎಲ್ಲಾ ಎಕ್ಸಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ನೇತೃತ್ವದಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು.