ವೃತ್ತಿ ಕೌಶಲ್ಯದಿಂದ ಸ್ವಾಭಿಮಾನದ ಬದುಕು: ಪವಿತ್ರಾ

| Published : May 30 2024, 12:52 AM IST

ವೃತ್ತಿ ಕೌಶಲ್ಯದಿಂದ ಸ್ವಾಭಿಮಾನದ ಬದುಕು: ಪವಿತ್ರಾ
Share this Article
  • FB
  • TW
  • Linkdin
  • Email

ಸಾರಾಂಶ

ಆತ್ಮವಿಶ್ವಾಸದಿಂದ ಸ್ವತಂತ್ರ ಬದುಕನ್ನು ಕಟ್ಟಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸಬಹುದು ಎಂದು ಪವಿತ್ರಾ. ಎಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಅಗತ್ಯವಾಗಿದೆ ಎಂದು ನಂದಿ ಫೌಂಡೇಶನ್ ಬೆಂಗಳೂರಿನ ತರಬೇತಿದಾರರಾದ ಪವಿತ್ರಾ. ಎಲ್ ಹೇಳಿದರು.

ನಗರದ ಬಿ.ವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಘಟಕಗಳ ಅಡಿಯಲ್ಲಿ ಒಂದು ವಾರದ ಕೌಶಲ್ಯ ತರಬೇತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಮಹಿಳೆಯರಿಗೆ ಸಾಕಷ್ಟು ಸೌಲಭ್ಯಗಳು ಇವೆ, ತಮ್ಮೊಳಗಿನ ಕೌಶಲ್ಯವನ್ನು ಬಳಿಸಿಕೊಂಡು ಮಹಿಳೆ ಆತ್ಮವಿಶ್ವಾಸದಿಂದ ಸ್ವತಂತ್ರ ಬದುಕನ್ನು ಕಟ್ಟಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಎಸ್.ಜೆ.ಒಡೆಯರ್ ಮಾತನಾಡಿ, ಜೀವನದಲ್ಲಿ ಶಿಸ್ತು, ಸಮಯ ಪಾಲನೆ ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡು ಅಭಿವೃದ್ಧಿ ಹೊಂದಬೇಕು. ತಮ್ಮ ನೂನ್ಯತೆಗಳನ್ನು ಸರಿಪಡಿಸಿಕೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಉತ್ತಮವಾದ ಕೌಶಲ್ಯಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಪಿ.ಕೆ.ಚೌಗುಲಾ, ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಘಟಕದ ಸಂಯೋಜಕರಾದ ಸೀಮಾ ಚಾವುಸ ಪರಿಚಯಿಸಿ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ಲಕ್ಷ್ಮೀ ಪಾಟೀಲ, ಸೃಷ್ಟಿ ಹಡಪದ ಪ್ರಾರ್ಥಿಸಿದರು. ಸುವರ್ಣಾ ಪೂಜಾರಿ ವಂದಿಸಿದರು. ಪೂಜಾ ಆರ್ಕಸಾಲಿ ನಿರೂಪಿಸಿದರು.