ಕೊಲ್ಲೂರು: 2.5 ಲಕ್ಷ ರು. ಸರ ಕದ್ದ ಆರೋಪಿ ಬಂಧನ

| Published : Sep 29 2025, 03:02 AM IST

ಸಾರಾಂಶ

ನವರಾತ್ರಿಯ ಪ್ರಯುಕ್ತ ದೇವಸ್ಥಾನಕ್ಕೆ ಬಂದಿದ್ದ ದೇವಿಪ್ರಿಯಾ ಎಂಬವರು ಬ್ಯಾಗಿಲ್ಲಿಟ್ಟಿದ್ದ 3 ಪವನ್‌ ಹವಳದ ಸರವನ್ನು ಬ್ಯಾಗಿನಿಂದ ಕದ್ದಿದ್ದರು. ಈ ಬಗ್ಗೆ ಕೊಲ್ಲೂರು ಠಾಣಗೆ ಅವರು ದೂರು ನೀಡಿದ್ದರು. ಠಾಣೆಯ ಉಪನಿರೀಕ್ಷಕ ವಿನಯ್‌ ಎಂ. ಕೊರ್ಲಹಳ್ಳಿ ಮತ್ತವರ ತಂಡ ಸಿಸಿ ಕ್ಯಾಮೆರ ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.

ಕುಂದಾಪುರ: ಇಲ್ಲಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.26ರಂದು ಸುಮಾರು 2.50 ಲಕ್ಷ ರು. ಬೆಲೆಯ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಮಹಿಳೆಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ನವರಾತ್ರಿಯ ಪ್ರಯುಕ್ತ ದೇವಸ್ಥಾನಕ್ಕೆ ಬಂದಿದ್ದ ದೇವಿಪ್ರಿಯಾ ಎಂಬವರು ಬ್ಯಾಗಿಲ್ಲಿಟ್ಟಿದ್ದ 3 ಪವನ್‌ ಹವಳದ ಸರವನ್ನು ಬ್ಯಾಗಿನಿಂದ ಕದ್ದಿದ್ದರು. ಈ ಬಗ್ಗೆ ಕೊಲ್ಲೂರು ಠಾಣಗೆ ಅವರು ದೂರು ನೀಡಿದ್ದರು. ಠಾಣೆಯ ಉಪನಿರೀಕ್ಷಕ ವಿನಯ್‌ ಎಂ. ಕೊರ್ಲಹಳ್ಳಿ ಮತ್ತವರ ತಂಡ ಸಿಸಿ ಕ್ಯಾಮೆರ ಮತ್ತು ತಾಂತ್ರಿಕ ಸಹಾಯದಿಂದ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.

ಆರೋಪಿಯನ್ನು ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದ್ದು, ಮೂಲತಃ ತೆಲಂಗಾಣ ರಾಜ್ಯದ ಗಂಗಾರೆಡ್ಡಿ ಜಿಲ್ಲೆಯವಳಾಗಿದ್ದಾಳೆ. ಆಕೆ ಕದ್ದಿದ್ದ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿದ ಕೊಲ್ಲೂರು ಪೊಲೀಸರು ಬಗ್ಗೆ ಸಾರ್ವಜನಿರಿಂದ ಶ್ಲಾಘನೆ ವ್ಯಕ್ತವಾಗಿದೆ.