ಸಾರಾಂಶ
ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿ ಸೇರಿ ನಾಡು-ನುಡಿಗಾಗಿ ಸೇವೆ ಸಲಿಸಿದ ಮಹನಿಯರಿಗೆ ಜೈಕಾರದ ಘೋಷಗಳನ್ನು ಕೂಗುತ್ತ ಹೆಜ್ಜೆಗಳನ್ನು ಹಾಕಿದರು.
ಗಜೇಂದ್ರಗಡ: ಪಟ್ಟಣದಲ್ಲಿ ಜ. ೨೦ ಹಾಗೂ ೨೧ರಂದು ನಡೆಯಲಿರುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಭುವನೇಶ್ವರಿ ಜ್ಯೋತಿ ರಥ ಯಾತ್ರೆಗೆ ಶನಿವಾರ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದರು.
ಇಲ್ಲಿನ ಎಪಿಎಂಸಿ ಬಳಿಯ ದಿ. ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿ ಹಳದಿ, ಕೆಂಪು ಬಣ್ಣದಿಂದ ಸಿಂಗರಿಸಿದ್ದ ಭುವನೇಶ್ವರಿ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ ಬಳಿಕ ಸಾಗಿದ ರಥಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು, ಸಾಹಿತಿಗಳು ಹಾಗೂ ರಾಜಕೀಯ ಮುಖಂಡರು, ತಾಯಿ ಭುವನೇಶ್ವರಿ, ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿ ಸೇರಿ ನಾಡು-ನುಡಿಗಾಗಿ ಸೇವೆ ಸಲಿಸಿದ ಮಹನಿಯರಿಗೆ ಜೈಕಾರದ ಘೋಷಗಳನ್ನು ಕೂಗುತ್ತ ಹೆಜ್ಜೆಗಳನ್ನು ಹಾಕಿದರು.ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಜ. ೨೦ ಹಾಗೂ ೨೧ ರಂದು ನಡೆಯಲಿರುವ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಜ್ಯೋತಿ ರಥಯಾತ್ರೆಗೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಿದ್ದಾರೆ. ರಥಯಾತ್ರೆಯು ಸ್ಥಳೀಯ ಕಾಲಕಾಲೇಶ್ವರ ವೃತ್ತದ ಮಾರ್ಗದಿಂದ ಬಸ್ ನಿಲ್ದಾಣ ಮುಂಭಾಗದಿಂದ ಹಾಲಕೆರೆ, ಕೊಡಗಾನೂರ, ವೀರಾಪೂರ, ಚಿಲಝರಿ, ರಾಂಪೂರ, ಹಿರೇಕೊಪ್ಪ ಮಾರ್ಗವಾಗಿ ವಿವಿಧ ಗ್ರಾಮಗಳ ಮೂಲಕ ಜ. ೧೮ರಂದು ಮಾರನಬಸರಿ ಹಾಗೂ ಜಕ್ಕಲಿ ಗ್ರಾಮವನ್ನು ತಲುಪಲಿದೆ. ಪುನಃ ಜ. ೧೯ರಂದು ಭುವನೇಶ್ವರಿ ತಾಯಿ ಭಾವಚಿತ್ರದ ಜತೆಗೆ ಸಮ್ಮೇಳನದ ಯಾತ್ರೆ ೧೦ ಕಲಾ ತಂಡಗಳ ಮೆರವಣಿಗೆಯೊಂದಿಗೆ ಜ. ೨೦ರಂದು ವೇದಿಕೆಗೆ ಆಗಮಿಸಲಿದೆ ಎಂದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ಕಸಾಪ ತಾಲೂಕಾಧ್ಯಕ್ಷ ಎ.ಪಿ. ಗಾಣಿಗೇರ, ಮುಖಂಡರಾದ ಸಿದ್ದಣ್ಣ ಬಂಡಿ, ಅಶೋಕ ಬಾಗಮಾರ, ಶಶಿಧರ ಹೂಗಾರ, ಎಚ್.ಎಸ್. ಸೋಂಪುರ, ವೀರಣ್ಣ ಶೆಟ್ಟರ, ಚಂಬಣ್ಣ ಚವಡಿ, ಸುಭಾನಸಾಬ ಆರಗಿದ್ದಿ, ವಿ.ಬಿ. ಸೋಮನಕಟ್ಟಿಮಠ, ವೆಂಕಟೇಶ ಮುದಗಲ್, ಬಿ.ಎಸ್. ಶೀಲವಂತರ, ಶರಣು ಪೂಜಾರ, ಸಿದ್ದಣ್ಣ ಚೋಳಿನ, ಶ್ರೀಧರ ಬಿದರಳ್ಳಿ, ಅರಿಹಂತ ಬಾಗಮಾರ, ಅಜ್ಜಪ್ಪ ವಂದಕುದರಿ, ಮೃತ್ಯುಂಜಯ ದಢೇಸೂರಮಠ, ರವಿ ಗಡೇದವರ, ಪುಂಡಲೀಕ ಕಲ್ಲಿಗನೂರ, ನಿಂಗಪ್ಪ ಕಾಶಪ್ಪನವರ, ತಾರಾಸಿಂಗ್ ರಾಠೋಡ, ಆರ್.ಕೆ. ಬಾಗವಾನ, ಗಣೇಶ ಗುಗಲೋತ್ತರ, ಎಚ್.ಬಿ. ಹೆರಕಲ್, ಹೂವಾಜಿ ಚಂದುಕರ, ಕೆ.ಎಸ್. ಸಾಲಿಮಠ, ಸುಮಗಂಲಾ ಇಟಗಿ, ರಾಜೇಶ್ವರಿ ಕಾಲವಾಡ ಸೇರಿ ಇತರರು ಇದ್ದರು.