ಕೊಪ್ಪಳ ವಿವಿ ಕುಲಸಚಿವ ಪ್ರೊ.ಕೆ.ವಿ. ಪ್ರಸಾದ್, ಗಂಗಾವತಿಯ ಹನುಮೇಶ ವೈದ್ಯಗೆ ಸ್ಥಾನ

| Published : Oct 08 2023, 12:03 AM IST

ಕೊಪ್ಪಳ ವಿವಿ ಕುಲಸಚಿವ ಪ್ರೊ.ಕೆ.ವಿ. ಪ್ರಸಾದ್, ಗಂಗಾವತಿಯ ಹನುಮೇಶ ವೈದ್ಯಗೆ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸುವ ಜಗತ್ತಿನ ಖ್ಯಾತ ವಿಜ್ಞಾನಿಗಳ ವಾರ್ಷಿಕ ಪಟ್ಟಿಯಲ್ಲಿ ಬಳ್ಳಾರಿ- ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.

ಗಂಗಾವತಿ:

ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸುವ ಜಗತ್ತಿನ ಖ್ಯಾತ ವಿಜ್ಞಾನಿಗಳ ವಾರ್ಷಿಕ ಪಟ್ಟಿಯಲ್ಲಿ ಬಳ್ಳಾರಿ- ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಬ್ಬರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.

ಗಣಿತಶಾಸ್ತ್ರ ವಿಭಾಗದ ಪ್ರೊ.ಕೆ.ವಿ ಪ್ರಸಾದ್, ಗಂಗಾವತಿಯ ಪ್ರೊ. ಹನುಮೇಶ್ ವೈದ್ಯ ಅವರ ಹೆಸರು ಪಟ್ಟಿಯಲ್ಲಿದೆ. ಪ್ರೊ. ಕೆ.ವಿ. ಪ್ರಸಾದ್ ಪ್ರಸ್ತುತ ಕೊಪ್ಪಳದ ನೂತನ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಶ್ವದರ್ಜೆ ಸಂಶೋಧನಾ ಲೇಖನಗಳನ್ನು ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಎಚ್.ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್, ಸೈಟೇಷನ್ ಹೀಗೆ ಹಲವು ಸಂಯೋಜಿತ ಮಾನದಂಡ ಆಧರಿಸಿ ವಿಶ್ವದ ಉತ್ತಮ ಸಂಶೋಧಕರನ್ನು ಗುರುತಿಸಲಾಗಿದೆ.ಗಂಗಾವತಿಯವರಾದ ಹನುಮೇಶ ವೈದ್ಯ ಪ್ರಸ್ತುತ ಬಳ್ಳಾರಿ-ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಅದ್ಯಯನ ವಿಭಾಗ, ಗಣಕಯಂತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಗುಣಮಟ್ಟದ ಸಂಶೋಧನಾ ಲೇಖನ ಪ್ರಕಟಿಸಲು ಹೆಸರುವಾಸಿಯಾದ ಎಲ್ಸ್‌ವೀಯ‌ರ್ ಸಂಸ್ಥೆ ಸಹಭಾಗಿತ್ವದಲ್ಲಿ ಈ ಪಟ್ಟಿ ಬಿಡುಗಡೆಗೊಂಡಿದೆ. ಪ್ರಪಂಚದ ಸಂಶೋಧನಾಕಾರರಲ್ಲಿ ಶೇ.2ರಷ್ಟು ಖ್ಯಾತನಾಮ ವಿಜ್ಞಾನಿಗಳನ್ನು ಸಂಶೋಧನೆಗೆ ಸಂಬಂಧಿಸಿದ ವಿವಿಧ ವರ್ಗಗಳಲ್ಲಿ ವಿಂಗಡಿಸಿ ಪಟ್ಟಿ ಮಾಡಲಾಗಿತ್ತು.