ಸಾರಾಂಶ
-ಎನ್‌ಬಿಎಫ್‌ಸಿ ಬ್ಯಾಂಕ್ ಗಳಿಂದ ಕಾಯ್ದೆ ದುರುಪಯೋಗ: ಪ್ರತಿಭಟನೆಯಲ್ಲಿ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಎನ್‌ಬಿಎಫ್‌ಸಿ ಬ್ಯಾಂಕ್‌ಗಳು ಸರ್ಫೇಸಿ ಕಾಯ್ದೆ ದುರುಪಯೋಗ ಮಾಡಿಕೊಳ್ಳುತ್ತಿವೆ. ಇಂತಹ ಕಾಯ್ದೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ, ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮತ್ತಿತರರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ರೈತರು, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ (ಎಸಿ) ಕಚೇರಿಗೆ ತೆರಳಿ, ಎಸಿ ಸಂತೋಷ್ ಪಾಟೀಲ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಗ್ರಾಮೀಣ ರೈತರು, ಕೂಲಿ ಕಾರ್ಮಿಕರಿಗೆ ಹೊಸ ಮನೆ ನಿರ್ಮಿಸಲು, ಹಳೇ ಮನೆ ಮೇಲೆ ಎನ್‌ಬಿಎಫ್‌ಸಿ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಸಾಲ ನೀಡುವಾಗ ಎಲ್ಲ ಖಾಲಿ ಇರುವ ಫಾರಂಗಳ ಮೇಲೆ ಸಹಿ ಮಾಡಿಸಿಕೊಂಡು ಬ್ಯಾಂಕ್‌ಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಸರ್ಫೇಸ್ ಕಾಯ್ದೆಯಲ್ಲಿ ಬದಲಾವಣೆ ತರಬೇಕು ಅಥವಾ ಕಾನೂನಿನಲ್ಲಿ ಸಾಲಗಾರನಿಗೂ ಅವಕಾಶ ಇರುವಂತೆ ಉಪ ಕಾಯ್ದೆ ತರಬೇತು. ಇಲ್ಲವಾದರೆ ಬ್ರಿಟಿಷರು ಮಾಡಿರುವ ಇಂತಹ ಕಾನೂನನ್ನು ಮೊದಲು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದರು.ದಾವಣಗೆರೆ ಜಿಲ್ಲಾ, ತಾಲೂಕು ನ್ಯಾಯಾಲಯಗಳಲ್ಲಿ ದಾವೆ ಹಾಕದೇ, ಚೆನ್ನೈ, ಕೊಲ್ಕತ್ತಾ, ಮುಂಬೈ ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಎನ್‌ಬಿಎಫ್‌ಸಿ ಬ್ಯಾಂಕ್‌ಗಳು ದಾವೆ ಹಾಕುತ್ತವೆ. ಅಲ್ಲದೇ, ಅದೇ ನ್ಯಾಯಾಲಯಗಳಿಂದ ಜಪ್ತಿ ಆದೇಶ ತೆಗೆದುಕೊಂಡು ಇಲ್ಲಿ ಬಂದು ಜಪ್ತಿ ಮಾಡುತ್ತಾರೆ. ಇದರಿಂದ ಸಾಲ ಪಡೆದ ರೈತರು ತೀವ್ರ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಯಲೋದಹಳ್ಳಿ ರವಿಕುಮಾರ, ಹೂವಿನಮಡು ನಾಗರಾಜ, ರಾಜನಹಟ್ಟಿ ರಾಜು, ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ, ಭೀಮಣ್ಣ ಆನಗೋಡು, ಕೃಷ್ಣಮೂರ್ತಿ, ಮಲ್ಲಿಕಾರ್ಜುನ, ರಾಮಚಂದ್ರಪ್ಪ, ಮಾಯಕೊಂಡ ಪರಸಪ್ಪ, ತಿಪ್ಪಣ್ಣ ಇತರರು ಇದ್ದರು.- - -
(ಟಾಪ್ ಕೋಟ್) ಎನ್‌ಬಿಎಫ್‌ಸಿ ಬ್ಯಾಂಕ್‌ಗಳು ಸಾಲ ಪಡೆದವರು ಸಕಾಲಕ್ಕೆ ಒಂದು ಕಂತು ಮರುಪಾವತಿಸಲು ವಿಫಲವಾದರೂ ಮನೆಯ ಮುಂದೆ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೂ ಹಾಜರಿದ್ದು, ಕಂತು ಕಟ್ಟುವಂತೆ ಒತ್ತಡ ಹಾಕುತ್ತಾರೆ. ಇಂತಹ ಒತ್ತಡ, ಮಾನಸಿಕ ಕಿರುಕುಳದಿಂದ ನೊಂದು ದಾವಣಗೆರೆ ಜಿಲ್ಲೆಯಲ್ಲೇ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.- ಹುಚ್ಚವ್ವನಹಳ್ಳಿ ಮಂಜುನಾಥ, ರೈತ ಮುಖಂಡ
- - --1ಕೆಡಿವಿಜಿ2.ಜೆಪಿಜಿ:
ದಾವಣಗೆರೆ ಎಸಿ ಕಚೇರಿ ಎದುರು ರೈತ ಸಂಘ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.- - -
(ಲೀಡ್‌ಗೆ ಬಾಕ್ಸ್) ಹೋರಾಟಕ್ಕೆ ಬಂದಿದ್ದ ರೈತ ಮುಖಂಡ ಸಾವುದಾವಣಗೆರೆ: ಎನ್‌ಬಿಎಫ್‌ಸಿ ಬ್ಯಾಂಕ್‌ಗಳು ಸರ್ಫೇಸಿ ಕಾಯ್ದೆಯಿಂದ ರೈತರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ದಾವಣಗೆರೆಯಲ್ಲಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತ ಮುಖಂಡ ಹೋರಾಟ ಮುಗಿಯುತ್ತಿದ್ದಂತೆ ಎದೆನೋವು ಕಾಣಿಸಿಕೊಂಡು, ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಅವರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು, ಬಂಧುಗಳಿದ್ದಾರೆ.ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ರೈತ ಮಲ್ಲಿಗೇನಹಳ್ಳಿ ಹನುಮಂತಪ್ಪ (48) ಮೃತ ವ್ಯಕ್ತಿ. ದಾವಣಗೆರೆ ತಾಲೂಕು ಕಾರ್ಯದರ್ಶಿಯಾಗಿದ್ದ ಮಲ್ಲಿಗೇನಹಳ್ಳಿ ಹನುಮಂತಪ್ಪ ಹೋರಾಟದಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ನಂತರ ಎದೆನೋವು ಕಾಣಿಸಿಕೊಂಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
- - --1ಕೆಡಿವಿಜಿ5:ಮಲ್ಲಿಗೇನಹಳ್ಳಿ ಹನುಮಂತಪ್ಪ