ಸಾರಾಂಶ
ಪುರಸಭೆ ವಿಶೇಷ ಸಭೆಯಲ್ಲಿ ತೀರ್ಮಾನ । 15ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗೆ ಕ್ರಿಯಾ ಯೋಜನೆ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಕಾಮಗಾರಿ ಕೈಗೊಳ್ಳಲು 2025-26ನೇ ಸಾಲಿಗೆ 15ನೇ ಹಣಕಾಸು ಯೋಜನೆಯಡಿ 70 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ ಹೇಳಿದರು.
ನಗರದ ಪುರಸಭೆ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾರ್ಡ್‌ಗಳ ಅಭಿವೃದ್ಧಿಗೆ ವಿವಿಧ ಕಾಮಗಾರಿ ಕೈಗೊಳ್ಳಲು ಸಭೆ ತೀರ್ಮಾನಿಸಿತು. ಎಸ್‌ಎಫ್‌ಸಿ ಅನುದಾನದಡಿ 10 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದರು.
ಎಂಜಿನಿಯರ್ ದೇವರಾಜ್ ಅವರು ವಾರ್ಡಗಳಲ್ಲಿ ಅವಶ್ಯಕತೆ ಇರುವ ಕಾಮಗಾರಿಗಳ ಪಟ್ಟಿ ತಯಾರಿಸಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಅದಕ್ಕೆ ಸಭೆಯ ಸರ್ವಾನುಮತದಿಂದ ಒಪ್ಪಿಗೆ ನೀಡಿತು ಎಂದರುಪಟ್ಟಣದ ದುರ್ಗಿಗುಡಿ 7 ನೇ ಕ್ರಾಸ್‌ನ ರಸ್ತೆ ಅತಿ ಚಿಕ್ಕದಾಗಿದ್ದು, ಚರಂಡಿ ಕೂಡಾ ಸವೆದು ಹೋಗುತ್ತಿದೆ. ಇದರ ದುರಸ್ತಿಗೆ ಅನುದಾನ ಕೊಡಬೇಕು ಎಂದರು. ದುರ್ಗಿಗುಡಿ 5 ನೇ ಕ್ರಾಸ್‌ನಲ್ಲಿ ಎರಡು ಸಿಡಿಗಳ ಸ್ಲ್ಯಾಬ್‌ಗಳು ಹಾಳಾಗಿವೆ ಎಂದು ಸದಸ್ಯೆ ಸವಿತಾ ಮಹೇಶ್ ಸಭೆಯ ಗಮನಕ್ಕೆ ತಂದರು. ಎಂಜಿನಿಯರ್ ದೇವರಾಜ್ ಅವರು ಪಟ್ಟಣದಲ್ಲಿ ಒಟ್ಟಾರೆ 5 ಸ್ಲ್ಯಾಬ್ ಗಳು ಹಾಳಾಗಿದ್ದು ಅದರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಸಭಾಂಗಣ ನವೀಕರಣಕ್ಕೆ ಸಭೆ ಅಸ್ತು:ಪುರಸಭೆಯ ಸಭಾಂಗಣಕ್ಕೆ ‘ಯು’ ಮಾದರಿಯ ಉತ್ತಮ ಗುಣಮಟ್ಟದ ಟೇಬಲ್ ಕುರ್ಚಿಗಳನ್ನು ಅಳವಡಿಸಿ ಸಭಾಂಗಣ ನವೀಕರಣ ಮಾಡಲು ಎಲ್ಲಾ ಸದಸ್ಯರು ಒಪ್ಪಿಗೆ ನೀಡಬೇಕು ಎಂದು ಸಭೆಯ ಅಧ್ಯಕ್ಷರು ಮನವಿ ಮಾಡಿದರು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪಟ್ಟಣದಲ್ಲಿ ರಾಜಕಾಲುವೆ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಸದಸ್ಯ ಧರ್ಮಪ್ಪ ಸಭೆಯ ಗಮನಕ್ಕೆ ತಂದರು. ಅದಕ್ಕೆ ಮುಖ್ಯಾಧಿಕಾರಿ ಅವರು ಪುರಸಭೆ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ ಶುಲ್ಕಕ್ಕೆ ಸಂಬಂಧಿಸಿದ ₹11 ಲಕ್ಷ ಅನುದಾನವಿದ್ದು, ನಮ್ಮಲ್ಲಿ ಯಾವುದೇ ಕೆರೆಗಳು ಇಲ್ಲದಿರುವುದರಿಂದ ಈ ಹಣವನ್ನು ರಾಜಕಾಲುವೆ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದರು. ಅದಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.ಅಧ್ಯಯನ ಪ್ರವಾಸಕ್ಕೆ ಅಸ್ತು:
ಪುರಸಭೆಯ ಅವಧಿ ಮುಕ್ತಾಯ ಹಂತಕ್ಕೆ ಬಂದಿದ್ದು ಸದಸ್ಯರು ಅಧ್ಯಯನ ಪ್ರವಾಸಕ್ಕೆ ಹೋಗೋಣ ಎಂದು ಸದಸ್ಯ ಸುರೇಶ್ ಪ್ರಸ್ತಾಪಿಸಿದರು. ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಹೆಚ್ಚುವರಿ ಅನುದಾನ ಪಡೆದು ಅಧ್ಯಯನ ಪ್ರವಾಸ ಕೈಗೊಳ್ಳಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.ಸದಸ್ಯ ಬಾವಿಮನೆ ರಾಜಣ್ಣ ಅಕ್ರೋಷ:
ಪುರಸಭೆ ಸಭೆ ಸದಸ್ಯ ಬಾವಿಮನೆ ರಾಜಣ್ಣ ಅವರು ತಮ್ಮ ವಾರ್ಡ್‌ಗಳಲ್ಲಿ ಅನೇಕ ಬೇಡಿಕೆಗಳಿದ್ದು ಇಲ್ಲಿಯವರಿಗೆ ಕನಿಷ್ಠ 1 ಲಕ್ಷದ ಅಭಿವೃದ್ದಿ ಕಾರ್ಯ ನಡೆಸಿಲ್ಲ,ಬೀದಿ ದೀಪಗಳು ಹತ್ತದೆ ಜನ ಕತ್ತಲಲ್ಲಿ ಓಡಾಡುವಂತಾಗಿದೆ ಎಂದು ತೀವ್ರ ಅಕ್ಷೇಪ ವ್ಯಕ್ತಪಡಿಸಿದರು.ಸದಸ್ಯ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್, ಸದಸ್ಯರಾದ ಭಾವಿಮನೆ ರಾಜಣ್ಣ, ರಂಗನಾಥ್, ಬಾಬು ಹೋಬಳದಾರ್, ಧರ್ಮಪ್ಪ, ತನ್ವೀರ್, ಸವಿತಾ ಮಹೇಶ್ ಹುಡೇದ್ , ಸುಮಾ ಇಂಚರ ಮಂಜುನಾಥ್, ಸುಮಾ ಸತೀಶ್, ನಾಮಿನಿ ಸದಸ್ಯ ಚಂದ್ರಪ್ಪ ಪುರಸಭೆ ಅಧಿಕಾರಿಗಳು ಇದ್ದರು.