ವೈಚಾರಿಕ ಕ್ರಾಂತಿಯ ಹರಿಕಾರ ಕನಕದಾಸರು: ವಿನಾಯಕ್ ಸಾಗರ್

| Published : Nov 10 2025, 01:15 AM IST

ಸಾರಾಂಶ

ಕನಕದಾಸರು 16ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿಯ ಹರಿಕಾರನೆಂದು ಪ್ರಸಿದ್ಧನಾದವರು ಎಂದು ತಹಸೀಲ್ದಾರ್ ವಿನಾಯಕ್ ಸಾಗರ್ ಹೇಳಿದರು.

ತಾಲೂಕು ಆಡಳಿತದಿಂದ 538ನೇ ಕನಕದಾಸರ ಜಯಂತಿ

ಕನ್ನಡಪ್ರಭ ವಾರ್ತೆ, ಅಜ್ಜಂಪುರಅಜ್ಜಂಪುರ ಸುದ್ದಿ ಕನಕದಾಸರು 16ನೇ ಶತಮಾನದಲ್ಲಿ ವೈಚಾರಿಕ ಕ್ರಾಂತಿಯ ಹರಿಕಾರನೆಂದು ಪ್ರಸಿದ್ಧನಾದವರು ಎಂದು ತಹಸೀಲ್ದಾರ್ ವಿನಾಯಕ್ ಸಾಗರ್ ಹೇಳಿದರು.

ಅವರು ಅಜ್ಜಂಪುರ ತಾಲೂಕು ಪಂಚಾಯಿತಿಯಲ್ಲಿ ಕನಕ ನೌಕರರ ಬಳಗದ ಅಧ್ಯಕ್ಷ ಕೆ. ತಿಪ್ಪೇಶ್ ರವರ ಸಾರಥ್ಯದಲ್ಲಿ ನಡೆದ 538ನೇ ಕನಕದಾಸರ ಜಯಂತಿ ಉದ್ಘಾಟಿಸಿ ಮಾತನಾಡಿ, ಇಂದು ಒಬ್ಬ ವ್ಯಕ್ತಿ ಹಿನ್ನೆಲೆ ಏನು ಎಂದು ವಿಚಾರಿಸದೆ ಅವನ್ನ ಜಾತಿ ಬಗ್ಗೆ ವಿಚಾರಿಸುತ್ತಾರೆ. ಒಬ್ಬ ಸರ್ಕಾರಿ ಅಧಿಕಾರಿ ವರ್ಗವಾಗಿ ಅಧಿಕಾರಕ್ಕೆ ಬಂದರೆ ಆತ ಎಲ್ಲಿಯವನು ಯಾವ ಜಾತಿ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಜಾತಿ ವ್ಯವಸ್ಥೆಯಲ್ಲಿ ಕುರುಡಾಗಿ ಹೋಗಿರುತ್ತಾರೆ.

ಆದರೆ ಕನಕದಾಸರು ಜಾತಿ ವ್ಯವಸ್ಥೆ, ಮೇಲು-ಕೀಳು ಎಂಬ ತಾರತಮ್ಯದ ಬಗ್ಗೆ ತಮ್ಮ ಕೀರ್ತನೆಗಳಲ್ಲಿ ವಿಡಂಬನೆ ಮಾಡಿದ್ದಾರೆ. ನಮಗೆ ಇಂದು ಅವರ ಆದರ್ಶ, ಅವರು ಅನುಸರಿಸಿದ ಹೆಜ್ಜೆ ಗುರುತುಗಳು ನಮಗೆ ದಾರಿದೀಪವಾಗಬೇಕೆಂದು ಹೇಳಿದರು.

ನೌಕರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಪ್ರಾಥಮಿಕ ನುಡಿಯಲ್ಲಿ ಇಂದು ಸಮಾಜದಲ್ಲಿ ಮಹಾ ದರ್ಶನಿಕರನ್ನು ಒಂದು ಜಾತಿಯ ಸಮುದಾಯಕ್ಕೆ ಕಟ್ಟಿ ಹಾಕಿದ್ದಾರೆ. ಹುಟ್ಟಿನಿಂದ ಕುಲವಿಲ್ಲ ಮಾನವರೆಲ್ಲರೂ ಒಂದು ಒಂದೇ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಇಒ ಎಂ.ಕೆ. ವಿಜಯ್ ಕುಮಾರ್ ಮಾತನಾಡಿ ಈ ನಾಡಿನಲ್ಲಿ 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಗ್ಗೆ ವಿರೋಧಿಸಿದ ಬಸವಣ್ಣನ ನಂತರ 16ನೇ ಶತಮಾನದಲ್ಲಿ ಕನಕದಾಸರು ತಮ್ಮ ಕೀರ್ತನೆಗಳನ್ನು ಸಾಹಿತ್ಯದ ಮುಖಾಂತರ ಸಮಾಜದ ಮೇಲು-ಕೀಳು ತಾರತಮ್ಯದ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ.

ಅವರು ಬರೆದ ಮುಂಡಿಗೆಗಳು ಬಹಳ ಪ್ರಸಿದ್ಧಿ ಆಗಿರುತ್ತದೆ. ಪ್ರಧಾನ ಉಪನ್ಯಾಸ ಮಾಡಿದ ಡಾಕ್ಟರ್ ಆನಂದ್ ಕನಕದಾಸರ ಹುಟ್ಟಿನ ಚರಿತ್ರೆ ಮತ್ತು ರಚಿಸಿದ ಗ್ರಂಥಗಳ ಬಗ್ಗೆ ವಿವರಿಸಿ ಅಂತರಂಗ ಮತ್ತು ಬಹಿರಂಗ ಶುದ್ದಿ ಬಗ್ಗೆ ಕನಕದಾಸರು ಉಡುಪಿ ಯಲ್ಲಿನ ಕೃಷ್ಣನ ನಾಮ ಕೀರ್ತನೆಗಳಲ್ಲಿ ವಿವರಿಸಿರುತ್ತಾರೆ. ಕೆಪಿಟಿಸಿ ಸದಸ್ಯ ಜಿ. ನಟರಾಜ್ ಕೆಡಿಪಿ ಸದಸ್ಯದ ಕೆ. ಮಹೇಂದ್ರ ಚಾರ್ಜ್ ಅಜ್ಜಂಪುರ ಪಪಂ ಅಧ್ಯಕ್ಷ ಎ.ಜಿ. ರೇವಣ್ಣ, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಬಿ ರಂಗಸ್ವಾಮಿ, ಅತ್ತತ್ತಿ ಮಧು ಸೂಧನ್, ಜೋಗಿ ಪ್ರಕಾಶ್, ತೀರ್ಥ ಪ್ರಸಾದ್, ಅಣ್ಣಪ್ಪ, ಸುಮಲತಾ ಮಲ್ಲಿಕಾರ್ಜುನ್, ನಿಶಾರ ಅಹಮದ್ಅ ತಿಥಿಗಳಾಗಿ ಭಾಗವಹಿಸಿದ್ದರು,

ಇದೇ ಸಂದರ್ಭದಲ್ಲಿ ನಿವೃತ್ತ ನೌಕರರು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಸಮಾಜದ ಹಿರಿಯರಾದ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿಯನ್ನು ಗೌರವಿಸಲಾಯಿತು. ಕುಮಾರಸ್ವಾಮಿ ಸ್ವಾಗತಿಸಿ ಶಿವಕುಮಾರ್ ನಿರೂಪಣೆ ಮಾಡಿದರು.