ಸಾರಾಂಶ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಮೇಲೆ ಯಜ್ಞೋಪವಿತ (ಜನಿವಾರ) ಕತ್ತರಿಸಿದ ಘಟನೆ ಮಾಸುವ ಮುನ್ನವೇ ಅಧಿಕಾರಿಗಳು ನೀಟ್ ಪರೀಕ್ಷೆಯಲ್ಲಿ ಜನಿವಾರ ತಗೆಸುವ ಮೂಲಕ ಜನಿವಾರ ಧಾರಿ ಸಮಾಜವನ್ನು ಸಿಡಿದೇಳುವ ಹಾಗೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜನಿವಾರ ಧಾರಿಗಳು ಸೋಮವಾರ ಗ್ರೇಡ್ -2 ತಹಸೀಲ್ದಾರ ಗೋಪಾಲ ಕಪನೂರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಜೇವರ್ಗಿ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಮೇಲೆ ಯಜ್ಞೋಪವಿತ (ಜನಿವಾರ) ಕತ್ತರಿಸಿದ ಘಟನೆ ಮಾಸುವ ಮುನ್ನವೇ ಅಧಿಕಾರಿಗಳು ನೀಟ್ ಪರೀಕ್ಷೆಯಲ್ಲಿ ಜನಿವಾರ ತಗೆಸುವ ಮೂಲಕ ಜನಿವಾರ ಧಾರಿ ಸಮಾಜವನ್ನು ಸಿಡಿದೇಳುವ ಹಾಗೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜನಿವಾರ ಧಾರಿಗಳು ಸೋಮವಾರ ಗ್ರೇಡ್ -2 ತಹಸೀಲ್ದಾರ ಗೋಪಾಲ ಕಪನೂರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆ ಉದ್ದೇಶಿಸಿ ಬ್ರಾಹ್ಮಣ ಸಮಾಜದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಅಧ್ಯಕ್ಷ ರಮೇಶಬಾಬು ವಕೀಲ್ ಮಾತನಾಡಿ, ನೀಟ್ ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಕಲಬುರಗಿ ನಗರದ ಸೆಂಟ್ ಮೇರಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಶ್ರೀಪಾದ ಸುಧೀರ ಪಾಟೀಲ ಅವರ ಜನಿವಾರವನ್ನು ಒತ್ತಾಯ ಪೂರಕವಾಗಿ ತೆಗೆದು ಪರೀಕ್ಷೆ ಬರೆಯಬೇಕೆಂದು ಜನಿವಾರ ತಗೆಸಿ ಪರೀಕ್ಷೆಗೆ ಬಿಟ್ಟಿದ್ದಾರೆ. ಸರ್ಕಾರ ತನ್ನ ಅಧಿಕಾರಿಗಳು ಮಾಡಿದ ತಪ್ಪಿಗೆ ಬೆಷರತ್ತಾಗಿ ಕ್ಷಮೆಯಾಚಿಸಬೇಕು, ಹೀನ ಕೃತ್ಯ ಎಸಗಿದ ಅಧಿಕಾರಿಗಳನ್ನು ಕೂಡಲೆ ಸೇವೆಯಿಂದ ಅಮಾನತ್ತುಗೋಳಿಸಬೇಕು ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಸುತ್ತೋಲೆ ಹೋರಡಿಸುವಂತೆ ಜನಿವಾರ ಧಾರಿ ಸಮಾಜ ಆಗ್ರಹಿಸಿದೆ ಎಂದರು.
ಈ ವಿದ್ಯಮಾನ ಸಂವಿಧಾನಕ್ಕೆ ಬಗೆದ ಅಪಚಾರ, ತಮ್ಮ ತಮ್ಮ ಧರ್ಮಾಚರಣೆ ಪ್ರತಿಯೊಬ್ಬರ ಹಕ್ಕು, ಆ ಹಕ್ಕು ಕಿತ್ತು ಕೊಳ್ಳಲು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಯಾವುದೇ ಹಕ್ಕಿಲ್ಲ ಎಂದು ಅವರು ಗುಡುಗಿದರು. ಯಾವುದೇ ಧಾರ್ಮಿಕ ಸಂಕೇತಗಳನ್ನು ಬಲವಂತವಾಗಿ ತೆಗೆದುಹಾಕುವುದು ಅಥವಾ ನಾಶಮಾಡುವುದು ವ್ಯಕ್ತಿಗತ ಮತ್ತು ಧಾರ್ಮಿಕ ಹಕ್ಕಿನ ಭಾರೀ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆಗೂ ಮುನ್ನ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಗ್ರೇಡ್ ೨ ತಹಸೀಲ್ದಾರ ಗೋಪಾಲ ಕಪನೂರ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿಪ್ರ ಸಮಾಜದ ತಾಲೂಕು ಘಟಕದ ಅಧ್ಯಕ್ಷ ರಮೇಶ ಬಾಬು ವಕೀಲ, ಶಾಮರಾವ ಕುಲಕರ್ಣಿ ರೆವನೂರ, ಜಗನ್ನಾಥ ಬಡಿಗೇರ, ಸತೀಶ ಸಾಹು ಠಾಕೂರ ಮದರಿ, ಶೈಲೇಂದ್ರ ದಾಯಪುಲೆ, ಅನಿಲಕುಮಾರ ಮಾನಜಿ, ರಾಜೇಂದ್ರ ಕುಲಕರ್ಣಿ, ಕಿಶನರಾವ ಕುಲಕರ್ಣಿ ಹೆಮನೂರ, ಹಣಮಂತರಾವ್ ಕುಲಕರ್ಣಿ ಕೂಟನೂರ, ಮಲ್ಲಿಕಾರ್ಜುನ ಪತ್ತಾರ, ರವೀಂದ್ರ ವಕೀಲ, ಪ್ರಕಾಶ ಅಲಾಳ, ನಟರಾಜ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ ಮಳ್ಳಿ, ಕರುಣಾಸಾಗರ ಪತ್ತಾರ, ಅಪ್ಪಾರಾವ್ ಪಾಟೀಲ್, ಮನೋಜ ಕುಲಕರ್ಣಿ, ಪಾರ್ಶುನಾಥ ಜೈನ್, ಮನೋಹರ್ ಸಿಂಗ್, ಪಾಂಡುರಂಗ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಜವಳಗಿ, ದೇವಿಂದ್ರ ವಡಗೇರಿ ಸೇರಿದಂತೆ ಹಿಂದೂಪರ ಸಂಘಟನೆಯ ಮುಖಂಡರು ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.